ಲಂಡನ್‌ನಲ್ಲಿ ಆಗಸ್ಟ್‌ 6ರಂದು ಸೀರೆಯುಟ್ಟು ಮೆರವಣಿಗೆ
ಲಂಡನ್‌: ಭಾರತದಲ್ಲಿ ಪ್ರತಿವರ್ಷ ಆಗಸ್ಟ್‌ 7ರಂದು ರಾಷ್ಟ್ರೀಯ ಕೈಮಗ್ಗ ದಿನಾಚರಣೆ ಆಚರಿಸಲಾಗುತ್ತದೆ. ಈ ಬಾರಿ ವಿಶೇಷ ವಾಗಿ ಈ ದಿನಾಚರಣೆಯನ್ನು ಲಂಡನ್‌ನಲ್ಲೂ ನಡೆಸಲಾಗುತ್ತಿದೆ.
ಲಂಡನ್‌ನಲ್ಲಿ ವಾಸವಿರುವ ಭಾರತೀಯ ಮೂಲದ ಮಹಿಳೆಯರು ಆಗಸ್ಟ್‌ 6ರಂದು ಸೀರೆಯುಟ್ಟು ಮೆರವಣಿಗೆ ( ) ಸಾಗಲಿದ್ದಾರೆ.
ಬ್ರಿಟಿಷ್‌ ವುಮೆನ್‌ ಇನ್‌ ಸಾರೀಸ್‌ ಹೆಸರಿನ ಗುಂಪು ಈ ಸ್ಯಾರಿ ವಾಕಥಾನ್‌ ಅನ್ನು ಆಯೋ ಜಿಸುತ್ತಿದೆ. ಇದರಲ್ಲಿ ಭಾರತ ಮೂಲದ ಸುಮಾರು 500 ಮಹಿಳೆಯರು ಭಾಗವಹಿಸ ಲಿದ್ದಾರೆ ಎನ್ನಲಾಗಿದೆ. ಟ್ರಾಫಲ್ಗರ್‌ ಸ್ಕ್ವೇರ್‌ನಿಂದ ಆರಂಭವಾಗುವ ವಾಕಥಾನ್‌ 10 ಡೌನಿಂಗ್‌ ಸ್ಟ್ರೀಟ್‌ ಮೂಲಕ ಹಾದು ಹೋಗಿ ಲಂಡನ್‌ನ ವೆಸ್ಟ್‌ಮಿಮ್‌ಸ್ಟರ್‌ನಲ್ಲಿರುವ ಪಾರ್ಲಿಮೆಂಟ್‌ ಸ್ಕ್ವೇರ್‌ನಲ್ಲಿ ಅಂತ್ಯ ಗೊಳ್ಳಲಿದೆ.
“ಇಂದಿನ ಮಹಿಳೆಯರು ಆಧುನಿಕತೆ ವಿಚಾರದಲ್ಲಿ ಪ್ರಪಂಚವನ್ನು ಮೀರಿ ಬೆಳೆಯು ವುದಕ್ಕೆ ಪ್ರಯತ್ನಿಸುತ್ತಿದ್ದಾರೆ. ಸಂಸ್ಕೃತಿ ಯನ್ನು ವ್ಯಾಖ್ಯಾನಿಸುವ ಸೀರೆಯನ್ನು ಉಟ್ಟು ಎಲ್ಲ ಕೆಲಸವನ್ನು ಮಾಡುವುದಕ್ಕೆ ಸಿದ್ಧರಾಗಿದ್ದಾರೆ” ಎಂದು ಬ್ರಿಟಿಷ್‌ ವುಮೆನ್‌ ಇನ್‌ ಸಾರೀಸ್‌ ಗುಂಪಿನ ಸದಸ್ಯೆ ದೀಪ್ತಿ ಜೈನ್‌ ತಿಳಿಸಿದ್ದಾರೆ.
ವಾಕಥಾನ್‌ ಕಾರ್ಯಕ್ರಮದಲ್ಲಿ ಕೇರಳ ಮೂಲದ 30 ಮಹಿಳೆಯರು ಕೇರಳದ ಸಾಂಪ್ರದಾಯಿಕ ಸೆಟ್ಟು ಮುಂಡು ಮತ್ತು ಕೈಮಗ್ಗ ಸೀರೆಗಳನ್ನು ಪ್ರದರ್ಶಿಸಲಿದ್ದಾರೆ.