    : ಸಿಂಗರ್‌ ಕರನ್‌ ಔಜಲಾ ಮೇಲೆ ಶೂ ಎಸೆತ
ಲಂಡನ್:ಇಂಗ್ಲೆಂಡ್‌ ರಾಜಧಾನಿ ಲಂಡನ್‌ ()ನಲ್ಲಿ ನಡೆದ ಸಂಗೀತ ಕಾರ್ಯಕ್ರಮ( ) ದಲ್ಲಿ ತೌಬಾ ತೌಬಾ ಹಾಡಿನ ಖ್ಯಾತಿಯ ಸಿಂಗರ್‌ ಕರನ್‌ ಔಜಲಾ (    ) ಅವರ ಮೇಲೆ ಶೂ ಎಸೆದ ಘಟನೆ ವರದಿಯಾಗಿದೆ.
           .../OKszJWTZB9
ಈ ವೇಳೆ, ಸ್ಥಳೀಯ ಭದ್ರತಾ ಸಿಬ್ಬಂದಿ ಈ ಕೃತ್ಯ ಎಸಗಿದವನನು ಬಂಧಿಸಿ ಮೈದಾನದಿಂದ ಹೊರಗೆ ಕರೆದುಕೊಂಡು ಹೋದರು. ಸಿಂಗರ್‌ ಕರನ್‌ ಅವರ ಮುಖದತ್ತ ಶೂ ಎಸೆದ ವಿಡಿಯೋ ವೈರಲ್‌ ಆಗಿದೆ. ಈ ವೇಲೆ ಸಿಂಗರ್‌ ಕರನ್‌ ಅವರು ಕಾರ್ಯಕ್ರಮವನ್ನು ಸ್ಥಗಿತಗೊಳಿಸಿದರು.
ಕರನ್‌ ಬೇಸರದಲ್ಲಿದ್ದ ವಿಡಿಯೋದಲ್ಲಿ, ವೇದಿಕೆಗೆ ಬಾ. ಈಗ ನಾವಿಬ್ಬರೂ ಒಂದರ ಹಿಂದೆ ಒಬ್ಬರು ಕಾರ್ಯಕ್ರಮ ನೀಡುವಾ…ನೀನು ಶೂ ಎಸೆಯುವಷ್ಟು ಕೆಟ್ಟದಾಗಿ ನಾನು ಹಾಡಿಲ್ಲ ಎಂದು ಶೂ ಎಸೆದವನಿಗೆ ಸವಾಲು ಹಾಕಿದ್ದಾರೆ.
ಇನ್ನೊಂದು ವಿಡಿಯೋದಲ್ಲಿ ಶೂ ಎಸೆದವನನ್ನು ಭದ್ರತಾ ಸಿಬ್ಬಂದಿ ಕ್ರೀಡಾಂಗಣದಿಂದ ಹೊರಗೆ ಕರೆದುಕೊಂಡು ಹೋಗುವುದನ್ನು ಕಾಣಬಹುದು. ಪತ್ರಕರ್ತ ಗಗನ್‌ ದೀಪ್‌( ) ಈ ವಿಡಿಯೋವನ್ನು ಟ್ವಟರ್‌ ನಲ್ಲಿ ಶೇರ್‌ ಮಾಡಿದ್ದಾರೆ.
ಘಟನೆ ನಡೆದ ಬೆನ್ನಲ್ಲೇ, ಟ್ವಿಟರ್‌(-)ನಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಪರಿಸ್ಥಿತಿಯನ್ನು ನಿಭಾಯಿಸಿದ ರೀತಿಗೆ ಓರ್ವ ಟ್ವಿಟರ್‌ ಬಳಕೆದಾರ, ಶೂ ಎಸೆದವನ ಜಗಳ ಮಾಡದೆ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಿದ್ದೀರಿ ಎಂದು ಬರೆದಿದ್ದಾರೆ. ಶೂ ಎಸೆದ ರೀತಿ ನೋಡಿದರೆ, ಆತ ಓಬ್ಬ ಕ್ರೀಡಾಪಟು ಆಗಿರಬೇಕು ಎಂದು ಇನ್ನೊಂದು ಕಮೆಂಟ್‌ ಹೇಳಿದೆ.
ಇದು ಪೂರ್ವನಿಯೋಜಿತ ಕೃತ್ಯವಲ್ಲ ಎಂದು ಇನ್ನೊಂದು ಕಮೆಂಟ್‌ ಹೇಳಿದೆ.
ಬಾಲಿವುಡ್‌ ನಟ ವಿಕ್ಕಿ ಕೌಶಲ್‌ ( ) ನಟನೆಯ ತೌಬಾ ತೌಬಾ ಯಶಸ್ಸಿನಿಂದ ಕರನ್‌ ಔಝಲಾ ಪ್ರಸಿದ್ದಿ ಪಡೆದರು. ಇದಕ್ಕೂ ಮುನ್ನ ಕರನ್‌ ಅವರು ಗಾಡ್‌ ಡಾಮ್ಸ್‌ 52 ಬಾರ್ಸ್‌ ಇತ್ಯಾದಿ ಚಿತ್ರಗಳಿಂದ ಹೆಸರುವಾಸಿದ್ದಾರೆ.