ಮತಾಂತರ ವಿಷಯದ ಬಗ್ಗೆ ಎಚ್ಚರವಿರಲಿ
ರಾಜ್ಯದಲ್ಲಿ ಇತ್ತೀಚಿನ ದಿನದಲ್ಲಿ ಮತಾಂತರದ ಸದ್ದು ಮತ್ತೆ ಶುರುವಾಗಿದೆ. ಶಾಸಕ ಗೂಳಿಹಟ್ಟಿ ಶೇಖರ್ ಅವರು ಈ ವಿಷಯ ಸದನದಲ್ಲಿ ಪ್ರಸ್ತಾಪಿಸಿದ ಬಳಿಕ, ಇದರ ಕಾವು ಇನ್ನಷ್ಟು ಹೆಚ್ಚಾಗುತ್ತಿದೆ.
ಬೆಂಗಳೂರು, ಯಾದಗಿರಿ, ಮಂಗಳೂರು ಸೇರಿದಂತೆ ವಿವಿಧ ಭಾಗದಲ್ಲಿ ಮತಾಂತರ ಮಾಡಲಾಗುತ್ತಿದೆ ಎನ್ನುವ ವರದಿ ಸಾಲು ಸಾಲಾಗಿ ಹೊರಬರುತ್ತಲೇ ಇದೆ. ಆದರೆ ಈ ವಿಷಯವನ್ನು ಸಮಾಜಕ್ಕೆ ಆಗುತ್ತಿರುವ ಮಾರಕದ ಬಗ್ಗೆ ಚರ್ಚೆ ಮಾಡುವ ಬದಲು, ರಾಜಕೀಯ ಪಕ್ಷಗಳು ತಮ್ಮ ಕೆಸರೆರಚಾಟಕ್ಕೆ ಕಾರಣವಾಗಿದೆ. ಆದರೆ ಇದನ್ನು ತಾರ್ತಿಕ ಅಂತ್ಯಗೊಳಿಸಲು ಯಾರೂ ಮನಸ್ಸು ಮಾಡದಿರುವುದು ನಿಜವಾದ ಸಮಸ್ಯೆಯಾಗು ತ್ತದೆ.
ಮತಾಂತರ ವಿಷಯ ರಾಜಕೀಯ ವೇದಿಕೆಯಲ್ಲಿ ಚರ್ಚೆಯಾಗುತ್ತಿರುವಾಗ, ಇದನ್ನು ಸಮಾಜದ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಮಾತನಾಡುವ ಬದಲು, ಕಾಂಗ್ರೆಸ್ ಮೇಲೆ ಬಿಜೆಪಿಯವರು, ಬಿಜೆಪಿಯವರ ಮೇಲೆ ಕಾಂಗ್ರೆಸ್‌ನವರು ಆರೋಪ ಮಾಡುತ್ತಿರುವುದು ಸರಿಯಲ್ಲ. ಸಂವಿಧಾನದಲ್ಲಿ ಮತಾಂತರಕ್ಕೆ ಅವಕಾಶ ವಿದೆ. ಆದರೆ ಇದು ಸ್ವ ಇಚ್ಛೆಯಿಂದ ಇದ್ದರೆ ಮಾತ್ರ ಕಾನೂನು ಬದ್ಧವಾಗಿರುತ್ತದೆ. ಆದರೆ ಇತ್ತೀಚಿನ ದಿನದಲ್ಲಿ ನಡೆಯುತ್ತಿರುವುದು, ಆಮಿಷ, ಒತ್ತಡ ಅಥವಾ ಬಲವಂತದಿಂದ ಕೂಡಿರುವುದು ಎನ್ನುವ ಆರೋಪಗಳು ಕೇಳಿಬಂದಿದೆ. ಈ ರೀತಿ ಎಲ್ಲ ಚರ್ಚುಗಳು ಮಾಡದಿದ್ದರೂ, ಕೆಲ ಚರ್ಚುಗಳಲ್ಲಿ ಈ ರೀತಿ ಚಟುವಟಿಕೆ ನಡೆಯುತ್ತಿರುವುದು ಖಂಡನೀಯ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಧರ್ಮಗಳನ್ನು ಸಮಾನವಾಗಿ ನೋಡುವ, ಭಾರತದಲ್ಲಿ ಈ ರೀತಿಯ ಬೆಳವಣಿಗೆ, ಗಣತಂತ್ರ ವ್ಯವಸ್ಥೆಗೆ ಮಾರಕ. ಇನ್ನು ರಾಜ್ಯ ಸರಕಾರವೂ, ಮತಾಂತರಕ್ಕೆ ಸಂಬಂಽಸಿದಂತೆ ಪ್ರತ್ಯೇಕ ಕಾಯಿದೆ ರೂಪಿಸುವುದಾಗಿ ಈಗಾಗಲೇ ಹೇಳಿದೆ. ಈ ಕೆಲಸಕ್ಕೆ ವೇಗ ನೀಡಬೇಕಿದೆ. ಸಮಾಜ ಸ್ವಾಸ್ಥ್ಯಕಾಪಾಡುವ ನಿಟ್ಟಿನಲ್ಲಿ ಮತಾಂತರದಂತಹ ಕೆಲಸಕ್ಕೆ ಬ್ರೇಕ್ ಹಾಕಲೇಬೇಕಾದ ಅವಶ್ಯಕತೆಯಿದೆ.