  : ಪೇಜರ್‌ ಬ್ಲಾಸ್ಟ್‌ ಬೆನ್ನಲ್ಲೇ ಲೆಬನಾನ್‌ನಲ್ಲಿ ವಾಕಿಟಾಕಿಗಳೂ ಸ್ಫೋಟ; ಇಲ್ಲಿದೆ ವಿಡಿಯೋ
ಬೈರುತ್‌:ಭಯೋತ್ಪಾದಕ ಗುಂಪು ಹೆಜ್ಬುಲ್ಲಾ()ವನ್ನು ಗುರಿಯಾಗಿಸಿಕೊಂಡು ನಡೆಸಿದ ಪೇಜರ್‌ (  ) ದಾಳಿ ಬೆನ್ನಲ್ಲೇ ಲೆಬನಾನ್‌ನಲ್ಲಿ ಕೈಯಲ್ಲಿ ಹಿಡಿಯುವ ರೇಡಿಯೋ ಅಥವಾ ವಾಕಿಟಾಕಿ(-)ಗಳು ಏಕಾಏಕಿ ಸ್ಫೋಟಗೊಂಡಿವೆ. ಘಟನೆಯಲ್ಲಿ ಮೂವರು ಬಲಿಯಾಗಿದ್ದು, ನೂರಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
#:        , 24    4000    12    3000  .        - -      .../
ನಿನ್ನೆ ಲೆಬನಾನ್‌ನಲ್ಲಿ ಭಯೋತ್ಪಾದಕ ಗುಂಪು ಹೆಜ್ಬುಲ್ಲಾವನ್ನು ಗುರಿಯಾಗಿಸಿಕೊಂಡು ನಡೆಸಿದ ಪೇಜರ್‌   ದಾಳಿಯಲ್ಲಿ ( ) ಇಬ್ಬರು ಮಕ್ಕಳು ಸೇರಿದಂತೆ ಕನಿಷ್ಠ 12 ಮಂದಿ ಸಾವನ್ನಪ್ಪಿದ್ದು, 3000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.  ಈ ದಾಳಿಯ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಹೆಜ್ಬುಲ್ಲಾ ಆರೋಪಿಸಿದೆ. ಇಸ್ರೇಲ್‌ನ ಮೊಸ್ಸಾದ್ ಗೂಢಚಾರ ಸಂಸ್ಥೆ (  ) ತಿಂಗಳುಗಳ ಮೊದಲು ಹೆಜ್ಬುಲ್ಲಾ ಆರ್ಡರ್‌ ನೀಡಿದ 5,000 ತೈವಾನ್ ನಿರ್ಮಿತ ಪೇಜರ್‌ಗಳಲ್ಲಿ 3 ಗ್ರಾಂ ಸ್ಫೋಟಕಗಳನ್ನು ತುಂಬಿಸಿಟ್ಟಿತ್ತು ಎಂದು ಹೇಳಿದೆ.
ತೈವಾನ್‌ನ ಗೋಲ್ಡ್ ಅಪೊಲೊ ( ) ಕಂಪನಿಗೆ ಹಿಜ್ಬುಲ್ಲಾ ಪೇಜರ್‌ ಪೂರೈಸುವಂತೆ ಆರ್ಡರ್‌ ನೀಡಿತ್ತು. ಈ ಪೇಜರ್‌ಗಳು ಲೆಬನಾನ್‌ಗೆ ತಲುಪುವ ಮುನ್ನ ಅದಕ್ಕೆ ಸ್ಫೋಟಕಗಳನ್ನು ತುಂಬಲಾಗಿದೆ ಎಂದು ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಸ್ಫೋಟಗೊಂಡ ಪೇಜರ್‌ಗಳ ಪೈಕಿ ಬಹುತೇಕ AP924 ಮಾಡೆಲ್‌ ಆಗಿದ್ದು, ಇವನ್ನು ಗೋಲ್ಡ್ ಅಪೊಲೊದ ಇತರ 3 ಮಾಡೆಲ್‌ಗಳೊಂದಿಗೆ ಸಾಗಿಸಲಾಗಿತ್ತು. ಪೇಜರ್‌ಗಳನ್ನು ಲೆಬನಾನ್ ಮತ್ತು ಸಿರಿಯಾದ ಹಲವಾರು ಜನರಿಗೆ ವಿತರಿಸಿದ ನಂತರ ರೇಡಿಯೊ ಆವರ್ತನದೊಂದಿಗೆ ಸ್ಫೋಟಿಸಲಾಗಿದೆ.
ಲೆಬನಾನ್‌ನಲ್ಲಿ ಮಂಗಳವಾರ (ಸೆಪ್ಟೆಂಬರ್‌ 18) ಸ್ಥಳೀಯ ಕಾಲಮಾನ ಮಧ್ಯಾಹ್ನ 3:30ರ ಸುಮಾರಿಗೆ (ಭಾರತೀಯ ಕಾಲಮಾನ ಸಂಜೆ 6 ಗಂಟೆ) ಸ್ಫೋಟ ಸಂಭವಿಸಿದೆ. ಇನ್ನು ಸಿರಿಯಾದಲ್ಲಿಯೂ ಇದೇ ಮಾದರಿಯ ಸ್ಫೋಟ ಸಂಭವಿಸಿದೆ. ಭಾರತೀಯ ಕಾಲಮಾನದ ಪ್ರಕಾರ ಸೆ. 17ರ ಸಂಜೆ 6ರ ಸುಮಾರಿಗೆ ಸಿರಿಯಾದಲ್ಲಿ ಈ ಸ್ಫೋಟಗಳು ನಡೆದಿವೆ. ಹೆಜ್ಬುಲ್ಲಾ ಸಂಘಟನೆಯ 14 ಮಂದಿಯ ಪೇಜರ್‌ ಇದೇ ರೀತಿ ಏಕಾಏಕಿ ಸ್ಫೋಟಗೊಂಡು 14 ಮಂದಿ ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ:  : ಲೆಬನಾನ್‌ನಲ್ಲಿ ಸ್ಫೋಟ; ಇಸ್ರೇಲ್ ಕೈವಾಡದ ಬಗ್ಗೆ ಪೇಜರ್‌ ತಯಾರಕ ಕಂಪನಿ ಹೇಳಿದ್ದೇನು?