ವಯಸ್ಕರ ವೆಬ್‌ಸೈಟ್’ಗೆ ಸಿಇಒ ಆಗಿ ಆಮ್ರಪಾಲಿ ‘ಆಮಿ’ ಗ್ಯಾನ್
ಕ್ಯಾಲಿಫೋರ್ನಿಯಾ:ವಯಸ್ಕರ ವೆಬ್‌ಸೈಟ್ ಓನ್ಲಿ ಫ್ಯಾನ್ಸ್ ಆಮ್ರಪಾಲಿ ‘ಆಮಿ’ ಗ್ಯಾನ್ ಅವರನ್ನು ತನ್ನ ಹೊಸ ಸಿಇಒ ಆಗಿ ನೇಮಿಸಿದೆ.
ವಿದೇಶಿ ಕಂಪನಿಗಳಲ್ಲಿ ಈ ಮೂಲಕ ಸಿಇಒ ಸ್ಥಾನ ಅಲಂಕರಿಸಿರುವ ಭಾರತೀಯರ ಪಟ್ಟಿಯಲ್ಲಿ ಅಮ್ರಪಲಿ ಜೊತೆಗೆ ಸುಂದರ್ ಪಿಚೈ, ಸತ್ಯ ನಾಡೆಲ್ಲಾ, ಇಂದ್ರ ನೂಯಿ, ಅರವಿಂದ್ ಕೃಷ್ಣ ಮತ್ತು ಪರಾಗ್ ಅಗರ್ವಾಲ್ ಆಗಿದ್ದಾರೆ. ಅಮ್ರಪಾಲಿ ಭಾರತದ ಮುಂಬೈನಲ್ಲಿ ಜನಿಸಿದ್ದು, ಉನ್ನತ ಶಿಕ್ಷಣವು ಯುಎಸ್‌ಎಯ ಕ್ಯಾಲಿಫೋರ್ನಿಯಾದಲ್ಲಿ ಪಡೆದುಕೊಂಡಿದ್ದಾರೆ,
ಆಮಿಗೆ ಪ್ರಸ್ತುತ 36 ವರ್ಷ ವಯಸ್ಸಾಗಿದ್ದು, ಮದುವೆಯಾಗಿಲ್ಲ. ಓನ್ಲಿ ಫ್ಯಾನ್ಸ್‌ನ ಸಿಇಒ ಪಾತ್ರದ ಜೊತೆಗೆ, ಗುನ್ ಕಳೆದ ನಾಲ್ಕು ವರ್ಷಗಳಿಂದ ಆರ್ಕೇಡ್ ಏಜೆನ್ಸಿಯೊಂದಿಗೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದಾರೆ. ರೆಡ್ ಬುಲ್ ಮೀಡಿಯಾ ಹೌಸ್.ಲೈವ್ ಟಿವಿ ಸೇರಿದಂತೆ ಅನೇಕ ಇತರ ಕಂಪನಿಗಳೊಂದಿಗೆ ಕೆಲಸ ಮಾಡಿದ್ದಾರೆ.