ಭಾರತ, ಆಸ್ಟ್ರೇಲಿಯಾ ನಡುವೆ ಏಳು ಒಪ್ಪಂದಗಳಿಗೆ ಸಹಿ
12 ಅಂಶಗಳ ಜಂಟಿ ಹೇಳಿಕೆಯು ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸುವುದು, ರಕ್ಷಣಾ ಮತ್ತು ಸಾಗರ ವಲಯದಲ್ಲಿ ಸಹಕಾರವನ್ನು ಹೆಚ್ಚಿಸುವುದು, ಜನರ ನಡುವೆ ಸಂಪರ್ಕವನ್ನು ಬಲಪಡಿಸುವುದು ಮತ್ತು ಆರ್ಥಿಕ ಸಹಕಾರವನ್ನು ಹೆಚ್ಚಿಸುವುದನ್ನು ಒಳಗೊಂಡಿದೆ.ವರ್ಚುವಲ್ ಶೃಂಗಸಭೆಯ ನಂತರ, ಭಾರತ ಮತ್ತು ಆಸ್ಟ್ರೇಲಿಯಾ  ಸೈಬರ್ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ, ಪರಸ್ಪರ ಸಾರಿಗೆ ಸಹಕಾರ ಮತ್ತು ಜಲ ಸಂಪನ್ಮೂಲ ನಿರ್ವಹಣೆ, ಸಾರ್ವಜನಿಕ ಆಡಳಿತ ಹಾಗೂ ಆಡಳಿತ ಸುಧಾರಣೆ ವಲಯಗಳಲ್ಲಿ ಏಳು ಒಪ್ಪಂದಗಳಿಗೆ ಸಹಿ ಹಾಕಿವೆ.
‘ನಾವು ಕೊವಿಡ್‍-19 ಕ್ಕೆ ಪ್ರತಿಕ್ರಿಯಿಸಲು ಮತ್ತು ಚಿಕಿತ್ಸೆ ಒದಗಿಸಲು ನವೀನ ಪರಿಹಾರಗಳನ್ನು ಉತ್ತೇಜಿಸುವುದಕ್ಕೆ ಆಸ್ಟ್ರೇಲಿಯಾ – ಭಾರತ ಕಾರ್ಯತಂತ್ರ ಸಂಶೋಧನಾ ನಿಧಿ ಪ್ರೋತ್ಸಾಹಕ್ಕೆ ಬದ್ಧರಾಗಿದ್ದೇವೆ.’ ಎಂದು  ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.