   : ವಯಸ್ಕರ ಸೈಟ್‌ʼನಲ್ಲಿ ಮ್ಯಾಥ್ಸ್ ಕ್ಲಾಸ್‌ ವಿಡಿಯೋ: ವರ್ಷಕ್ಕೆ ಎರಡು ಕೋಟಿ ಗಳಿಸುತ್ತಿದ್ದಾನೆ ಈ ಟ್ಯೂಟರ್‌
ವಯಸ್ಕರ ಕುರಿತಾದ ಸೈಟ್‌ ನಲ್ಲಿ ಗಣಿತ ಕ್ಲಾಸಿನ ವಿಡಿಯೋ ಕಂಡರೆ ಹೇಗನಿಸುತ್ತದೆ. ಇಂಥದ್ದೇ ಒಂದು ವಿನೂತನ ಪ್ರಯೋಗವನ್ನು ತೈವಾನ್‌ ದೇಶದ ಟ್ಯೂಟರ್‌( ) ನಡೆಸಿ, ಭಾರೀ ಯಶಸ್ಸು ಕಂಡಿದ್ದಾನೆ ಎಂದರೆ ಅಚ್ಚರಿಯಾಗದಿರದು.
ಹೌದು. ಈ ಶಿಕ್ಷಕನ ಹೆಸರು ಚಾಂಗ್‌ ಎಚ್ಸು ( ) ಎಂದು. ಗಣಿತದ ತರಗತಿಯ ( )ವಿಡಿಯೋ ಮಾಡಿ, ಆನ್‌ ಲೈನ್‌ ಶಿಕ್ಷಣ ನೀಡುತ್ತಿದ್ದಾರೆ. ಇದು ಸಾಮಾನ್ಯ ವಿಷಯವೇ. ಆದರೆ, ಇದರಲ್ಲಿ ವಿಭಿನ್ನ ಪ್ರಯೋಗ ಮಾಡಿ, ಶಿಕ್ಷಣ ಕ್ಷೇತ್ರವನ್ನೇ ಹುಬ್ಬೇರಿಸುವಂತೆ ಮಾಡಿದ್ದಾನೆ. ಕಳೆದ ಮೇ 2020ರಲ್ಲಿ ಮೊದಲ ಬಾರಿ ತನ್ನ ಕ್ಲಾಸಿನ ವಿಡಿಯೋ ಅನ್ನು ಪೋರ್ನ್‌ ಸೈಟಿಗೆ ಅಪ್‌ ಲೋಡ್‌ ಮಾಡಿದ್ದು, ಇದಕ್ಕೆ ಭಾರೀ ಲಾಭವನ್ನೇ ಪಡೆದಿದ್ದಾನೆ.
ಮಾಸ್ಟರ್‌ ಡಿಗ್ರಿ( )ಹಾಗೂ 15 ವರ್ಷಗಳ ಕಲಿಕೆಯಲ್ಲಿ ಅನುಭವ ಹೊಂದಿರುವ ಈ ಶಿಕ್ಷಕ, ಆರಂಭ ದಲ್ಲಿ ಯೂಟ್ಯೂಬ್‌ ನಲ್ಲಿ ವಿಡಿಯೋ ಅಪ್‌ಲೋಡ್‌ ಮಾಡುತ್ತಿದ್ದನಂತೆ. ಬಳಿಕ, ವೇದಿಕೆ ಬದಲಿಸಿ, ಪೋರ್ನ್‌ ಸೈಟಿಗೆ ಅಪ್‌ ಲೋಡ್‌ ಮಾಡಲಾರಂಭಿಸಿದ್ದಾನೆ. ಇದರ ಬೆನ್ನಲ್ಲೇ ಪ್ರತಿ ವರ್ಷಕ್ಕೆ ಸುಮಾರು 2,26,76,719 ರೂಪಾಯಿ (270000 ಡಾಲರ್) ಗಳಿಸುತ್ತಿದ್ದಾನೆ. ‌
ಇವರ ಪ್ರಯೋಗ ದೊಡ್ಡ ರೀತಿಯಲ್ಲಿ ಪರಿಣಾಮ ಬೀರಲಾರಂಭಿಸಿದೆ. ಇದಕ್ಕೆ ಹಲವು ವಿದ್ಯಾರ್ಥಿಗಳು ಕೂಡ ಸೇರ್ಪಡೆಯಾಗಿದ್ದಾರೆ.
ಈತನ ಸಾಮಾಜಿಕ ಜಾಲತಾಣ( ) ಖಾತೆಯು ವೆರಿಫೈ ಆಗಿದೆ. ಇಲ್ಲಿ ಪ್ಲೇ ಹಾರ್ಡ್‌, ಸ್ಟಡಿ ಹಾರ್ಡ್‌ ಎಂಭ ಘೋಷ್ಯ ಹಾಕಿದ್ದಾನೆ. ಈ ಕುರಿತಂತೆ ಇತರ ಶಿಕ್ಷಕರು ತಮ್ಮದೇ ಆದ ಅಭಿಪ್ರಾಯ ತಿಳಿಸಿದ್ದಾರೆ. ಹಲವಾರು ಮಕ್ಕಳು ಈ ಪೋರ್ನ್‌ ಸೈಟಿಗೆ ಚಂದಾದಾರರಾಗಿದ್ದಾರೆ. ಇಲ್ಲಿ ವಯಸ್ಕರ ವಿಡಿಯೋ ಅಪ್‌ಲೋಡ್‌ ಮಾಡಿದರೂ, ಅದನ್ನು ಕೂಡ ವೀಕ್ಷಿಸುವ ಸಾಧ್ಯತೆ ಇದೆ ಎಂದಿದ್ದಾರೆ.
ಈ ಶಿಕ್ಷಕನ ವಿಡಿಯೋ ಸುಮಾರು 40 ನಿಮಿಷದ್ದಾಗಿದ್ದು, ಸರಾಸರಿ ಪ್ರತಿ ಕ್ಲಿಪ್ಪನ್ನು ಕೂಡಾ 20 ಸಾವಿರ ಮಂದಿ ವೀಕ್ಷಿಸಿದ್ದಾರೆ. ಶೇ.60 ರಷ್ಟು ಮಂದಿ ಈ ಸೈಟನ್ನು ಮನೋರಂಜನೆಗಾಗಿ ಪರಿಗಣಿಸಿದ್ದಾರೆ. ಈ ಶಿಕ್ಷನ ಸಾಧನೆಗೆ ಹಲವು ಹಣಕಾಸಿನ ರೂಪದಲ್ಲಿ ಬಹುಮಾನಗಳು ಬಂದಿವೆ.
ನನಗೆ ಪೋರ್ನ್‌ ಹಬ್‌ನಲ್ಲಿ ಕ್ಲಾಸ್‌ ನೀಡುವುದು ಇಷ್ಟವಿಲ್ಲ. ಆದರೆ, ಇಡೀ ಜಗತ್ತು ತನ್ನನ್ನು ಗುರುತಿಸಬೇಕೆಂದು ಈ ಮಾರ್ಗ ಕಂಡುಕೊಂಡಿದ್ದೇನೆ, ಹಾಗೂ ನಾನು ಚೆನ್ನಾಗಿ ಕಲಿಸಬಲ್ಲೆ ಎಂದು ಹೇಳಲಿಚ್ಚಿಸುತ್ತೇನೆ ಎಂದು ಶಿಕ್ಷಕ ಹೇಳಿದ್ದಾನೆ.