ಅಪಹರಣಕ್ಕೊಳಗಾಗಿದ್ದ 279 ಶಾಲಾ ಬಾಲಕಿಯರ ಬಿಡುಗಡೆ
ಗುಸೌ:ಬಂದೂಕುಧಾರಿ ವ್ಯಕ್ತಿಗಳ ತಂಡ ವಾಯುವ್ಯ ಜಾಮ್ಫಾರಾ ರಾಜ್ಯದ ಬೋರ್ಡಿಂಗ್ ಶಾಲೆಯಿಂದ ಕಳೆದ ವಾರ ಅಪಹರಿಸಿದ್ದ ನೂರಾರು ಶಾಲಾ ಬಾಲಕಿಯರನ್ನು ಬಿಡುಗಡೆ ಮಾಡಿದ್ದಾರೆ.
ಜಂಗೆಬೆ ಪಟ್ಟಣದ ಸರ್ಕಾರಿ ಬಾಲಕಿಯ ಕಿರಿಯ ಮಾಧ್ಯಮಿಕ ಶಾಲೆಯಿಂದ ಬಂದೂಕುಧಾರಿಗಳು ಬಾಲಕಿಯರನ್ನು ಅಪಹರಿ ಸಿದ್ದರು. ಅದರಲ್ಲಿ 279 ಬಾಲಕಿಯರನ್ನು ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ ಎಂದು ಜಾಮ್ಫಾರಾ ರಾಜ್ಯದ ರಾಜ್ಯಪಾಲ ತಿಳಿಸಿದ್ದಾರೆ.
ನಮ್ಮ ಹೆಣ್ಣುಮಕ್ಕಳು ಈಗ ಸುರಕ್ಷಿತವಾಗಿರುವುದನ್ನು ನಮ್ಮೊಂದಿಗೆ ಸಂತೋಷಪಡಬೇಕೆಂದು ನಾನು ನೈಜೀರಿಯನ್ನರಿಗೆ ಆದೇಶಿಸುತ್ತೇನೆ ಎಂದು ಮಟವಾಲ್ಲೆ ಹೇಳಿದರು.