ರಷ್ಯಾ ಸೈನ್ಯಕ್ಕೆ ಹೊಸ ಜನರಲ್ ನೇಮಕ
ಮಾಸ್ಕೋ :ಉಕ್ರೇನ್ ನಡುವಿನ ಯುದ್ಧದಲ್ಲಿ ರಷ್ಯಾ ಮಿಲಿಟರಿ ಕೀವ್ ನಗರವನ್ನು ಪೂರ್ಣವಾಗಿ ವಶಪಡಿಸಿಕೊಳ್ಳಲು ವಿಫಲವಾದ ಬೆನ್ನಲ್ಲೇ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಅವರು ಸೈನ್ಯಕ್ಕೆ ಹೊಸ ಜನರಲ್ ಆಗಿ ಅಲೆಕ್ಸಾಂಡರ್ ಡ್ವೊರ್ನಿಕೋವ್ ಅವರನ್ನು ನೇಮಿಸಿದ್ದಾರೆ.
ರಷ್ಯಾದ ದಕ್ಷಿಣ ಮಿಲಿಟರಿ ಜಿಲ್ಲೆಯ ಕಮಾಂಡರ್ ಉಕ್ರೇನ್‌ನಲ್ಲಿ ಯುದ್ಧವನ್ನು ಮುನ್ನಡೆಸಲಿದ್ದಾರೆ. ಡ್ವೊರ್ನಿಕೋವ್ ಅವರನ್ನು ಉಕ್ರೇನ್‌ನಲ್ಲಿ ರಷ್ಯಾದ ಮಿಲಿಟರಿ ಕಾರ್ಯಾಚರಣೆಯ ಥಿಯೇಟರ್ ಕಮಾಂಡರ್ ಎಂದು ಹೆಸರಿಸಲಾಗಿದೆ.
ಮೇ 9 ರಂದು ನಡೆಯಲಿರುವ `ವಿಜಯ ದಿನ ಆಚರಣೆಯ ಮೊದಲು ಯುದ್ಧಭೂಮಿಯಲ್ಲಿ ಭಾರಿ ಪ್ರಗತಿಯೊಂದಿಗೆ ಪುತಿನ್ ಅವರ ಮುಂದೆ ಕಾಣಿಸಿಕೊಳ್ಳುವ ಗುರಿಯನ್ನು ರಷ್ಯಾದ ಜನರಲ್ ಹೊಂದಿದ್ದಾರೆ ಎಂಬ ಊಹಾಪೋಹವಿದೆ.
ಮೇ 9 “ವಿಜಯ ದಿನ” ರಷ್ಯಾದಲ್ಲಿ ಅತ್ಯಂತ ಮಹತ್ವದ ದಿನವಾಗಿದೆ.
ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಶನಿವಾರ ಕೈವ್‌ನಲ್ಲಿ ಭೇಟಿಯಾಗಿ, ಉಕ್ರೇನಿಯನ್ ಜನರೊಂದಿಗೆ ಒಗ್ಗಟ್ಟು ಪ್ರದರ್ಶಿಸಲು ಉಕ್ರೇನ್‌ಗೆ ಪ್ರಯಾಣಿಸಿದ್ದೇನೆ ಎಂದು ಹೇಳಿದ್ದರು.