ವಿಶ್ವದ ಹಲವೆಡೆ ಎರಡನೇ ಸುತ್ತಿನ ಲಾಕ್‌ಡೌನ್ ಶುರು
ಫ್ರಾನ್‌ಸ್‌/ಬ್ರಿಟನ್/ಇಸ್ರೇಲ್:ಎರಡನೇ ಹಂತದ ಕೊರೊನಾ ತೀವ್ರತೆಗೆ ಫ್ರಾನ್‌ಸ್‌, ಫಿಲಿಫೈನ್‌ಸ್‌, ಟರ್ಕಿ ದೇಶಗಳು ಬೆಚ್ಚಿಬಿದ್ದಿದೆ.
ವೈರಸ್ ರಿಟರ್ನ್ ಏರಿಯಾಗಳಲ್ಲಿ ಮಾಸ್‌ಕ್‌, ಅಂತರ ಕಡ್ಡಾಯ ಮಾಡಲಾಗಿದೆ. ಎರಡನೇ ಸುತ್ತಿನ ಕೊರೊನಾಗೆ ಬ್ರಿಟನ್ ಆಡಳಿತ ನಗರದಲ್ಲಿ ಬಿಗಿ ಹಿಡಿತ ಸಾಧಿಸಿದೆ. ಕಟ್ಟುನಿಟ್ಟಾಗಿ ಸಾಮಾಜಿಕ ಅಂತರ ಪಾಲನೆ ವಿಧಿಸಲಾಗಿದೆ.
ಸೆ.28ರವರೆಗೂ ವಿಕ್ಟೋರಿಯಾ ರಾಜ್ಯ ಸಂಪೂರ್ಣ ಲಾಕ್‌ಡೌನ್ ಆಗಿದೆ. ಐರ್ಲೆಂಡ್‌ನಲ್ಲೂ ಕೊರೊನಾಗೆ ಅಬ್ಬರಿಸಿದ್ದು, ಬಿಗಿಯಾದ ಕ್ರಮ ಕೈಗೊಳ್ಳಲಾಗಿದೆ. ಆಸ್ಟ್ರೇಲಿಯಾದಲ್ಲಿ ವೈರಸ್ ಹೆಚ್ಚಿರುವ ರಾಜ್ಯಗಳಲ್ಲಿ ಲಾಕ್‌ಡೌನ್ ಕಡ್ಡಾಯ ಮಾಡಲಾಗಿದೆ. ಎಲ್ಲಾ ರೀತಿಯಲ್ಲೂ ನಿರ್ಬಂಧ ಹೇರಲಾಗಿದೆ.
ಯುರೋಪ್ ಸಂಸತ್‌ನಿಂದ ಕಡ್ಡಾಯ ಕ್ವಾರಂಟೈನ್ ಆದೇಶ ಹೊರಡಿಸಲಾಗಿದ್ದು, ಇಸ್ರೇಲ್, ಇಂಡೋನೇಶ್ಯಾ, ಆಸ್ಟ್ರೇಲಿಯಾ ಸೇರಿ ಹಲವೆಡೆ ನಿರ್ಬಂಧ ಹೇರಿಕೆಯಾಗಿದೆ. ಇಸ್ರೇಲ್‌ನಲ್ಲಿ ರಾತ್ರಿ ಕರ್ಫ್ಯೂ, ಶಾಲಾ-ಕಾಲೇಜು ಬಂದ್ ಮಾಡಲಾಗಿದೆ.