ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೆ ಪ್ರೋತ್ಸಾಹ ದೊರೆಯಲಿ
ಅನೇಕ ರೀತಿಯ ಸೋಂಕುಗಳು ಹಾಗೂ ರೋಗಗಳು ನಮ್ಮನ್ನು ಬಾಧಿಸುತ್ತಿರುವ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದ ತಿಳಿವಳಿಕೆಬಹಳಷ್ಟು ಅವಶ್ಯಕ. ವೈದ್ಯಕೀಯ ಸಾಹಿತ್ಯ ಆಯಾ ಕ್ಷೇತ್ರದವರಿಗೆ ಪೂರಕ ಮಾಹಿತಿಯಾದರೂ, ವೈದ್ಯಕೀಯ ಕ್ಷೇತ್ರಕ್ಕೆ ಮಾತ್ರವೇಸಂಬಂಧಿಸಿದ್ದಲ್ಲ.
ಪ್ರತಿಯೊಬ್ಬರಿಗೂ ವೈದ್ಯಕೀಯ ಕ್ಷೇತ್ರದ ಮಹತ್ವದ ವಿವರಗಳನ್ನು ತಿಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅನೇಕ ವರ್ಷ ಗಳಿಂದಲೂ ಹಿಂದಿನಿಂದಲೂ ವೈದ್ಯಕೀಯ ಸಾಹಿತ್ಯ ಕ್ಷೇತ್ರ ತನ್ನದೇ ಆದ ಅಸ್ತಿತ್ವವನ್ನು ಕಾಪಾಡಿಕೊಂಡು ಬಂದಿದೆ. ವೈದ್ಯಕೀಯ ಸಾಹಿತ್ಯವನ್ನು ಕಡೆಗಣಿಸಲಾಗಿದೆಯೇ ಎಂಬ ಕಾರಣವನ್ನು ಗಮನಿಸುವುದಾರೆ, ವಿರಳವಾಗಿದ್ದರಿಂದ ಹೆಚ್ಚಿನ ಆದ್ಯತೆ ದೊರೆಯಲಿಲ್ಲ ಹೊರತು ಕಡೆಗಣಿಸಲ್ಪಟ್ಟಿಲ್ಲ ಎಂಬುದಾಗಿ ಪರಿಗಣಿಸಬಹುದು.
ಇದಕ್ಕೆ ಕಾರಣ ಅನೇಕ ಸಾಹಿತ್ಯ ಸಮ್ಮೇಳನಗಳಲ್ಲಿ ವೈದ್ಯಕೀಯ ಸಾಹಿತ್ಯಕ್ಕೂ ಮಹತ್ವ ನೀಡಲಾಗಿದೆ. ಆದರೆ ಇಂದಿನ ದಿನಗಳಲ್ಲಿ ವೈದ್ಯಕೀಯ ಸಾಹಿತ್ಯ ಮಹತ್ವ ಪಡೆದುಕೊಳ್ಳುವುದರ ಜತೆಗೆ ಬರಹಗಾರರನ್ನು ಹೆಚ್ಚಿಸಿಕೊಂಡಿದೆ. ಬಹಳಷ್ಟು ಮನ್ನಣೆ ಹಾಗೂಮಹತ್ವ ಪಡೆದುಕೊಂಡಿದೆ. ಇಂಥ ಸಂದರ್ಭದಲ್ಲಿ ವೈದ್ಯಕೀಯ ಸಾಹಿತ್ಯ ಸಮ್ಮೇಳನಗಳು ನಡೆಸಬೇಕಿರುವುದು ಅಗತ್ಯ ಪೂರಕಬೆಳವಣಿಗೆ. ಈ ಕಾರಣದಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಬೇಕು, ಪ್ರಾದೇಶಿಕ ಮಟ್ಟದಲ್ಲಿ ಪ್ರತಿವರ್ಷ ಕಮ್ಮಟಗಳನ್ನು ನಡೆಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಆದ್ದರಿಂದ ಸಾಹಿತ್ಯ ಸಮ್ಮೇಳನಗಳಂತೆಯೇ ಪ್ರತ್ಯೇಕವಾಗಿ ವೈದ್ಯಕೀಯ ಸಮ್ಮೇಳನಗಳನ್ನು ನಡೆಸಲು ಸರಕಾರದಿಂದ ಅನುದಾನ, ಪ್ರೋತ್ಸಾಹವೂ ದೊರೆಯಬೇಕು. ಕನ್ನಡದಲ್ಲಿ ಕಂಡುಬರುತ್ತಿರುವ ವೈದ್ಯಕೀಯ ಸಾಹಿತ್ಯದ ಕೊರತೆ ನಿವಾರಣೆಗೆಮತ್ತಷ್ಟು ಪ್ರಯತ್ನಗಳು ಹೆಚ್ಚಾಗಬೇಕು. ಈ ಮೂಲಕ ಕನ್ನಡ ವೈದ್ಯಕೀಯ ಸಾಹಿತ್ಯದ ಕೊರತೆಗಳು ನಿವಾರಣೆ ಆಗಬೇಕಾಗಿರು ವುದು ಇಂದಿನ ಅವಶ್ಯಕತೆ ಹಾಗೂ ಅನಿವಾರ್ಯತೆ.