  : ತೆಳು ಬಟ್ಟೆ ಧರಿಸಿಕೊಂಡು ಬಂದು ವಿದ್ಯಾರ್ಥಿಯನ್ನು ಆಕರ್ಷಿಸಿ ಲೈಂಗಿಕ ಕ್ರಿಯೆ ನಡೆಸಿದ ಶಿಕ್ಷಕಿ!
ಶಿಕ್ಷಕರ ಸ್ಥಾನ ಅತ್ಯಂಥ ಗೌರವಯುತವಾದ್ದು. ಶಿಕ್ಷಕರೆಂದರೆ ಹೆಚ್ಚು ಮರ್ಯಾದೆಯೂ ಸಿಗುತ್ತದೆ. ಆದರೆ, ಎಲ್ಲ ಕಡೆಯೂ ಅದೇ ರೀತಿ ಇರುವುದಿಲ್ಲ ಎಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ. ಅಂತೆಯೇ  ಅಮೆರಿಕದ ಗಣಿತ ಶಿಕ್ಷಕಿಯೊಬ್ಬರು (  ) ತನ್ನ ವಿದ್ಯಾರ್ಥಿಯೊಂದಿಗೆ ಲೈಂಗಿಕ ಕ್ರಿಯೆ ( )  ಸಿಕ್ಕಿ ಹಾಕಿಕೊಂಡಿದ್ದಾರೆ. ಆರೋಪಿ ಶಿ ಕ್ಷಕಿಯನ್ನು ಪೊಲೀಸರು ಬಂಧಿಸಿದ್ದಾರೆ. ಯಾಕೆಂದರೆ ಆಕೆ ಲೈಂಗಿಕ ಕ್ರಿಯೆ ನಡೆಸುವ ವೇಳೆ ವಿದ್ಯಾರ್ಥಿಯ ಬೆನ್ನಿನ ಮೇಲೆ ಗಾಯ ಮಾಡಿದ್ದಳು. ಎರಡೆರಡು ಆರೋಪದ ಮೇಲೆ  ಮಿಸೌರಿಯ ಹೈಲಿ ಕ್ಲಿಫ್ಟನ್ ಕಾರ್ಮ್ಯಾಕ್ (26) ಎಂಬ ಶಿಕ್ಷಕಿಯನ್ನು ಅರೆಸ್ಟ್ ಮಾಡಲಾಗಿದೆ.
ಶಿಕ್ಷಕಿ ಹೈಲಿ ಕ್ಲಿಫ್ಟನ್ ಕಾರ್ಮ್ಯಾಕ್ ಪ್ರಾರಂಭದಲ್ಲಿ ಆರೋಪ ನಿರಾಕರಿಸಿದ್ದು, ಬಳಿಕ ತಪ್ಪೊಪ್ಪಿಕೊಂಡಿದ್ದಾಳೆ. ಆಕೆಯ ವಿರುದ್ಧ ಅತ್ಯಾಚಾರ, ಮಕ್ಕಳಿಗೆ ಕಿರುಕುಳ ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ದಾಖಲಿಸಲಾಗಿದೆ.  ಅಂದ ಹಾಗೆ ತೆಳುವಾದ ಬಟ್ಟೆಗಳನ್ನು ಧರಿಸಿ ಬರುತ್ತಿದ್ದ ಶಿಕ್ಷಕಿ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದ್ದಳು. ಅಂತೆಯೇ ಆಕೆ 16 ವರ್ಷ ವಯಸ್ಸಿನ ವಿದ್ಯಾರ್ಥಿಯನ್ನು ಕರೆದುಕೊಂಡು ಹೋಗಿ ಲೈಂಗಿಕ  ಕ್ರಿಯೆ ನಡೆಸುವಂತೆ ಮಾಡಿದ್ದಾಳೆ.
ಡಿಸೆಂಬರ್‌ನಲ್ಲಿ ವಿದ್ಯಾರ್ಥಿಯೊಬ್ಬ ಕ್ಲಿಫ್ಟನ್ ಕಾರ್ಮ್ಯಾಕ್ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಆರೋಪ ಕೇಳಿ ಬಂದ ಬಳಿಕ ಶಿಕ್ಷಕಿ ಟೆಕ್ಸಾಸ್‌ನಲ್ಲಿರುವ ತನ್ನ ಕುಟುಂಬದ ಮನೆಗೆ ಸ್ಥಳಾಂತರಗೊಂಡಿದ್ದಳು.
ಅತ್ಯಾಚಾರ, ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ, ಮಕ್ಕಳಿಗೆ ಕಿರುಕುಳ ಮತ್ತು ಮಕ್ಕಳ ಯೋಗಕ್ಷೇಮಕ್ಕೆ ಅಪಾಯವನ್ನುಂಟುಮಾಡುವ ಆರೋಪದ ಬಳಿಕ ಆಕೆಯನ್ನು ಜನವರಿ 5 ರಂದು ಬಂಧಿಸಲಾಗಿತ್ತು. ಪ್ರಾರಂಭದಲ್ಲಿ ಆಕೆ ಆರೋಪಗಳನ್ನು ನಿರಾಕರಿಸಿದ್ದಳು. ವಿಚಾರಣೆ ತೀವ್ರಗೊಂಡಾಗ ಒಪ್ಪಿಕೊಂಡಿದ್ದಳು.
ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತ ಮತ್ತು ಆತನ ಸಹಪಾಠಿಗಳ ವಿಚಾರಣೆ ನಡೆಸಲಾಗಿದೆ. ಶಿಕ್ಷಕಿಯು ವಿದ್ಯಾರ್ಥಿಗಳೊಂದಿಗೆ ತಪ್ಪು ಸಂಬಂಧ ಇಟ್ಟುಕೊಂಡಿದ್ದಳು ಎನ್ನಲಾಗಿದೆ. ಅಲ್ಲದೇ ಇದೇ ಕಾರಣಕ್ಕೆ ಆಕೆಗೆ ಶಾಲೆಯಿಂದ ಎಚ್ಚರಿಕೆಯನ್ನೂ ನೀಡಲಾಗಿತ್ತು. ಸಂತ್ರಸ್ತ ತಂದೆ ವಿರುದ್ಧವೂ ಪ್ರಕರಣ ದಾಖಲಾಗಿದೆ. ಸಂತ್ರಸ್ತ ಬಾಲಕನ ತಂದೆಗೆ ವಿಷಯ ಗೊತ್ತಾಗಿದ್ದರೂ ಅವರು ಶಿಕ್ಷಕಿಯನ್ನು ಕ್ಷಮಿಸಿದ್ದಾರೆ. ಇದು ಕೂಡ ಕಾನೂನು ಪ್ರಕಾರ ತಪ್ಪು.
 : ಪ್ರೀತಿಗೆ ಮನೆಯಲ್ಲಿ ವಿರೋಧ; ಪ್ರಿಯಕರನ ಜತೆ ನೇಣಿಗೆ ಶರಣಾದ ವಿದ್ಯಾರ್ಥಿನಿ
ತನ್ನ ಅಪ್ರಾಪ್ತ ಮಗ ಮತ್ತು 26 ವರ್ಷದ ಶಿಕ್ಷಕಿಯ ಸಂಬಂಧದ ಬಗ್ಗೆ ತಿಳಿದಿದ್ದ ಅವರು ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡುವ ಬದಲು ಶಿಕ್ಷಕಿಗೆ ರಕ್ಷಣೆ ನೀಡಿದ್ದರು. ಅಲ್ಲದೆ ಬಾಲಕನೊಂದಿಗೆ ಸಂಬಂಧವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟಿದ್ದಾರೆ. ಶಿಕ್ಷಕಿಗೆ ಮನೆಗೆ ಬರಲು ಮತ್ತು ಬಾಲಕನನ್ನು ನೋಡಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಸಂತ್ರಸ್ತ ಬಾಲಕನ ತಂದೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
