ಇಥಿಯೋಪಿಯಾ: ಫಿನೋಟ್ ಸೆಲಾಮ್‌ನಲ್ಲಿ ಸ್ಫೋಟ, 26 ಮಂದಿ ಸಾವು
ಅಡಿಸ್ ಅಬಾಬಾ:ಇಥಿಯೋಪಿಯಾದ ಫಿನೋಟ್ ಸೆಲಾಮ್ ಪ್ರದೇಶದಲ್ಲಿ ಸರ್ಕಾರಿ ಪಡೆಗಳು ಮತ್ತು ಸ್ಥಳೀಯ ಮಿಲಿಟಿಯಾಗುಂಪಿನ ನಡುವೆ ದೊಡ್ಡ ಪ್ರಮಾಣದಲ್ಲಿ ಕಾಳಗ ಸಂಭವಿಸಿದೆ.
ಮಿಲಿಟಿಯಾ ಗುಂಪುನಿಂದ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ 26 ಜನರು ಸಾವನ್ನಪ್ಪಿ ದ್ದಾರೆ. ಸ್ಫೋಟದಲ್ಲಿ 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಫಿನೋಟ್ ಸೆಲಂ ಜನರಲ್ ಆಸ್ಪತ್ರೆಯ ಸಿಇಒ ಮನಯೆ ತೆನಾವ್ ಹೇಳಿದ್ದಾರೆ.
ಒಟ್ಟು ಸಾವುನೋವುಗಳ ಸಂಖ್ಯೆ ಇನ್ನೂ ಅಸ್ಪಷ್ಟವಾಗಿದೆ ಎಂದು ವರದಿಯಾಗಿದೆ.
ಅಮ್ಹಾರಾ ಪ್ರದೇಶದಲ್ಲಿ ಸರ್ಕಾರಿ ಪಡೆಗಳು ಮತ್ತು ಫಾನೊ ಎಂದು ಕರೆಯಲ್ಪಡುವ ಸ್ಥಳೀಯ ಮಿಲಿಟಿಯ ನಡುವೆ ಭೀಕರ ಹೋರಾಟ ಪ್ರಾರಂಭವಾಗಿದೆ. ಈ ತಿಂಗಳ ಆರಂಭ ದಿಂದಲೇ ಅಲ್ಲಿನ ಸರ್ಕಾರಿ ಮತ್ತು ಬಂಡಾಯ ಗುಂಪುಗಳ ನಡುವೆ ಹೋರಾಟ ನಡೆಯು ತ್ತಿದೆ.
ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗವು –  ಆಗಸ್ಟ್ 3 ರಂದು ಉಂಟಾದ ಎರಡು ಗುಂಪುಗಳ ನಡುವಿನ ದೊಡ್ಡ ಪ್ರಮಾಣದ ವಿದ್ವಂಸಕ ಕೃತ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ. ಸತತವಾಗಿ ನಡೆಯುತ್ತಿರುವ ಘರ್ಷಣೆಗಳ ಹಿನ್ನೆಲೆಯಲ್ಲಿ ಇಥಿ ಯೋಪಿಯಾ ಸರ್ಕಾರ ಆಗಸ್ಟ್ 4 ರಂದು ಅಮ್ಹಾರಾ ಪ್ರದೇಶದಲ್ಲಿ ಆರು ತಿಂಗಳ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದರ ವರದಿ ಹೇಳಿದೆ.
ಇಥಿಯೋಪಿಯನ್ ಮಾನವ ಹಕ್ಕುಗಳ ಆಯೋಗದ ವರದಿ ಪ್ರಕಾರ, ಅಮ್ಹಾರಾ ಪ್ರಾಂತ್ಯದ ನಗರ ಮತ್ತು ಪಟ್ಟಣಗಳಲ್ಲಿ ದೊಡ್ಡ ಪ್ರಮಾಣದ ಘರ್ಷಣೆಗಳು ನಡೆಯುತ್ತಿವೆ. ಆಂತರಿಕ ಬಂಡಾಯದಲ್ಲಿ ಫಿರಂಗಿಗಳ ಬಳಕೆ ಮಾಡಲಾಗುತ್ತಿದೆ. ಈ ಪರಿಣಾಮ ನಾಗರಿಕ ಸಾವು- ನೋವುಗಳು ವರದಿ ಆಗುತ್ತಿವೆ.