’ಗೇಮ್ ಆಫ್ ಥ್ರೋನ್ಸ್‌’ ನಟ ಡ್ಯಾರೆನ್ ಕೆಂಟ್ ಸಾವು
ವಾಷಿಂಗ್ಟನ್‌: ಗೇಮ್ ಆಫ್ ಥ್ರೋನ್ಸ್‌ನಲ್ಲಿ ನಟಿಸಿದ್ದ ನಟ ಡ್ಯಾರೆನ್ ಕೆಂಟ್ (39) ಅವರು ದೀರ್ಘಕಾಲದ ಆರೋಗ್ಯ ಸಮಸ್ಯೆ ಯಿಂದ ಸಾವನಪ್ಪಿದ್ದಾರೆ.
ನಮ್ಮ ಆತ್ಮೀಯ ಸ್ನೇಹಿತ ಡ್ಯಾರೆನ್ ಕೆಂಟ್ ಶುಕ್ರವಾರ ನಿಧನರಾದರು ಎಂಬುದನ್ನು ತಿಳಿಸಲು ಕಷ್ಟವಾಗುತ್ತಿದೆ. ಇಂತಹ ಸಂಕಷ್ಟದ ಸಂದರ್ಭದಲ್ಲಿ ನಮ್ಮ ತಂಡ ಅವ ಕುಟುಂಬದೊಂದಿಗೆ ಇದೆ. ಸ್ನೇಹಿತನಿಗೆ ರಿಪ್‌ ಮಾಡಿ ಎಂಬ ಒಕ್ಕಣೆಯಿದೆ.
ಇಂಗ್ಲೆಂಡ್‌ ನ ಎಸೆಕ್ಸ್‌ ನಲ್ಲಿ ಹುಟ್ಟಿ ಬೆಳೆದ ಡ್ಯಾರೆನ್‌ ಕೆಂಟ್‌ 2008ರಲ್ಲಿ ತೆರೆ ಕಂಡ ಮಿರ್ಸ್‌ ಎಂಬ ಹಾರರ್‌ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಳಿಕ ಎಮ್ಮಿ ಪ್ರಶಸ್ತಿ ವಿಜೇತ ಗೇಮ್‌ ಆಫ್‌ ಥ್ರೋನ್ಸ್‌ ಸಿನಿಮಾದಲ್ಲಿ ಕಾಣಿಸಿಕೊಂಡರು.
