ಇಂಧನ ಸಾಗಿಸುತ್ತಿದ್ದ ಬೋಟ್​ನಲ್ಲಿ ಬೆಂಕಿ: 16 ಮಂದಿ ಸಾವು
ದುರಂತದಲ್ಲಿ ಕನಿಷ್ಠ 11 ಜನರನ್ನು ರಕ್ಷಿಸಲಾಗಿದೆ.
ಎರಡು ದಿನಗಳ ಹಿಂದೆ ಇದೇ ನದಿಯಲ್ಲಿ ದೋಣಿ ಮುಳುಗಿ 40 ಮಂದಿ ಮೃತಪಟ್ಟಿದ್ದರು. ಸಾಮಾನ್ಯವಾಗಿ ಓವರ್‌ಲೋಡ್ ಆಗಿರುವ ತಾತ್ಕಾಲಿಕ ದೋಣಿ ಗಳ ಬಳಕೆಯಿಂದಾಗಿ ಇಲ್ಲಿ ಇಂತಹ ದುರಂತಗಳು ಸಾಮಾನ್ಯ ಎಂಬಂತಾಗಿದೆ ಎಂದು ವರದಿಯಾಗಿದೆ.
ದೇಶದ ವಾಯುವ್ಯದಲ್ಲಿರುವ ಬಹುಪಾಲು ಜನರು ಉತ್ತಮ ರಸ್ತೆಗಳ ಕೊರತೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರು ಸರಕು ಸಾಗಣೆ ಹಾಗೂ ಬೇರೆಡೆ ಹೋಗಲು ಕಾಂಗೋ ನದಿಯನ್ನೇ ಬಳಸುತ್ತಾರೆ.