ಶಾಲಾರಂಭ; ಮಕ್ಕಳ ಆರೋಗ್ಯದ ಬಗ್ಗೆ ಇರಲಿ ಎಚ್ಚರ
ರಾಜ್ಯ ಸರಕಾರ 9ರಿಂದ 12ನೇ ತರಗತಿ ಆರಂಭಿಸಿದ ಬಳಿಕ, ಇದೀಗ ೬ರಿಂದ ಎಂಟನೇ ತರಗತಿಯವರೆಗೆ ಭೌತಿಕ ತರಗತಿಯನ್ನು ಆರಂಭಿಸಲು ಮುಂದಾಗಿದೆ. ಇಂದಿನಿಂದ ಆಫ್ಲೈನ್ ತರಗತಿಗಳು ಆರಂಭವಾಗಲಿದೆ. ಶೈಕ್ಷಣಿಕ ಹಾಗೂ ಮಕ್ಕಳ ಮಾನಸಿಕ ಆರೋಗ್ಯ ದೃಷ್ಠಿಯಿಂದ ಈ ತೀರ್ಮಾನ ಅತ್ಯಗತ್ಯವಾಗಿತ್ತು. ಆದರೆ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ 9ರಿಂದ 12ನೇ ತರಗತಿ ಆರಂಭಿಸಿದ ಬಳಿಕ, ಹಲವು ಮಕ್ಕಳಿಗೆ ಕರೋನಾ ಸೋಂಕು ಕಾಣಿಸಿಕೊಂಡಿದೆ.
ಸರಕಾರ ಹಾಗೂ ಶಾಲಾ ಹಂತದಲ್ಲಿ ಎಷ್ಟೇ ಮುಂಜಾಗೃತಾಕ್ರಮ ವಹಿಸಿದರೂ, ಸೋಂಕು ಕಾಣಿಸಿಕೊಂಡಿರು ವುದು ಆತಂಕದ ವಿಷಯ. ಮಕ್ಕಳಿಗೆ ಇನ್ನು ಲಸಿಕೆ ಸಿಗದೇ ಇರುವ ಕಾರಣ, ಸೋಂಕು ಅಂಟುತ್ತಿದೆ ಎನ್ನುವುದು ತಿಳಿದ ವಿಚಾರ. ಇದೀಗ ಎರಡನೇ ಹಂತದಲ್ಲಿ ಶಾಲೆ ಆರಂಭಿಸಲಾಗುತ್ತಿದೆ. 9ನೇ ತರಗತಿಯ ಮಕ್ಕಳಿಗೆ ಇರು ವಷ್ಟು ತಿಳುವಳಿಕೆ ಆರನೇ ತರಗತಿ ಮಕ್ಕಳಲ್ಲಿ ಇರುವುದಿಲ್ಲ. ಆದ್ದರಿಂದ ಅನಿವಾರ್ಯ ಪರಿಸ್ಥಿತಿಯಲ್ಲಿ ಆರಂಭಿಸಲಾಗುತ್ತಿರುವ ತರಗತಿಯಲ್ಲಿ ಭಾಗವಹಿಸುವ ಮಕ್ಕಳ ಪೋಷಕರು ಇನ್ನಷ್ಟು ಕಾಳಜಿ ವಹಿಸಬೇಕಿದೆ.
ಆಫ್ಲೈನ್ ತರಗತಿಗೆ ಹೋಗುವುದು ಅನಿವಾರ್ಯ ಎಂದರೆ, ಮಕ್ಕಳು ಕಳಿಸುವುದರೊಂದಿಗೆ ಅಗತ್ಯ ಮುಂಜಾ ಗೃತೆ ವಹಿಸಬೇಕಿದೆ. ಪ್ರತಿ ವಿದ್ಯಾರ್ಥಿಯ ಮೇಲೆ ಸರಕಾರ ಕಣ್ಣಿಡಲು ಸಾಧ್ಯವಿಲ್ಲ ಎನ್ನುವುದು ಒಪ್ಪುವ ಮಾತು. ಆದರೆ ಸ್ಥಳೀಯ ಶಾಲಾ ಆಡಳಿತ ಮಂಡಳಿಗಳು, ಶಾಲೆಯಲ್ಲಿ ಕರೋನಾ ಮಾರ್ಗಸೂಚಿಗಳನ್ನು ಪಾಲಿಸು ತ್ತಿವೆಯೇ ಎನ್ನುವ ಬಗ್ಗೆ ಎಚ್ಚರಿಕೆ ವಹಿಸಬೇಕಿದೆ. ಸರಕಾರ ನೀಡಿರುವ ಮಾರ್ಗಸೂಚಿಯಂತೆಯೇ, ವಾರಕ್ಕೆ ಎರಡು ಬಾರಿ ಸ್ಯಾನಿಟೈಸ್ ಮಾಡುವ, ಶಾಲೆಯಲ್ಲಿ ಸಾಮಾಜಿಕ ಅಂತರವನ್ನು ಮಕ್ಕಳು ಕಾಯ್ದುಕೊಳ್ಳುವಂತೆ ನೋಡಬೇಕಿದೆ.
ಇದರೊಂದಿಗೆ ಯಾವುದೇ ವಿದ್ಯಾರ್ಥಿಗೆ ಕರೋನಾದ ಸಣ್ಣ ಸೋಂಕು ಕಾಣಿಸಿಕೊಂಡ ರೂ, ವಿದ್ಯಾರ್ಥಿಯಲ್ಲಿ ಆತಂಕ ಮೂಡುವಂತೆ ಮಾಡದೇ, ರಜೆ ನೀಡಬೇಕು.ಕರೋನಾದೊಂದಿಗೆ ಜೀವಿಸಬೇಕು ಎನ್ನುವುದು ಖಾತ್ರಿಯಾಗಿ ರುವುದರಿಂದ, ಮಕ್ಕಳಿಗೂ ಜರೂರಾಗಿ ಲಸಿಕೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕು.