ಚುನಾವಣೆ ವ್ಯವಸ್ಥೆ ಮಾರ್ಪಾಡು ಅಗತ್ಯ
ವೈಟ್ ಹೌಸ್ ಮೇಲೆ ಟ್ರಂಪ್ ಬೆಂಬಲಿಗರ ದಾಳಿ ಬಳಿಕ ಅಮೆರಿಕದ ಲೋಪ ದೋಷ ಬಯಲು
ಬೆಂಕಿ ಬಸಣ್ಣ
ನ್ಯೂಯಾರ್ಕ್:ಅಮೆರಿಕದ ಎರಡುನೂರು ವರ್ಷಕ್ಕಿಂತ ಹೆಚ್ಚಿರುವ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇಂದು ಅತ್ಯಂತ ಕರಾಳ ದಿವಸ. ಈ ಘಟನೆಯಲ್ಲಿ ಪೊಲೀಸರು ಸಂಸತ್ ಭವನದ ಒಳಗೆ ಹಾರಿಸಿದ ಗುಂಡಿನಿಂದ ಒಟ್ಟು ನಾಲ್ಕು ಜನರು ಸತ್ತಿದ್ದಾರೆ ಮತ್ತು ಅನೇಕ ಜನರು ಗಾಯಗೊಂಡಿದ್ದಾರೆ.
14 ವರ್ಷ ಅಮೆರಿಕದ ವಾಯು ಸೇನೆಯಲ್ಲಿ ಸೇವೆ ಸಲ್ಲಿಸಿದ ವೀರಮಹಿಳೆಯಾದ ಆದರೆ ದುರಾದುಷ್ಠವಾತ್ ಟ್ರಂಪ್ ನ ಕಟ್ಟಾ ಸಪೋರ್ಟರ್ ಆದ ಅಸ್ಲಿ ಬಾಬೇಟ್ ಎಂಬ ಮಹಿಳೆ ಸಹ ಮೃತ ಹೊಂದಿದ್ದಾಳೆ. ಆದರೆ ಈ ಚುನಾವಣೆಯ ನಿಯಮಗಳನ್ನುಬದಲಿಸುವುದು ಅಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಅದು ಅಮೆರಿಕದ ಎರಡು ಸಂಸತ್ತುಗಳಲ್ಲಿ ಪಾಸಾಗಿ ನಂತರ ಅಧ್ಯಕ್ಷ ರಿಂದ ಸಹಿ ಪಡೆಯಬೇಕು.
ಇಂತಹ ಬದಲಾವಣೆಗಳು ಮುಂದೊಂದು ದಿನ ಬರಬಹುದು ಎಂದು ಆಶಿಸೋಣ. ನವೆಂಬರ್ 03 ರಂದು ನಡೆದ  ಚುನಾವಣೆ ಯಲ್ಲಿ ತಮ್ಮ ಸೋಲನ್ನು ಒಪ್ಪಿಕೊಳ್ಳಲು ಹಾಲಿ ಅಧ್ಯಕ್ಷ ಟ್ರಂಪ್ ತಯಾರಿಲ್ಲ. ಇಲ್ಲಿಯ ನ್ಯಾಯಾಲಯಗಳು ಟ್ರಂಪ್ ಬೆಂಬಲಿ ಗರು ಸಲ್ಲಿಸಿದ ನೂರಾರು ಚುನಾವಣಾ ಅಕ್ರಮದ ಅರ್ಜಿಗಳನ್ನು ತಳ್ಳಿ ಹಾಕಿವೆ.
ತಮಾಷೆಯ ವಿಷಯವೆಂದರೆ ಟ್ರಂಪ್ ಅವರೇ ನೇಮಿಸಿದ್ದ ನ್ಯಾಯಾಧೀಶರೇ ಚುನಾವಣಾ ಅಕ್ರಮದ ಅರ್ಜಿಗಳನ್ನು ಇವುಗಳಲ್ಲಿ ಹುರುಳಿಲ್ಲ ಇಂದು ತಿರಸ್ಕರಿಸಿದ್ದಾರೆ. ಸೆನೆಟ್‌ನಲ್ಲಿ ಮೆಜಾರಿಟಿ ಇರುವ ಟ್ರಂಪ್‌ನ ರಿಪಬ್ಲಿಕನ್ ಪಕ್ಷದ ಬಹಳಷ್ಟು ಸೆನೆಟರ್‌ಗಳು ಇದಕ್ಕೆ ಒಪ್ಪಲಿಲ್ಲ. ಈ ಸೆನೆಟ್ ಜಂಟಿ ಅಧಿವೇಶನದ ಫಲಿತಾಂಶವನ್ನು ತಿರಸ್ಕರಿಸಬೇಕು ಎಂದು ಹಾಕಿದ ಟ್ರಂಪ್ ನ ಭಯಂಕರ ಒತ್ತಡಕ್ಕೆ ಉಪಾಧ್ಯಕ್ಷ ಮೈಕ್ ಪೆನ್ಸ್ ಮಣಿಯಲಿಲ್ಲ. ಹೀಗಾಗಿ ಟ್ರಂಪ್ ಅವರಿಗೆ ಎಲ್ಲಾ ರೀತಿಯಿಂದಲೂ ಎಲ್ಲಾ ಕಡೆಯಿಂದಲೂಹಿನ್ನಡೆಯಾಗುತ್ತಲಿದೆ.
ಇಂದು ಸೆನೆಟಿನಲ್ಲಿ ಅಧ್ಯಕ್ಷೀಯ ಚುನಾವಣೆಯ ಫಲಿತಾಂಶ ಅಧಿಕೃತಗೊಂಡರೆ ಜೋ ಬೈಡನ್ ಜನವರಿ 20 ನೇ ತಾರೀಕು ಪ್ರಮಾಣ ವಚನ ಸ್ವೀಕಾರ ಮಾಡುವುದು ಖಚಿತವಾದಂತೆ. ಹೀಗಾಗಿ ಟ್ರಂಪ್ ಏನಾದರೂ ಮಾಡಿ ಸೆನೆಟ್‌ನಲ್ಲಿ ಜೋ ಬೈಡನ್ಪರವಾಗಿ ಚುನಾವಣಾ ಗೆಲುವನ್ನು ತಡೆಯಲು ಶತಪ್ರಯತ್ನಪಟ್ಟರು.
ವಾಷಿಂಗ್ಟನ್ ಡಿ.ಸಿ.ಯ ಯು. ಎಸ್ ಕ್ಯಾಪಿಟಲ್ ಬಿಲ್ಡಿಂಗ್‌ನಲ್ಲಿ ಸಂಸತ್ತಿನ ವಿಶೇಷ ಅಧಿವೇಶನ ನಡೆಯುತ್ತಿರುವಾಗಲೇ, ಅದರ ಪಕ್ಕದಲ್ಲಿಯೇ ಟ್ರಂಪ್ ಅವರು ಲಕ್ಷಾಂತರ ಬೆಂಬಲಿಗರನ್ನು ಸೇರಿಸಿ   (ಅಮೆರಿಕವನ್ನು ರಕ್ಷಿಸಿ)ಬೃಹತ್ ರ್ಯಾಲಿ ಯನ್ನು ನಡೆಸಿದರು. ಈ ರ್ಯಾಲಿಯಲ್ಲಿ ಟ್ರಂಪ್ ರ ಮಗ ಎರಿಕ್ ಟ್ರಂಪ್, ವಕೀಲ ರೂಡಿ ಜೂಲಿಯಾನಿ ಮತ್ತು ಅಧ್ಯಕ್ಷ ಟ್ರಂಪ್ ಅವರು ಗಂಟೆಗಟ್ಟಲೆ ಪ್ರಚೋದನಕಾರಿ ಭಾಷಣ ಮಾಡಿ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಭಾರಿ ಮೋಸ, ಕಪಟ, ವಂಚನೆ, ಅಕ್ರಮ, ಅವ್ಯವಹಾರ ನಡೆದಿದೆ, ಲಕ್ಷಾಂತರ ಫೇಕ್, ನಕಲಿ ವೋಟುಗಳನ್ನು ಮಧ್ಯರಾತ್ರಿ ಅಕ್ರಮವಾಗಿ ಸೇರಿಸಲಾಗಿದೆ,ಮೃತಪಟ್ಟ ಸಾವಿರಾರು ಜನಗಳು ಅಂಚೆ ಮೂಲಕ ವೋಟ್ ಮಾಡಿದ್ದಾರೆ, ನಿಜವಾಗಿಯೂ ಗೆದ್ದಿದ್ದು ಟ್ರಂಪ್ ನೇ ಹೊರತು , ಜೋ ಬೈಡೆನ್ ಅಲ್ಲವೇ ಅಲ್ಲ, ಇದಕ್ಕೆ ಪರಿಹಾರವೆಂದರೆ ಈಗ ಸಂಸತ್ತಿಗೆ ಹೋಗಿ ಮುತ್ತಿಗೆ ಹಾಕುವುದು ಇಂದು ವಿವಿಧ ರೀತಿಯಲ್ಲಿ ಪ್ರಚೋದಿಸಿದರು.
ಟ್ರಂಪ್ ನ ಭಾಷಣದಿಂದ ಬ್ರೇನ್ ವಾಶ್ ಆದ ಸಾವಿರಾರು ಬೆಂಬಲಿಗರು ಅಮೆರಿಕದ ಸಂಸತ್ತಿಗೆ ಪಾದಯಾತ್ರೆಯಲ್ಲಿ ಬಂದು ಮುತ್ತಿಗೆ ಹಾಕಿದರು. ಅಲ್ಲಿದ್ದ ಕೆಲವೇ ಪೊಲೀಸರ ಸಂಖ್ಯೆಗಿಂತ ಟ್ರಂಪ್ ಬೆಂಬಲಿಗರ ಸಂಖ್ಯೆೆ ಸಿಕ್ಕಾಪಟ್ಟೆ ಜಾಸ್ತಿ ಇತ್ತು. ಹೀಗಾಗಿಪೊಲೀಸರಿಗೆ ಇವರನ್ನು ಕಂಟ್ರೋಲ್ ಮಾಡಲು ಸಾಧ್ಯವಾಗಲಿಲ್ಲ. ಕಾಂಪೌಂಡ್ ಹಾರಿ, ಕಿಟಕಿಗಳ ಗ್ಲಾಸ್‌ಗಳನ್ನು ಮುರಿದು, ಸಂಸತ್ತಿನ ಒಳಗೆ ನುಗ್ಗಿ ದಾಂಧಲೆ ಎಬ್ಬಿಸಿದರು. ತಕ್ಷಣ ಮುನ್ನೆಚ್ಚರಿಕೆ ವಹಿಸಿದ ಕಮಾಂಡೋಗಳು ಎಲ್ಲಾ ಸೆನೆಟರ್‌ಗಳನ್ನು, ಯು.ಎಸ್.ಕ್ಯಾಪಿಟಲ್ ಬಿಲ್ಡಿಂಗ್‌ನಿಂದ ಸುರಂಗದ ಮೂಲಕವಾಗಿ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿ ಸುರಕ್ಷಿತವಾಗಿ ಇಟ್ಟಿದ್ದರು.
ವಾಷಿಂಗ್ಟನ್ ಡಿ. ಸಿ. ಯ ಮೇಯರ್ ಸಾಯಂಕಾಲ 6:00 ಇಂದ ಕರ್ಫ್ಯೂ ವಿಧಿಸಿದರು. ನಾಶನಲ್ ಗಾರ್ಡ್ ಗಳು ಸಂಸತ್ತಿನಲ್ಲಿದ್ದಜನರನ್ನು ಹೊರ ದಬ್ಬಿ ಖಾಲಿ ಮಾಡಿಸಿದರು. ಸಂಸತ್ ಭವನ ಸುರಕ್ಷಿತವೆಂದು ಗೊತ್ತಾದ ನಂತರ ರಾತ್ರಿ ತಡವಾಗಿ ಸೆನೆಟ್ ಪುನಃ ಸೇರಿದ್ದು ಎಲೆಕ್ಟ್ರಾರಲ್ ವೋಟುಗಳ ಎಣಿಕೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಕೇವಲ ಆರೇಳು ಜನ ಸೆನೆಟರ್ ಮಾತ್ರ ಟ್ರಂಪ್ ಬೆಂಬಲಕ್ಕೆ ಇರುವ ಪ್ರಯುಕ್ತ ಜೋ ಬೈಡನ್ ಅಧಿಕೃತವಾಗಿ ಗೆದ್ದ ಅಭ್ಯರ್ಥಿ ಎಂದು ಘೋಷಿಸಲಾಗಿದೆ.
ಈ ಕರಾಳ ಘಟನೆಯಿಂದ ಅಮೆರಿಕದ ಚುನಾವಣೆ ವ್ಯವಸ್ಥೆಯನ್ನು ಸಮಗ್ರವಾಗಿ ಸುಧಾರಿಸುವ ಅವಶ್ಯಕತೆ ಇದೆ. ಕೆಳಗಿನ ಬದಲಾವಣೆಗಳನ್ನು ಮಾಡಿದರೆ ತುಂಬಾ ಒಳ್ಳೆಯದು.1. ಭಾರತದಲ್ಲಿರುವಂತೆ ಅಮೆರಿಕದಲ್ಲೂ ಸಹಿತ ಒಂದು ಕೇಂದ್ರ ಚುನಾವಣಾ ಆಯೋಗವನ್ನು ರಚಿಸಬೇಕು.2. ಅಮೇರಿಕದ ಐವತ್ತು ರಾಜ್ಯಗಳಲ್ಲಿಯೂ ಒಂದೇ ರೀತಿಯ ಅಧ್ಯಕ್ಷೀಯ ಚುನಾವಣೆಯ ನಿಯಮಗಳನ್ನು ಘೋಷಿಸಬೇಕು. ಈಗ 50 ರಾಜ್ಯಗಳಲ್ಲಿ 50 ಚುನಾವಣೆಯ ಬೇರೆ ಬೇರೆ ನಿಯಮಗಳಿವೆ.
3. ಭಾರತದಲ್ಲಿರುವಂತೆ ವೋಟರ್ ಐಡಿಯನ್ನು ಪ್ರತಿಯೊಬ್ಬ ಮತದಾರಿಗೆ ಕೊಡಬೇಕು. ಈಗ ಸಿಗ್ನೇಚರ್ ಮಾತ್ರ ನೋಡುತ್ತಾರೆ.4. ಕೆಲವು ರಾಜ್ಯಗಳಲ್ಲಿ ಇರುವ ಅಂಚೆ ಮೂಲಕ ಮಾಡುವ ಮತದಾನವನ್ನು ತೆಗೆದುಹಾಕಬೇಕು.
5. ಅಮೇರಿಕಾದ ಎಲ್ಲಾ ರಾಜ್ಯಗಳ ಚುನಾವಣೆ ಒಂದೇ ದಿವಸ ನಡೆಯಬೇಕು. ಈಗ ಕೆಲವು ರಾಜ್ಯಗಳಲ್ಲಿ ಕೊರೋನಾ ಪ್ರಯುಕ್ತ ಒಂದು ತಿಂಗಳು ಕಾಲ ಮತದಾನ ಮಾಡಲು ( ) ಅವಕಾಶ ಕೊಟ್ಟಿದ್ದಾರೆ.6. ಚುನಾವಣೆ ದಿನಾಂಕವಾದ ನವೆಂಬರ್ 3 ಮತ್ತು ಅಧಿಕಾರ ಹಸ್ತಾಂತರ ದಿನಾಂಕವಾದ ಜನವರಿ 20 ಮಧ್ಯ ಇರುವ ಮೂರು ತಿಂಗಳ ಅವಧಿಯನ್ನು ಕಡಿಮೆಗೊಳಿಸಬೇಕು. ಬೇರೆ ದೇಶಗಳಲ್ಲಿರುವಂತೆ ಚುನಾವಣೆ ಮುಗಿದ ಮೂರು ನಾಲ್ಕು ದಿವಸಗಳಲ್ಲಿ ಅಧಿಕಾರ ಹಸ್ತಾಂತರ ಮಾಡುವಂತೆ ಆಗಬೇಕು.