ದಕ್ಷಿಣ ಆಫ್ರಿಕಾದ ನ್ಯಾಯಾಲಯಕ್ಕೆ ಭಾರತೀಯ ನೇಮಕ
ಜೋಹಾನ್ಸ್’ಬರ್ಗ್‌:ದಕ್ಷಿಣ ಆಫ್ರಿಕಾದ ನ್ಯಾಯಪೀಠ ಸಂವಿಧಾನಾತ್ಮಕ ನ್ಯಾಯಾಲಯಕ್ಕೆ ಭಾರತೀಯ ಮೂಲದ ನರೇಂದ್ರನ್ ಜೋಡಿ ಕೊಲ್ಲಪೆನ್ ಅವರನ್ನು ನೇಮಕ ಮಾಡಲಾಗಿದೆ.
ಅಧ್ಯಕ್ಷ ಸಿರಿಲ್ ರಾಮಫೋಸಾ ಅವರು 64 ವರ್ಷ ವಯಸ್ಸಿನ ಕೊಲ್ಲಪೆನ್ ಮತ್ತು ದಮ್ಮಕ ಸ್ಟೀವನ್ ಮಥೋಪೋ ಅವರನ್ನು ಸಂವಿಧಾನಾತ್ಮಕ ನ್ಯಾಯಾಲಯಕ್ಕೆ ಹೊಸದಾಗಿ ನೇಮಕ ಮಾಡಿದ್ದಾರೆ.
ಎರಡು ಹುದ್ದೆಗಳಿಗಾಗಿ ಅಕ್ಟೋಬರ್‍ನಲ್ಲಿ ರಾಮಫೋಸಾ ಅವರು ಶಿಫಾರಸು ಮಾಡಿದ್ದ ಐವರು ಅಭ್ಯರ್ಥಿಗಳಲ್ಲಿ ಕೊಲ್ಲಪೆನ್ ಮತ್ತು ಮಥೋಪೋ ಅವರೂ ಸೇರಿದ್ದರು. 2022ರ ಜನವರಿ 1ರಂದು ಇಬ್ಬರೂ ಅಧಿಕಾರ ಸ್ವೀಕರಿಸಲಿದ್ದಾರೆ.