 : ಕಾಮುಕರ ಕಾಟ ತಡೆಯಲು ಸ್ಕರ್ಟ್‌ಗೆ ಮುಳ್ಳಿನ ಕವಚ! ಇದರ ಎಫೆಕ್ಟ್‌ ಹೇಗಿರುತ್ತೆ ನೋಡಿ!
ಬಸ್‌ಗಳಲ್ಲಿ ಜನವಿರಲಿ, ಇಲ್ಲದೇ ಇರಲಿ. ಶಾಲೆಗೆ ಹೋಗುವ ಮಕ್ಕಳಿಂದ ಹಿಡಿದು ವಯಸ್ಕ ಮಹಿಳೆಯರಿಗೂ ಲೈಂಗಿಕ ಕಿರುಕುಳ ( ) ನೀಡುವವರು ಇತ್ತೀಚೆಗೆ ಹೆಚ್ಚಾಗಿದ್ದಾರೆ. ಇಂತಹ ಸುದ್ದಿಗಳು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ( ) ವೈರಲ್ ( ) ಆಗುತ್ತಿರುತ್ತವೆ. ಹೀಗಾಗಿ ಕೆಲವು ಯುವತಿಯರು ತಮ್ಮ ಸುರಕ್ಷತೆಗಾಗಿ () ಕೆಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾರೆ.
ತಮಗೆ ಕಿರುಕುಳ ನೀಡುವವರಿಗೆ ಪಾಠ ಕಲಿಸಲೆಂದು ಕೆಲವು ಯುವತಿಯರು ತಮ್ಮ ಬ್ಯಾಗ್‌ನಲ್ಲಿ ಸೇಫ್ಟಿ ಪಿನ್‌, ಸೂಜಿ, ಪೆಪ್ಪರ್ ಸ್ಪ್ರೇಯಂತಹ ವಸ್ತುಗಳನ್ನು ಇಟ್ಟುಕೊಂಡಿರುತ್ತಾರೆ. ಯಾಕೆಂದರೆ ಇದರಿಂದ ತಮಗೆ ತೊಂದರೆ ಕೊಡುವವರಿಗೆ ತಿರುಗೇಟು ನೀಡಬಹುದು ಎಂಬುದು ಅವರ ಉದ್ದೇಶ. ಆದರೆ ಇಲ್ಲೊಬ್ಬಳು ಯುವತಿ ತನಗೆ ಕಿರುಕುಳ ನೀಡುವವರಿಗೆ ಪಾಠ ಕಲಿಸಲೆಂದು ಚುಚ್ಚುವ ಶಾರ್ಟ್ಸ್ ಹಾಕಿಕೊಂಡು ಬಂದಿದ್ದಾಳೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಎಕ್ಸ್‌ನಲ್ಲಿ  ಹಂಚಿಕೊಂಡಿರುವ ಈ ವಿಡಿಯೋದಲ್ಲಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ತನ್ನ ಹಿಂದಿದ್ದ ಯುವತಿಯನ್ನು ಹಿಂದುಗಡೆಯಿಂದ ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ. ಅಷ್ಟರಲ್ಲಿ ಯುವತಿಯ ಶಾರ್ಟ್ಸ್ ನಲ್ಲಿದ್ದ ಸೂಚಿಯಂತ ಮುಳ್ಳುಗಳು ಆತನಿಗೆ ಚುಚ್ಚಿದೆ. ಬಳಿಕ ಆತ ಅಚ್ಚರಿಯಿಂದ ಯುವತಿಯ ಶಾರ್ಟ್ಸ್ ಅನ್ನು ಗಮನಿಸುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಲ್ಲರೂ ನಗುವಂತೆ ಮಾಡಿದೆ. ಬಸ್‌ನಲ್ಲಿ ಜನ ಕಡಿಮೆ ಇದ್ದರೂ ಖಾಲಿ ಆಸನವಿದ್ದರೂ ಯುವಕ ಕುಳಿತುಕೊಳ್ಳದೆ ಯುವತಿಗೆ ಕಿರುಕುಳ ನೀಡಲು ಮುಂದಾಗಿದ್ದಾನೆ. ಆದರೆ ಯುವತಿಯ ಧಿರಿಸಿನಲ್ಲಿದ್ದ ಅನಿರೀಕ್ಷಿತ ಮುಳ್ಳುಗಳು ಚುಚ್ಚಿದಾಗ ಆತ ದಂಗಾಗಿದ್ದಾನೆ. ನೋವಿನಿಂದ ಆತ ಮತ್ತೆ ಮತ್ತೆ ತಿರುಗಿ ಆಕೆಯ ಉಡುಪಿನಲ್ಲಿ ಏನಿದೆ ಎಂದು ನೋಡಲು ಪ್ರಯತ್ನಿಸಿರುವುದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರೆಲ್ಲರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದೆ.
कांटा लगा गाना तो बहुत सुना होगा😂आज देख भी लिया🤣🤣../D3cy31WlSG
ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಜನನಿಬಿಡ ಪ್ರದೇಶಗಳಲ್ಲಿ ತಮಗೆ ಕಿರುಕುಳ ನೀಡುವವರಿಗೆ ಈ ರೀತಿಯೂ ಪಾಠ ಕಳಿಸಬಹುದು ಎಂಬುದನ್ನು ಯುವತಿ ತೋರಿಸಿಕೊಟ್ಟಿದ್ದಾಳೆ.
 : 20 ವರ್ಷಗಳಿಂದ ಒಂದೇ ಸಂಖ್ಯೆಯ ಲಾಟರಿ ಖರೀದಿಸಿ ಕೊನೆಗೂ 8 ಕೋಟಿ ರೂ. ಗೆದ್ದ
ಒಟ್ಟಿನಲ್ಲಿ ಈ ವೈರಲ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರೇಕ್ಷಕರನ್ನು ರಂಜಿಸಿದೆ. ಮಾತ್ರವಲ್ಲದೆ ದೈನಂದಿನ ಜೀವನದಲ್ಲಿ ಆತ್ಮರಕ್ಷಣೆ ಮತ್ತು ವೈಯಕ್ತಿಕ ಸುರಕ್ಷತೆಯ ತಂತ್ರಗಳ ಬಗ್ಗೆ ಅಸಂಖ್ಯಾತ ಚರ್ಚೆಗಳನ್ನು ಹುಟ್ಟುಹಾಕಿದೆ.
