ಅರ್ಥಶಾಸ್ತ್ರಜ್ಞ ಲಾರ್ಡ್ ಮೇಘನಾದ ದೇಸಾಯಿ ಲೇಬರ್ ಪಾರ್ಟಿ ಸದಸ್ಯತ್ವಕ್ಕೆ ರಾಜೀನಾಮೆ
ಲಂಡನ್:ಭಾರತ ಮೂಲದ ಅರ್ಥಶಾಸ್ತ್ರಜ್ಞ ಹಾಗೂ ಲೇಖಕ ಲಾರ್ಡ್ ಮೇಘನಾದ ದೇಸಾಯಿ ಬ್ರಿಟನ್‌ನ ಪ್ರತಿಪಕ್ಷ ಲೇಬರ್ ಪಾರ್ಟಿಯ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಪಕ್ಷದಲ್ಲಿರುವ ಜನಾಂಗೀಯ ತಾರತಮ್ಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಪಕ್ಷ ವಿಫಲವಾಗಿರುವ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವುದಾಗಿ ಹೇಳಿದ್ದಾರೆ. ಲೇಬರ್ ಪಕ್ಷದ ಮುಖ್ಯಸ್ಥ ಜೆರೆಮಿ ಕಾರ್ಬಿನ್ ‘ಕಾನೂನುಬಾಹಿರ ಕೃತ್ಯ’ಗಳನ್ನು ನಡೆಸಿರುವುದನ್ನು ದೇಶದ ಮಾನವಹಕ್ಕುಗಳ ಸಂಸ್ಥೆ ದೃಢಪಡಿಸಿರುವ ಹೊರತಾಗಿಯೂ, ಕೇವಲ 19 ದಿನಗಳ ಅಮಾನತಿನ ಬಳಿಕ ಅವರನ್ನು ಪಕ್ಷಕ್ಕೆ ಮರು ಸೇರ್ಪಡೆಗೊಳಿಸಲಾಗಿದೆ ಎಂದು ದೇಸಾಯಿ ಹೇಳಿದರು.
ಈ ಹಿನ್ನೆಲೆಯಲ್ಲಿ, ಪಕ್ಷದ ನನ್ನ 49 ವರ್ಷಗಳ ಸದಸ್ಯತ್ವ ಕೊನೆಗೊಳಿಸುವ ನಿರ್ಧಾರಕ್ಕೆ ನಾನು ಬರಬೇಕಾಯಿತು ಎಂದು 80 ವರ್ಷದ ಲೇಖಕ ಹೇಳಿದರು.
