ಗಾಝಾ ತೊರೆಯಿರಿ: ಸುರಕ್ಷಿತ ಕಾರಿಡಾರ್ ಘೋಷಣೆ
ಇಸ್ರೇಲ್:ಗಾಝಾ ಮೇಲೆ ದಾಳಿ ಮಾಡುತ್ತಿರುವ ಇಸ್ರೇಲ್, ಅಲ್ಲಿರುವ ನಾಗರೀಕರು ಸುರಕ್ಷಿತವಾಗಿ ಸ್ಥಳಾಂತರ ಗೊಳ್ಳಲು 3 ಗಂಟೆಗಳ ಸುರಕ್ಷಿತ ಕಾರಿಡಾರ್ ಘೋಷಿಸಿದೆ.
ಗಾಝಾ ಪಟ್ಟಿಯ ನಿವಾಸಿಗಳಿಗೆ ತನ್ನ ಪಡೆಗಳು ನೆಲದ ದಾಳಿ ಪ್ರಾರಂಭಿಸುವ ಮೊದಲು ಕಡಲತೀರದ ಪ್ರದೇಶದ ದಕ್ಷಿಣ ಭಾಗಗಳಿಗೆ ಸ್ಥಳಾಂತರಗೊಳ್ಳು ವಂತೆ 24 ಗಂಟೆಗಳ ಅಂತಿಮ ಗಡುವು ನೀಡಿದ ನಂತರ, ಇಸ್ರೇಲ್ ಮಿಲಿಟರಿ ಈಗ ಉತ್ತರ ಗಾಝಾದಲ್ಲಿ ಸುರಕ್ಷಿತ ಕಾರಿಡಾರ್ ಅನ್ನು ತೆರೆದಿದೆ.
“ಗಾಜಾ ನಗರ ಮತ್ತು ಉತ್ತರ ಗಾಝಾದ ನಿವಾಸಿಗಳೇ, ಕಳೆದ ದಿನಗಳಲ್ಲಿ, ನಿಮ್ಮ ಸುರಕ್ಷತೆಗಾಗಿ ದಕ್ಷಿಣ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ನಾವು ನಿಮ್ಮನ್ನು ಒತ್ತಾಯಿಸಿದ್ದೇವೆ. ರಾತ್ರಿ 10 ರಿಂದ ಮಧ್ಯಾಹ್ನ 1 ರವರೆಗೆ ಐಡಿಎಫ್ ಈ ಮಾರ್ಗದಲ್ಲಿ ಯಾವುದೇ ಕಾರ್ಯಾಚರಣೆ ನಡೆಸುವುದಿಲ್ಲ ಎಂದು ನಾವು ನಿಮಗೆ ತಿಳಿಸಲು ಬಯಸುತ್ತೇವೆ” ಎಂದು ಇಸ್ರೇಲ್ ರಕ್ಷಣಾ ಪಡೆ ಪೋಸ್ಟ್ ಮಾಡಿದೆ.
ಉಕ್ರೇನ್ ಯುದ್ಧದ ಸಂದರ್ಭ ಸಿಲುಕಿದ್ದ ವಿವಿಧ ದೇಶಗಳ ನಾಗರೀಕರು ಸುರಕ್ಷಿತವಾಗಿ ಸ್ಥಳಾಂತರಗೊಳಿಸುವ ಸಲುವಾಗಿ ಸುರಕ್ಷಿತ ಕಾರಿಡಾರ್ ಅನ್ನು ರಷ್ಯಾ ಘೋಷಣೆ ಮಾಡಿತ್ತು.
