ಲಂಡನ್‌ ಮ್ಯಾನ್ಶನ್‌ ಖರೀದಿಸಿದ ಉದ್ಯಮಿ ರವಿ ರೂಯಿಯಾ
ಲಂಡನ್:ಬ್ರಿಟನ್‌ನ ಪ್ರತಿಷ್ಠಿತ, ಐಷಾರಾಮಿ ಮನೆ ಎಂದೇ ಖ್ಯಾತಿ ಪಡೆದ “ಲಂಡನ್‌ ಮ್ಯಾನ್ಶನ್‌”( )ಅನ್ನು ಭಾರತ ಮೂಲದ ಉದ್ಯಮಿ ರವಿ ರೂಯಿಯಾ ಖರೀದಿಸಿದ್ದಾರೆ.
ಈ ಮೂಲಕ ಬ್ರಿಟನ್‌ನ ವಿಲಾಸಿ ಮನೆಯೊಂದು ಭಾರತೀಯ ಉದ್ಯಮಿಯ ಪಾಲಾ ದಂತಾಗಿದೆ. ರವಿ ರೂಯಿಯಾ ಅವರು ವಿಲಾಸಿ ಮನೆಯನ್ನು 1,191 ಕೋಟಿ ರೂ. ಕೊಟ್ಟು ಖರೀದಿಸಿದ್ದಾರೆ ಎಂದು ತಿಳಿದುಬಂದಿದೆ.
ಲಂಡನ್‌ನ ರೆಜೆಂಟ್ಸ್‌ ಪಾರ್ಕ್‌ ಬಳಿಯ 150 ಪಾರ್ಕ್‌ ರಸ್ತೆಯಲ್ಲಿರುವ ಬೃಹತ್‌ ಹಾಗೂ ಐಷಾರಾಮಿ ಮನೆಯು ಇದುವರೆಗೆ ರಷ್ಯಾದ ಉದ್ಯಮಿ ಆಂಡ್ರೆ ಗೊಂಚರೆಂಕೋ ಅವರ ಒಡೆತನದಲ್ಲಿತ್ತು. ಗೊಂಚರೆಂಕೋ ಅವರು ಈ ಮನೆಯನ್ನು 2012ರಲ್ಲಿ 1,264 ಕೋಟಿ ರೂ. ಕೊಟ್ಟು ಖರೀದಿಸಿದ್ದರು. ಆದರೆ, ಅವರು ಮನೆಯನ್ನು ಭಾರತ ಮೂಲದ ಉದ್ಯಮಿಗೆ ಮಾರಾಟ ಮಾಡಿದ್ದಾರೆ.
ಲಂಡನ್‌ ಮ್ಯಾನ್ಶನ್‌ ಅನ್ನು ಮತ್ತಷ್ಟು ನವೀಕರಣ ಮಾಡಲಾಗುತ್ತಿದೆ. ಒಳ್ಳೆಯ ಹೂಡಿಕೆ ಎಂದು ಮನೆ ಖರೀದಿಸಿದ್ದಾರೆ” ಎಂದು ರವಿ ರೂಯಿಯಾ ಕುಟುಂಬದ ವಕ್ತಾರ ವಿಲಿಯಂ ರೆಗೋ ತಿಳಿಸಿದ್ದಾರೆ.
ರವಿ ರೂಯಿಯಾ ಅವರು ಎಸ್ಸಾರ್‌ ಗ್ರೂಪ್‌ನ ಸಹ ಮಾಲೀಕರಾಗಿದ್ದಾರೆ. ಎಸ್ಸಾರ್‌ ಗ್ರೂಪ್‌ ಜಾಗತಿಕ ಮಟ್ಟದ ಕಂಪನಿಯಾ ಗಿದ್ದು, ಶಶಿ ರೂಯಿಯಾ ಹಾಗೂ ರವಿ ರೂಯಿಯಾ ಸಹೋದರರು ಜಗತ್ತಿನ ಅತಿ ಶ್ರೀಮಂತರ ಪಟ್ಟಿಯಲ್ಲಿದ್ದಾರೆ.