 : ಶಾಲೆಗೆ ನುಗ್ಗಿ ಏಕಾಏಕಿ ಗುಂಡಿನ ದಾಳಿ; ವಿದ್ಯಾರ್ಥಿಗಳು ಸೇರಿ ನಾಲ್ವರು ಬಲಿ; ಬಾಲಕ ಅರೆಸ್ಟ್‌
ವಾಷಿಂಗ್ಟನ್‌: ಅಮೆರಿಕ( )ದ ಶಾಲೆಯೊಂದಲ್ಲಿ ಬಂದೂಕುಧಾರಿಯೊಬ್ಬ ನಡೆಸಿದ ಗುಂಡಿನ ದಾಳಿಗೆ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳದಿರುವ ಘಟನೆ ವರದಿಯಾಗಿದೆ. ಜಾರ್ಜಿಯಾದ ಪ್ರೌಢಶಾಲೆಯಲ್ಲಿ ಈ ಘಟನೆ ನಡೆದಿದ್ದು, ಅನೇಕರು ಗಂಭೀರವಾಗಿ ಗಾಯಗೊಂಡಿದ್ದು, ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ಯಾರೋ ಕಂಟ್ರೀಯ ವಿಂಡರ್‌ನಲ್ಲಿರುವ ಅಪಲಾಚಿ ಪ್ರೌಢ ಶಾಲೆಯಲ್ಲಿ ಬುಧವಾರ ಬೆಳಗ್ಗೆ 10:20ಕ್ಕೆ ಶೂಟೌಟ್‌ ನಡೆದಿದೆ. ಸುಮಾರು 1,900 ವಿದ್ಯಾರ್ಥಿಗಳಿರುವ ಈ ಶಾಲಗೆ ನುಗ್ಗಿದ ಬಂದೂಕುಧಾರಿಯೊಬ್ಬ ಏಕಾಏಕಿ ಗುಂಡು ಹಾರಿಸಿದ್ದಾನೆ. ಗುಂಡೇಟು ತಗುಲಿ ಇಬ್ಬರು ವಿದ್ಯಾರ್ಥಿಗಳು ಮತ್ತು ಇಬ್ಬರು ಶಿಕ್ಷಕರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಇನ್ನು ಘಟನೆಯಲ್ಲಿ ಒಂಬತ್ತು ಮಂದಿ ಗಂಭೀರವಾಗಿ ಗಾಯಗೊಂಡಿರುವ ವರದಿಯಾಗಿದೆ. ಈ ಶಾಲೆಯು ರಾಜ್ಯದ ರಾಜಧಾನಿಯಾದ ಅಟ್ಲಾಂಟಾದಿಂದ ಈಶಾನ್ಯಕ್ಕೆ ಸುಮಾರು 45 ಮೈಲಿಗಳು (70 ಕಿಲೋಮೀಟರ್) ವಿಂಡರ್ ಪಟ್ಟಣದಲ್ಲಿದೆ.
ಘಟನೆ ಬಗ್ಗೆ ಬಗ್ಗೆ ವರದಿಯಾಗುತ್ತಿದ್ದಂತೆ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಶೂಟರ್‌ನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಆತನನ್ನು ವಿಚಾರಣೆಗೊಳಪಡಿಸಲಾಗಿದ್ದು, ಘಟನೆಯ ಹಿಂದೆ ಯಾವುದೇ ಉದ್ದೇಶ ಇರಲಿಲ್ಲ. ಇದೊಂದು ಉದ್ದೇಶ ರಹಿತ ದಾಳಿಯಾಗಿದೆ. ಇನ್ನು ಶೂಟರ್‌ 14ಬಾಲಕನಾಗಿದ್ದು, ಈತ ಅದೇ ಶಾಲೆಯಲ್ಲಿ ಓಡುತಿದ್ದ ಎನ್ನಲಾಗಿದೆ. ಇನ್ನು ಶೂಟರ್‌ ಬಾಲಕನನ್ನುಕೋಲ್ಟ್‌ ಗ್ರೇ ಎಂದು ಗುರುತಿಸಲಾಗಿದೆ.
2023ರಲ್ಲೂ ಬಾಲಕನಿಂದ ಕುಕೃತ್ಯ
ಈತನನ್ನು ಈ ಹಿಂದೆಯೂ ಎಫ್‌ಬಿಐ ಪೊಲೀಸರು ಬೇರೊಂದು ಪ್ರಕರಣದಲ್ಲಿ ವಿಚಾರಣೆಗೊಳಪಡಿಸಿದ್ದರು ಎನ್ನಲಾಗಿದೆ. ಗ್ರೇ ಮತ್ತು ಆತನ ತಂದೆ ಕೈನಲ್ಲಿ ಗನ್‌ ಹಿಡಿದು ಬೆದರಿಕೆ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನನ್ನು ವಿಚಾರಣೆ ನಡೆಸಿ ಖಡಕ್‌ ವಾರ್ನಿಂಗ್‌ ನೀಡಲಾಗಿತ್ತು. ಬಾಲಕನಾಗಿದ್ದ ಕಾರಣ ಆತನನ್ನು ಅರೆಸ್ಟ್‌ ಮಾಡಲಾಗಿರಲಿಲ್ಲ. ಇನ್ನು ಈ ಗುಂಡಿನ ದಾಳಿಗೆ ಏನು ಕಾರಣ ಆತನ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
#       . .    .../t4xgv8Ibaq
ಅಮೆರಿಕದ ವಾಷಿಂಗ್ಟನ್ ನಗರದ ಬಳಿ ವೆಸ್ಟ್ ರಿಚ್ಲಂಡ್ ಪ್ರಾಥಮಿಕ ಶಾಲೆಯಲ್ಲಿ ಕಳೆದ ಏಪ್ರಿಲ್‌ನಲ್ಲಿ ಇದೇ ರೀತಿ ಗುಂಡಿನ ದಾಳಿ ನಡೆದಿತ್ತು. ಗುಂಡಿನ ದಾಳಿಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದು ಆರೋಪಿ ಎಸ್ಕೇಪ್‌ ಆಗಿದ್ದ. ಮತ್ತೊಂದೆಡೆ ಉತ್ತರ ಕೆರೋಲಿನಾ( )ದ ಮನೆಯೊಂದಕ್ಕೆ ಬಂದೂಕುಧಾರಿಯೊಬ್ಬ ನುಗ್ಗಿ ಶೂಟೌಟ್‌ ನಡೆಸಿದ್ದ. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಆತನನ್ನು ಹಿಡಿಯ ಮುಂದಾದರು. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ನಾಲ್ವರು ಪೊಲೀಸರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಸುದ್ದಿಯನ್ನೂ ಓದಿ:ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಗುಂಡಿನ ದಾಳಿ