ಟ್ರಂಪ್ ಟ್ವಿಟರ್ ಖಾತೆ ಶಾಶ್ವತ ಅಮಾನತು
ವಾಷಿಂಗ್ಟನ್:ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ.
ಜ.20ರಂದು ನಡೆಯುವ ಜೋ ಬೈಡನ್ ಅವರ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಾಜರಾಗುವುದಿಲ್ಲ ಎಂದು ಶುಕ್ರವಾರ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದರು. ಇದಾದ ನಂತರ ಕ್ಯಾಲಿಫೋರ್ನಿಯಾ ಮೂಲದ ಸಾಮಾಜಿಕ ಮಾಧ್ಯಮ ವೇದಿಕೆ ಟ್ವಿಟರ್‌ ಇಂಥದ್ದೊಂದು ಮಹತ್ವದ ತೀರ್ಮಾನ ಕೈಗೊಂಡಿದೆ.‌
ಟ್ರಂಪ್ ರನ್ನು ಶಾಶ್ವತ ಅಮಾನತುಗೊಳಿಸುವ ಸಮಯದಲ್ಲಿ, 8.87 ಕೋಟಿ ಹಿಂಬಾಲಕರನ್ನು ಹೊಂದಿದ್ದರು ಮತ್ತು ಟ್ರಂಪ್ ಅವರು 51 ಜನರನ್ನು ಫಾಲೋ ಮಾಡುತ್ತಿದ್ದರು.
ಟ್ರಂಪ್‌ ಖಾತೆಯಿಂದ ಇತ್ತೀಚೆಗೆ ವಿನಿಮಯವಾಗುತ್ತಿದ್ದ ಮಾಹಿತಿಗಳನ್ನು ಗಮನಿಸಿ, ವಿಶ್ಲೇಷಿಸಿದ ನಂತರ, ಈ ಮಾಹಿತಿಗಳಿಂದ ಮುಂದೆ ಉಂಟಾಗಬಹುದಾದ ಹಿಂಸಾಚಾರ ಮತ್ತು ಗದ್ದಲಕ್ಕೆ ಪ್ರಚೋದನೆ ನೀಡುವ ಅಪಾಯಗಳನ್ನು ಮನಗಂಡು ಟ್ರಂಪ್ ಅವರ ಟ್ವಿಟರ್ ಖಾತೆಯನ್ನು ಶಾಶ್ವತವಾಗಿ ಅಮಾನತುಗೊಳಿಸುವ ನಿರ್ಧಾರಕ್ಕೆ ಬಂದೆವು ಎಂದು ಟ್ವಿಟರ್ ಹೇಳಿಕೆಯಲ್ಲಿ ತಿಳಿಸಿದೆ.