ಚಿಬಾ ಪ್ರಾಂತ್ಯದಲ್ಲಿ 5.4 ತೀವ್ರತೆಯ ಭೂಕಂಪ
ಟೋಕಿಯೊ :ಟೋಕಿಯೊದ ಪೂರ್ವ ಭಾಗದಲ್ಲಿರುವ ಚಿಬಾ ಪ್ರಾಂತ್ಯದಲ್ಲಿ ಗುರುವಾರ 5.4 ತೀವ್ರತೆಯ ಭೂಕಂಪ ಸಂಭವಿಸಿದೆ.
ಸ್ಥಳೀಯ ಕಾಲಮಾನ ಮಧ್ಯಾಹ್ನ 12.12 ರ ಸುಮಾರಿಗೆ 50 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದ್ದು, ಜಪಾನಿನ ಭೂಕಂಪನ ತೀವ್ರತೆಯ ಮಾಪಕ ದಲ್ಲಿ 4 ರಷ್ಟಿದೆ ಎಂದು ಜಪಾನ್ ಹವಾಮಾನ ಸಂಸ್ಥೆ ತಿಳಿಸಿದೆ.
ಭೂಕಂಪದ ಕೇಂದ್ರಬಿಂದುವು ಪೂರ್ವ ಚಿಬಾ ಪ್ರಾಂತ್ಯದಿಂದ 35.2 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 140.5 ಡಿಗ್ರಿ ಪೂರ್ವ ರೇಖಾಂಶದಲ್ಲಿತ್ತು.ಟೋಕಿಯೊದ ಎಲ್ಲಾ 23 ವಾರ್ಡ್ಗಳಲ್ಲಿ ಭೂಕಂಪನದ ಅನುಭವವಾಗಿದೆ.