ಇಂಡೋನೇಷ್ಯಾದಲ್ಲಿ ಭಾರಿ ಭೂಕಂಪ: 5.2 ರಷ್ಟು ತೀವ್ರತೆ
ಜಕಾರ್ತಾ:ಇಂಡೋನೇಷ್ಯಾದಲ್ಲಿ ಸೋಮವಾರ ಬೆಳಿಗ್ಗೆ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್​ ಮಾಪಕದಲ್ಲಿ 5.2 ರಷ್ಟು ತೀವ್ರತೆ ದಾಖಲಾಗಿದೆ. ಗೊರೊಂಟಾಲೊದಿಂದ 61 ಕಿಲೋ ಮೀಟರ್​ ದೂರದಲ್ಲಿ ಭೂಮಿ ಕಂಪಿಸಿದೆ.
ಹಲವು ಕಟ್ಟಡಗಳು ಧರೆಗುರುಳಿದಿದ್ದು, ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಂಡೋ ನೇಷ್ಯಾದ ಗೊರೊಂಟಾಲೊ ಬಳಿಯ ಕೇಂದ್ರಬಿಂದುವಿನ ಕೆಳಗೆ 88 ಕಿ.ಮೀ. ಆಳದಲ್ಲಿ ಭೂಕಂಪವು ಭಾನುವಾರ ಸಂಜೆ ಅಪ್ಪಳಿಸಿತು ಎಂದು ತಿಳಿದು ಬಂದಿದೆ.
