ಇಂಗ್ಲೆಂಡಿನಲ್ಲಿ ಕರೋನಾ ತಾಂಡವ: 1,06,122 ಮಂದಿಗೆ ಸೋಂಕು ದೃಢ
ಲಂಡನ್:ಕರೋನಾ ವೈರಸ್ ಸಾಂಕ್ರಾಮಿಕ ಪಿಡುಗಿನಿಂದ ಇಂಗ್ಲೆಂಡಿನಲ್ಲಿ ಕಳೆದ 24 ಗಂಟೆಗಳಲ್ಲಿ ವರದಿ ಆಗಿರುವ ಕೊವಿಡ್-19 ಪ್ರಕರಣಗಳು ಹೊಸ ದಾಖಲೆ ಬರೆದಿವೆ.
ಒಂದೇ ದಿನ 1,06,122 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಇದೇ ಅವಧಿಯಲ್ಲಿ ಮಹಾಮಾರಿಗೆ 140 ಮಂದಿ ಪ್ರಾಣ ಬಿಟ್ಟಿದ್ದರೆ, 49,382 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ.

ಓಮಿಕ್ರಾನ್ ಸೋಂಕು ಹರಡುವಿಕೆ ಭೀತಿ ನಡುವೆ ಹೊಸ ಪ್ರಕರಣಗಳಲ್ಲಿನ ಏರಿಕೆ ಆತಂಕ ಸೃಷ್ಟಿಸಿದೆ. ದೇಶದಲ್ಲಿ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 1,16,47,473ಕ್ಕೆ ಏರಿಕೆಯಾಗಿದ್ದು, 1,47,573 ಮಂದಿ ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಂಕಿ-ಅಂಶಗಳು ಸ್ಪಷ್ಟಪಡಿಸುತ್ತವೆ.
ಸದ್ಯ ದಿನಕ್ಕೆ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ 919ರಷ್ಟಿದೆ. ಅದೇ ರೀತಿ ಸಾವಿನ ಸಂಖ್ಯೆ 112ರ ಆಸುಪಾಸಿನಲ್ಲಿದ್ದು ಅದು, 137ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.