ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡಿ: ಆಂಟೋನಿಯೊ ಗುಟೆರಸ್
ನ್ಯೂಯಾರ್ಕ್:ಯಾವುದೇ ಷರತ್ತುಗಳಿಲ್ಲದೆ ಒತ್ತೆಯಾಳುಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹಮಾಸ್‌ಗೆ ಕರೆ ನೀಡಿದ್ದಾರೆ.
ಮೊದಲನೆಯದಾಗಿ “ಹಮಾಸ್‌ ಒತ್ತೆಯಾಳುಗಳನ್ನು ಯಾವುದೇ ಷರತ್ತುಗಳಿಲ್ಲದೆ ತಕ್ಷಣ ಬಿಡುಗಡೆ ಮಾಡಬೇಕು”. ಎರಡನೆಯದಾಗಿ “ಗಾಜಾದಲ್ಲಿರುವ ನಾಗರಿಕರ ಸಹಾಯಕ್ಕೆ ಇಸ್ರೇಲ್‌ ತಕ್ಷಣ ಧಾವಿಸಬೇಕು” ಎಂದು ಗುಟೆರೆಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.