ಮ್ಯಾನ್ಮಾರ್‌ನಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ದಿನ ನೂರು ಪ್ರತಿಭಟನಾಕಾರರ ಮಾರಣಹೋಮ
ಯಂಗೂನ್:ಮ್ಯಾನ್ಮಾರ್‌ನಲ್ಲಿ ಸೇನಾ ಕ್ಷಿಪ್ರ ಕ್ರಾಂತಿ ವಿರುದ್ಧದ ಪ್ರತಿಭಟನೆ ಹತ್ತಿಕ್ಕಲು ಹರಸಾಹಸ ನಡೆಸುತ್ತಿರುವ ಸೇನೆ, ಒಂದೇ ದಿನ 100ಕ್ಕೂ ಹೆಚ್ಚು ಪ್ರತಿಭಟನಾಕಾರರ ಮಾರಣಹೋಮ ನಡೆಸಿದೆ.
ಕ್ಷಿಪ್ರ ಕ್ರಾಂತಿ ನಡೆದ ಬಳಿಕ ಒಂದು ತಿಂಗಳಲ್ಲಿ ಇಷ್ಟೊಂದು ಅಪಾರ ಸಂಖ್ಯೆ ಯಲ್ಲಿ ಸೇನೆ ಹತ್ಯೆ ಮಾಡಿರುವುದು ಇದೇ ಮೊದಲು.
ಇಪ್ಪತ್ತಕ್ಕೂ ಹೆಚ್ಚು ನಗರ ಹಾಗೂ ಪಟ್ಟಣಗಳಲ್ಲಿ ಪ್ರತಿಭಟನಾಕಾರರನ್ನುಸೇನೆ ಹತ್ತಿಕ್ಕುತ್ತಿದೆ ಎಂದು ಹೇಳ ಲಾಗಿದೆ. ಮಾ.14 ರಂದು 74-90 ಮಂದಿ ಪ್ರತಿಭಟನಾ ಕಾರರು ಸೈನಿಕರ ಗುಂಡಿಗೆ ಬಲಿಯಾಗಿದ್ದರು.
ಮ್ಯಾನ್ಮರ್ ಸಶಸ್ತ್ರ ಪಡೆಯ 76ನೇ ದಿನಾಚರಣೆಯನ್ನು ಭಯಾನಕ ಮತ್ತು ಅಗೌರವದ ದಿನ” ಎಂದು ಯೂರೋಪಿಯನ್ ಒಕ್ಕೂಟದ ನಿಯೋಗ ಟ್ವೀಟ್ ಮಾಡಿದೆ. ಮಕ್ಕಳೂ ಸೇರಿದಂತೆ ಶಸ್ತ್ರಾಸ್ತ್ರಗಳಿಲ್ಲದ ನಾಗರಿಕರನ್ನು ಹತ್ಯೆ ಮಾಡಿರುವುದನ್ನು ಸಮರ್ಥಿಸಿಕೊಳ್ಳಲಾಗದು” ಎಂದು ಹೇಳಿದೆ.