ಭಾರತದ ಹರ್ನಾಜ್ ಕೌರ್ ಸಂಧು ಮಿಸ್‌ ಯೂನಿವರ್ಸ್‌
ಇಸ್ರೇಲ್‌:70ನೇ ಆವೃತ್ತಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ ಹರ್ನಾಜ್ ಕೌರ್ ಸಂಧು ನೂತನ ಮಿಸ್‌ ಯೂನಿವರ್ಸ್‌ ಪಟ್ಟ ಅಲಂಕರಿಸಿದ್ದಾಳೆ.
ಮಿಸ್ ಯೂನಿವರ್ಸ್ 2021 ಸ್ಪರ್ಧೆಯಲ್ಲಿ ನಟಿ ಮತ್ತು ಮಾಡೆಲ್ ಹರ್ನಾಜ್ ಕೌರ್ ಸಂಧು ಅವರನ್ನು ಸ್ಪರ್ಧೆಯ ವಿಜೇತೆ ಎಂದು ಘೋಷಿಸುತ್ತಿದ್ದಂತೆ ಭಾರತದ ತ್ರಿವರ್ಣವು ಎತ್ತರಕ್ಕೆ ಹಾರಾಡಿದೆ. ಇಸ್ರೇಲ್‌ನ ದಕ್ಷಿಣ ನಗರವಾದ ಇಲಾಟ್‌ನಲ್ಲಿ ಡಿ.12 ರಂದು ವಿಶ್ವ ಸುಂದರಿ ಸ್ಪರ್ಧೆ ನಡೆದಿದೆ. ಮಿಸ್ ಯೂನಿ ವರ್ಸ್ 2021 ಹರ್ನಾಜ್ ಸಂಧು ಪಂಜಾಬ್‌ನ ಚಂಡೀಗಢ ಮೂಲದ ಮಾಡೆಲ್‌ ಆಗಿದ್ದಾರೆ.
ಭಾರತದ ಹರ್ನಾಜ್ ಸಂಧು ಹೊರತುಪಡಿಸಿ, ಪರುಗ್ವೆಯ ನಾಡಿಯಾ ಫೆರೇರಾ ಮೊದಲ ರನ್ನರ್ ಅಪ್, ದಕ್ಷಿಣ ಆಫ್ರಿಕಾದ ಲಲೆಲಾ ಮಸ್ವಾನೆ ಎರಡನೇ ರನ್ನರ್ ಅಪ್ ಎಂದು ಘೋಷಿಸಲಾಗಿದೆ. ಇದು ಪ್ರತಿಷ್ಠಿತವಾರ್ಷಿಕ ಕಾರ್ಯಕ್ರಮದ 70ನೇ ಆವೃತ್ತಿ ಯಾಗಿತ್ತು.
ಪಂಜಾಬ್‌ನ 21 ವರ್ಷದ ಹರ್ನಾಜ್ ಸಂಧು ಭಾರತವನ್ನು ಪ್ರತಿನಿಧಿಸಿದ್ದರು.
ಅಕ್ಟೋಬರ್‌ನಲ್ಲಿ ಹರ್ನಾಜ್ ಸಂಧು ಮಿಸ್ ಯೂನಿವರ್ಸ್ ಇಂಡಿಯಾ 2021 ಕಿರೀಟವನ್ನು ಪಡೆದಿದ್ದರು. ಅವರು ಫೆಮಿನಾ ಮಿಸ್ ಇಂಡಿಯಾ ಪಂಜಾಬ್ 2019 ನಂತಹ ಅನೇಕ ಸ್ಪರ್ಧೆಯಯಲ್ಲಿ ಭಾಗವಹಿಸಿದ್ದಾರೆ. ಜೊತೆಗೆ ಪಂಜಾಬಿ ಚಿತ್ರಗಳಲ್ಲೂ ನಟಿಸಿದ್ದಾರೆ.
ವೃತ್ತಿಯಲ್ಲಿ ಮಾಡೆಲ್ ಆಗಿರುವ ಹರ್ನಾಜ್ ಕೌರ್ ಸಂಧು, ಪಂಜಾಬ್‌ನ ಚಂಡೀಗಢದಿಂದ ಬಂದವರು.