ಖಲಿಸ್ತಾನಿ ಉಗ್ರ ನಾಯಕ ಸುಖಾ ದುನೆಕೆ ಹತ್ಯೆ
ಒಟ್ಟಾವಾ:ಭಾರತ ಹಾಗೂ ಕೆನಾಡ ನಡುವೆ ಬಿಗುವಿನ ವಾತಾವರಣ ನಿರ್ಮಾಣವಾಗಿರುವ ನಡುವೆ ಕೆನಡಾದಲ್ಲಿ ಮತ್ತೊರ್ವ ಖಲಿಸ್ತಾನಿ ಉಗ್ರ ನಾಯಕ ಸುಖಾ ದುನೆಕೆ ಹತ್ಯೆಯಾಗಿದೆ.
ಮೊಗಾ ಜಿಲ್ಲೆಯಲ್ಲಿ ದವೀಂದರ್ ಬಾಂಬಿಹಾ ಗ್ಯಾಂಗ್‌ನ ಸುಖದುಲ್ ಸಿಂಗ್ ಅಲಿಯಾಸ್ ಸುಖ ದುನೆಕೆಯನ್ನು ಬುಧವಾರ ರಾತ್ರಿ ಹತ್ಯೆ ಮಾಡಲಾಗಿದೆ.
2017 ರಲ್ಲಿ ನಕಲಿ ಪಾಸ್‌ಪೋರ್ಟ್‌ನಲ್ಲಿ ಪಂಜಾಬ್‌ನ ಮೊಗಾದಿಂದ ಕೆನಡಾಕ್ಕೆ ಪಲಾಯನ ಮಾಡಿದ ಡುನೆಕೆ “ಎ” ವರ್ಗದ ದರೋಡೆಕೋರರಾಗಿದ್ದರು. ಆತ ಭಯೋತ್ಪಾದಕ ಅರ್ಷ್‌ದೀಪ್ ದಲ್ಲಾ ಅವರ ನಿಕಟ ಸಹಚರ ನಾಗಿದ್ದ ಮತ್ತು ಖಲಿಸ್ತಾನ್ ಮತ್ತು ಕೆನಡಾದೊಂದಿಗೆ ಸಂಪರ್ಕ ಹೊಂದಿರುವ 43 ದರೋಡೆಕೋರ ರಲ್ಲಿ ಈತನೂ ಒಬ್ಬರಾಗಿದ್ದ ಎನ್ನಲಾಗಿದೆ.
ಕೆನಡಾದ ವಿನ್ನಿಪೆಗ್ ನಗರದಲ್ಲಿ ಭಯೋತ್ಪಾದಕ ಸುಖದೂಲ್ ಸಿಂಗ್ ಹತ್ಯೆಯ ಹೊಣೆಯನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೊತ್ತುಕೊಂಡಿದೆ ಎಂದು ಫೇಸ್‌ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.