ಕದನ ವಿರಾಮ ಆರಂಭ: 13 ಒತ್ತೆಯಾಳುಗಳ ಬಿಡುಗಡೆ
ವಿಳಂಬವು ಒತ್ತೆಯಾಳುಗಳ ಕುಟುಂಬ ಸದಸ್ಯರಲ್ಲಿ ಹಾಗೂ ಕದನ ವಿರಾಮದ ನಿರೀಕ್ಷೆಯಲ್ಲಿದ್ದ, 47 ದಿನಗಳಿಂದ ಭೀತಿಯ ಲ್ಲಿಯೇ ದಿನದೂಡುತ್ತಿರುವ ಗಾಜಾದ ಅಸಂಖ್ಯಾತ ನಿವಾಸಿಗಳಲ್ಲೂ ಆತಂಕವನ್ನು ಹೆಚ್ಚಿಸಿದೆ. ಕದನ ನಿರತ ಹಮಾಸ್ ಬಂಡು ಕೋರರು ಹಾಗೂ ಇಸ್ರೇಲ್ ಸೇನೆಯ ನಡುವೆ ಒತ್ತೆಯಾಳುಗಳ ಬಿಡುಗಡೆಗಾಗಿ ಒಡಂಬಡಿಕೆ ಮೂಡಿತ್ತು. ಇಸ್ರೇಲ್, ಅಮೆರಿಕ, ಕತಾರ್ ಇದಕ್ಕಾಗಿ ಮಧ್ಯಸ್ಥಿಕೆಯನ್ನು ವಹಿಸಿದ್ದವು.
250ಕ್ಕೂ ಅಧಿಕ ಇಸ್ರೇಲಿ ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಒಯ್ದಿತ್ತು. ಪ್ರತಿಯಾಗಿ ಗಾಜಾದಲ್ಲಿ ಹಮಾಸ್ ಇರುವ ಕೇಂದ್ರಗಳ ಮೇಲೆ ಬಾಂಬ್ ದಾಳಿಗಳನ್ನು ಇಸ್ರೇಲ್ ನಡೆಸಿದೆ. 11,000ಕ್ಕೂ ಅಧಿಕ ಮಂದಿ ಈ ದಾಳಿಗಳಲ್ಲಿ ಮೃತಪಟ್ಟಿದ್ದಾರೆ.