ಫ್ಯೂಮಿಯೊ ಕಿಶಿದ – ಜಪಾನ್’ನ ಮುಂದಿನ ಪ್ರಧಾನಿ
ಟೋಕಿಯೊ:ಆಡಳಿತ ಪಕ್ಷದ ನಾಯಕತ್ವದ ಚುನಾವಣೆಯ ವರದಿ ಪ್ರಕಾರ, ಫ್ಯೂಮಿಯೊ ಕಿಶಿದ ಅವರು ಜಪಾನ್ ನ ಮುಂದಿನ ಪ್ರಧಾನಿಯಾಗಲಿದ್ದಾರೆ.
ಚುನಾವಣಾ ಸ್ಪರ್ಧೆಯಲ್ಲಿ ಜಪಾನ್ ನ ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಾರ್ಟಿ (ಎಲ್ ಡಿಪಿ) ಮುಂಚೂಣಿಯಲ್ಲಿದ್ದು ಯೊಶಿಹಿಡೆ ಸುಗ ಅವರ ಉತ್ತರಾಧಿಕಾರಿಯಾಗಿ ಕಿಶಿದ ದೇಶವನ್ನು ಮುನ್ನಡೆಸಲಿದ್ದಾರೆ.
ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಎಲ್‌ಡಿಪಿಯನ್ನು ಗೆಲುವಿನತ್ತ ಮುನ್ನಡೆಸುವುದು ಪ್ರಧಾನಮಂತ್ರಿ ಯಾಗಿ ಅವರ ಮೊದಲ ಉದ್ದೇಶವಾಗಿದೆ. ಸಾರ್ವಜನಿಕ ವಿರೋಧದ ನಡುವೆಯೂ ಟೋಕಿಯೊ ಒಲಿಂಪಿಕ್ಸ್ ಆತಿಥ್ಯ ವಹಿಸಿದ ನಂತರ ಪಕ್ಷವು ಜನಪ್ರಿಯತೆಯಲ್ಲಿ ಕುಸಿತ ಕಂಡಿತು.
ಮಾಜಿ ವಿದೇಶಾಂಗ ಸಚಿವ ಕಿಶಿದ, ಟ್ಯಾರೋ ಕೊನೊ ಅವರನ್ನು ಸೋಲಿಸಿದರು. ಸಂಸತ್ತಿನಲ್ಲಿ ಎಲ್ಡಿಪಿಯ ಬಹುಮತವನ್ನು ಗಮನಿಸಿದರೆ, ಕಿಶಿದ ಅವರ ಪ್ರಧಾನ ಮಂತ್ರಿ ಸ್ಥಾನ ಭದ್ರವಾಗಿದೆ.
ಕಿಶಿದ ಅವರು ಬಹಳ ಹಿಂದಿನಿಂದಲೂ ಪ್ರಧಾನ ಮಂತ್ರಿ ಸ್ಥಾನದ ಜನಪ್ರಿಯ ಮುಖಂಡರಾಗಿದ್ದರು, ಕಳೆದ ವರ್ಷದ ಸಮೀಕ್ಷೆಯಲ್ಲಿ ಅವರು ಪ್ರಧಾನಿ ಸುಗ ವಿರುದ್ಧ ಸೋಲು ಕಂಡಿದ್ದರು. ಸಾಂಕ್ರಾಮಿಕ ರೋಗ ನಿರ್ವಹಣೆ ಯಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಸುಗ ಅವರು ಸೋಲು ಕಂಡಿರುವುದರಿಂದ, ಪ್ರಧಾನಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದರು.