ಭಾರತಕ್ಕೆ ಎರಿಕ್‌ ಗಾರ್ಸೆಟ್ಟಿ ರಾಯಭಾರಿ ?
ವಾಷಿಂಗ್ಟನ್‌: ಭಾರತದಲ್ಲಿನ ಅಮೆರಿಕದ ಮುಂದಿನ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ನೇಮಕಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಗಾರ್ಸೆಟ್ಟಿ ಅವರು, ಬೈಡನ್‌ ಅವರ ಅಧ್ಯಕ್ಷೀಯ ಚುನಾವಣೆ ಪ್ರಚಾರದ ಸಹ ಉಸ್ತುವಾರಿಯಾಗಿದ್ದರು. ಸರ್ಕಾರ ರಚನೆ ಸಂದರ್ಭ ಇವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಪರಿಗಣಿಸಲಾಗಿತ್ತು. ಇದೇ ಸಂದರ್ಭದಲ್ಲಿ ಚೀನಾಗೆ ನಿಕೋಲಾಸ್‌ ಬರ್ನ್‌, ರಹ್ಮ್‌ ಎಮ್ಯಾನುಲ್‌ ರನ್ನು ಜಪಾನ್‌ಗೆ ಮತ್ತು ಟೊಮ್‌ ನಿಡೆಸ್‌ ಅವರನ್ನು ಇಸ್ರೇಲ್‌ಗೆ ರಾಯಭಾರಿಗಳನ್ನಾಗಿ ನೇಮಿಸುವ ನಿರೀಕ್ಷೆ ಇದೆ.
ಸದ್ಯ ಎರಿಕ್‌ ಅವರು ಲಾಸ್‌ ಏಂಜಲೀಸ್ ಮೇಯರ್‌ ಆಗಿದ್ದಾರೆ. ಮುಂದಿನ ವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್‌  ರಾಯಭಾರಿಗಳ ನೇಮಕ ಪ್ರಕಟಿಸುವ ನಿರೀಕ್ಷೆ ಇದೆ. ಜನವರಿ 20ರಿಂದ ಭಾರತದಲ್ಲಿನ ಅಮೆರಿಕ ರಾಯಭಾರಿ ಹುದ್ದೆ ಖಾಲಿ ಇದೆ.