 : ಮತ್ತೆ ಇಸ್ರೇಲ್‌ ಏರ್‌ಸ್ಟ್ರೈಕ್‌; ಹಮಾಸ್‌ ಟಾಪ್‌ ಲೀಡರ್‌ ಉಡೀಸ್‌
ಟೆಹ್ರಾನ್‌: ಇಸ್ರೇಲಿ ಸೇನೆ ಶನಿವಾರ ಮತ್ತೆ ಉತ್ತರ ಲೆಬನಾನ್‌ ಮೇಲೆ ವೈಮಾನಿಕ ದಾಳಿ( )ಯನ್ನು ಮುಂದುವರೆಸಿದ್ದು, ಹಮಾಸ್‌(  )ನ ಟಾಪ್‌ ಲೀಡರ್‌ನನ್ನು ಹೊಡೆದುರುಳಿಸಲಾಗಿದೆ. ಟ್ರಿಪೋಲಿಯಲ್ಲಿ ಈ ದಾಳಿ ನಡೆದಿದ್ದು, ಹಮಾಸ್‌ ನಾಯಕ ಸಯೀದ್ ಅತಲ್ಲಾ( ) ಹಾಗೂ ಆತನ ಕುಟುಂಬವನ್ನು ಇಸ್ರೇಲಿ ಸೇನೆ ಉಡೀಸ್‌ ಮಾಡಿದೆ.
ಹಮಾಸ್‌ನ ಸಶಸ್ತ್ರ ವಿಭಾಗ, ಅಲ್-ಕಸ್ಸಾಮ್ ಬ್ರಿಗೇಡ್‌ಗಳ ನಾಯಕ ಸಯೀದ್ ಅತಲ್ಲಾ, ಉತ್ತರ ಲೆಬನಾನಿನ ನಗರವಾದ ಟ್ರಿಪೋಲಿಯಲ್ಲಿರುವ ಪ್ಯಾಲೇಸ್ಟಿನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಹತನಾಗಿದ್ದಾನೆ. ಆತನ ಜತೆಗೆ ಆತನ ಮೂವರು ಕುಟುಂಬಸ್ಥರೂ ಸಾವನ್ನಪ್ಪಿದ್ದಾರೆ ಎಂದು  ಹಮಾಸ್ ಮೂಲಗಳು ತಿಳಿಸಿವೆ.. ದಾಳಿಯ ಬಗ್ಗೆ ಇಸ್ರೇಲ್ ಸೇನೆಯು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಇಸ್ರೇಲಿ ಸೇನೆಯು ದಕ್ಷಿಣ ಲೆಬನಾನಿನ ಒಡೈಸ್ಸೆಹ್ ಪಟ್ಟಣಕ್ಕೆ ನುಸುಳಲು ಪ್ರಯತ್ನಿಸುತ್ತಿದೆ ಎಂದು ಹೆಜ್ಬುಲ್ಲಾ ಹೇಳಿಕೆ ನೀಡಿದ್ದು, ಆ ಪ್ರದೇಶದಲ್ಲಿ ಘರ್ಷಣೆ ಏರ್ಪಟ್ಟಿದೆ. ಇಸ್ರೇಲಿ ಸೇನೆಯು ಖಿಯಾಮ್ ನಗರ ಮತ್ತು ದಕ್ಷಿಣ ಲೆಬನಾನ್‌ನ ಕಾಫರ್ ಕಿಲಾ ಹೊರವಲಯದಲ್ಲಿ ಫಿರಂಗಿ ಶೆಲ್ ದಾಳಿ ನಡೆಸಿದೆ ಎನ್ನಲಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರು ತಮ್ಮ ಶುಕ್ರವಾರದ ಧರ್ಮೋಪದೇಶದಲ್ಲಿ “ಇಸ್ರೇಲ್ ಹೆಚ್ಚು ಕಾಲ ಉಳಿಯುವುದಿಲ್ಲ” ಮತ್ತು “ಇರಾನ್ ಹಿಂದೆ ಸರಿಯುವುದಿಲ್ಲ” ಎಂದು ಎಚ್ಚರಿಸಿದ ನಂತರ ಇಸ್ರೇಲ್‌ ಈ ದಾಳಿಯನ್ನು ನಡೆಸಿದೆ.
ನಸ್ರಲ್ಲಾನ ಉತ್ತರಾಧಿಕಾರಿಯೂ ಹತ್ಯೆ
ಇಸ್ರೇಲ್‌ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹತನಾದ ಹೆಜ್ಬುಲ್ಲಾ ನಾಯಕ ಹಸನ್‌ ನಸ್ರಲ್ಲಾ( )ನ ಉತ್ತಾರಾಧಿಕಾರ ಎಂದೇ ಹೇಳಲಾಗುತ್ತಿದ್ದ ಮತ್ತೊರ್ವ ಹೆಜ್ಬುಲ್ಲಾ ಕಮಾಂಡರ್‌ ಹಶೆಂ ಸಫೀದ್ದೀನ್‌( )ನನ್ನು ಹೊಡೆದುರುಳಿಸಲಾಗಿದೆ ಎಂದು ವರದಿಯಾಗಿದೆ. ಬೈರುತ್‌ನಲ್ಲಿ ಸರಣಿ ವೈಮಾನಿಕ ದಾಳಿಯಲ್ಲಿ ಈತ ಹತನಾಗಿದ್ದಾರೆ ಎನ್ನಲಾಗಿದೆ. ಆದರೆ ಇಸ್ರೇಲ್‌ ಸೇನೆ ಇದನ್ನು ಇನ್ನು ಖಚಿತ ಪಡಿಸಿಲ್ಲ.
1960 ರ ದಶಕದ ಆರಂಭದಲ್ಲಿ ದಕ್ಷಿಣ ಲೆಬನಾನ್‌ನಲ್ಲಿ ಜನಿಸಿದ ಹಶೆಮ್ ಸಫೀದ್ದೀನ್‌ನನ್ನು ಹೆಜ್ಬುಲ್ಲಾದ ಸ್ಥಾಪಕ ಸದಸ್ಯರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರು 1980 ರ ದಶಕದಲ್ಲಿ ಲೆಬನಾನ್‌ನ ಅಂತರ್ಯುದ್ಧದ ಸಮಯದಲ್ಲಿ ಹೆಜ್ಬುಲ್ಲಾ ಉಗ್ರ ಸಂಘಟನೆಗೆ ಸೇರಿದ್ದ. ಅಲ್ಲದೇ ನಸ್ರಲ್ಲಾನ ಜತೆ ಜತೆಗೆ ಆತನಿಗೆ ಸರಿಸಮಾನನಾಗಿ ಬೆಳೆದು ನಿಂತಿದ್ದ.
ಶಿಯಾ ಧರ್ಮಗುರುವಿನ ಸ್ಥಾನಮಾನವನ್ನು ಸೂಚಿಸುವ ಕಪ್ಪು ಪೇಟವನ್ನು ಧರಿಸುವುದಕ್ಕೆ ಹೆಸರುವಾಸಿಯಾದ ಸಫೀದ್ದೀನ್ ಮಿಲಿಟರಿ ಕಾರ್ಯಾಚರಣೆಗಳ ಮೇಲ್ವಿಚಾರಣೆ ಮತ್ತು ರಾಜಕೀಯ ಸೇರಿದಂತೆ ಹೆಜ್ಬುಲ್ಲಾದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾನೆ. 1995 ರಲ್ಲಿ, ಅವರು ಹೆಜ್ಬೊಲ್ಲಾದ ಅತ್ಯುನ್ನತ ಆಡಳಿತ ಮಂಡಳಿಯಾದ ಕನ್ಸಲ್ಟೇಟಿವ್ ಅಸೆಂಬ್ಲಿಗೆ ಏರಿದ ಈತ ಮಿಲಿಟರಿ ಚಟುವಟಿಕೆಗಳಿಗೆ ಜವಾಬ್ದಾರರಾಗಿರುವ ಜಿಹಾದಿ ಕೌನ್ಸಿಲ್‌ನ ಮುಖ್ಯಸ್ಥನಾಗಿದ್ದ. 1998 ರ ಹೊತ್ತಿಗೆ, ಅವರು ಪಕ್ಷದ ಕಾರ್ಯಕಾರಿ ಮಂಡಳಿಯನ್ನು ಮುನ್ನಡೆಸಲು ಆಯ್ಕೆಯಾದರು,
ಈ ಸುದ್ದಿಯನ್ನೂ ಓದಿ: : ಹೆಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾನ ಉತ್ತರಾಧಿಕಾರಿಯನ್ನೂ ಹೊಡೆದುರುಳಿಸಿದ ಇಸ್ರೇಲ್‌