 : ರೀಲ್ಸ್ ಮಾಡುತ್ತಿದ್ದಾಗಲೇ ಅಂಡರ್‌ಪಾಸ್‌ನಲ್ಲಿ ಬಿದ್ದು ರಷ್ಯಾದ ಟಿಕ್ ಟಾಕ್ ತಾರೆ ಸಾವು
ಮಾಸ್ಕೋ:ರೀಲ್ಸ್ ಮಾಡುತ್ತಿದ್ದಾಗಲೇ ರಷ್ಯಾದ ಟಿಕ್ ಟಾಕ್ ತಾರೆ (  ) ಅಂಡರ್ ಪಾಸ್ ನಲ್ಲಿ ಬಿದ್ದು ಮೃತಪಟ್ಟ ಘಟನೆ ನಡೆದಿದೆ. 27 ವರ್ಷದ ಅರೀನಾ ಗ್ಲಾಜುನೋವಾ ( ) ಜಾರ್ಜಿಯಾದ () ಟಿಬಿಲಿಸಿಯಲ್ಲಿ ಅಂಡರ್‌ಪಾಸ್‌ನಲ್ಲಿ () ಬಿದ್ದು ಸಾವನ್ನಪ್ಪಿದ್ದಾರೆ. ಇದರ ವಿಡಿಯೋ ( ) ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತನ್ನ ಸ್ನೇಹಿತರೊಂದಿಗೆ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದಾಗ ಸುರಂಗಮಾರ್ಗದ ಮೆಟ್ಟಿಲುಗಳ ಮೊಣಕಾಲು ಎತ್ತರದ ಗೋಡೆಯನ್ನು ಮುಗ್ಗರಿಸಿ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಎಕ್ಸ್ ನಲ್ಲಿ ಇದರ ವಿಡಿಯೋ ವೈರಲ್ ಆಗಿದ್ದು, ಸುರಕ್ಷೆತೆಯ ಕುರಿತು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ.
ವೈರಲ್ ( ) ಆಗಿರುವ ವೀಡಿಯೊದಲ್ಲಿ ಅರೀನಾ ಅವರು ಟಿಬಿಲಿಸಿಯಲ್ಲಿ ಸುತ್ತಾಡುತ್ತಿರುವಾಗ ಅವರ ಸ್ನೇಹಿತೆಯೊಂದಿಗೆ ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದರು. ಅರೀನಾ ರಷ್ಯಾದ ಬಾಯ್‌ಬ್ಯಾಂಡ್ ಹಂಗರ್ ಬಾಯ್ಸ್‌ನಿಂದ ‘ಫಾರ್ ದಿ ಲಾಸ್ಟ್ ಟೈಮ್’ ಹಾಡು ಹಾಕಿ ರೀಲ್ಸ್ ಮಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಅರೀನಾ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ತಲೆಗೆ ಗಂಭೀರವಾಗಿ ಏಟು ಬಿದ್ದಿದ್ದು, ಕುತ್ತಿಗೆ ಮುರಿದಿದ್ದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅರೀನಾ ಸಾವಿನ ಬಳಿಕ ಸ್ಥಳದಲ್ಲಿ ಸ್ಮಾರಕವನ್ನು ಇರಿಸಲಾಗಿದೆ. ಭಯಾನಕ ಘಟನೆ ವಿಡಿಯೋದಲ್ಲಿ ಚಿತ್ರೀಕರಣವಾಗಿದೆ. ಅರೀನಾ ಕಾಂಕ್ರೀಟ್ ಮೆಟ್ಟಿಲುಗಳ ಕೆಳಗೆ ಬೀಳುತ್ತಿದ್ದಂತೆ ಆಕೆಯ ಸ್ನೇಹಿತೆಯ ಪ್ರತಿಕ್ರಿಯೆಯನ್ನು ವಿಡಿಯೋದಲ್ಲಿ ಕಾಣಬಹುದು. ಘಟನೆಯಲ್ಲಿ ಅರೀನಾ ಕಿರುಚುವುದನ್ನು ಕೇಳಬಹುದು.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋಗೆ ಅನೇಕರು ಪ್ರತಿಕ್ರಿಯೆ ನೀಡಿದ್ದು, ʼಕತ್ತಲಲ್ಲಿ ನಿಮಗೆ ತಡೆಗೋಡೆ ಕಾಣಲಿಲ್ಲವೇ?ʼ ಎಂದು ಒಬ್ಬರು ಪ್ರಶ್ನಿಸಿದ್ದಾರೆ. ಇನ್ನೊಬ್ಬರು, ʼಇದೇ ಮೊದಲ ಬಾರಿಗೆ ಯಾರಾದರೂ ಇಲ್ಲಿ ಬಿದ್ದಿದ್ದು ಎಂದು ಕೇಳಿದರೆ ಆಶ್ಚರ್ಯವಾಗುತ್ತದೆʼ ಎಂದು ಹೇಳಿದ್ದಾರೆ.
:                  ’           , ,   27The 24--         “   ”…../4KZ5yzTNdz
ಕೆಲವರು, “ಅಲ್ಲಿ ಯಾವುದೇ ಭದ್ರತೆ ಕೈಗೊಂಡಿಲ್ಲ. ಕೆಲವೇ ಇಂಚುಗಳಷ್ಟು ಎತ್ತರದ ಕಟ್ಟೆ ಇದೆ. ಇದು  ಅಪಾಯಕಾರಿಯಾಗಿದೆ” ಎಂದು ಹೇಳಿದ್ದಾರೆ.
 : ಬೆಂಗಳೂರಿನ ಗುಹೆಯಲ್ಲಿ ಕಂಡುಬಂದರೇ 188 ವಯಸ್ಸಿನ ಬಾಬಾ? ನಿಜಕ್ಕೂ ಯಾರಿವರು?
ಅರೀನಾ ಸಾವಿನ ಬಳಿಕ ಪ್ರತಿಕ್ರಿಯಿಸಿರುವ ನಗರದ ಮೇಯರ್ ಕಾಖಾ ಕಲಾಡ್ಜೆ ಅವರು ಟಿಬಿಲಿಸಿಯಾದ್ಯಂತ ಅಂಡರ್‌ಪಾಸ್‌ಗಳು ಆಧುನಿಕ ಸುರಕ್ಷತಾ ಮಾನದಂಡಗಳಿಗೆ ಬದ್ಧವಾಗಿವೆ ಎಂದು ಹೇಳಿದರು.