ರೂಪಾಂತರಿ ಕರೋನಾ ಬಗ್ಗೆ ಎಚ್ಚರವಿರಲಿ
ದೇಶದಲ್ಲಿ ಕರೋನಾ ಸೋಂಕಿಗೆ ರಾಮಬಾಣ ಎನಿಸಿರುವ ಕರೋನಾ ಲಸಿಕೆಯನ್ನು ನೂರು ಕೋಟಿ ಡೋಸ್ ವಿತರಿಸಿದ ಉತ್ಸಾಹದಲ್ಲಿರುವ ಸರಕಾರಗಳಿಗೆಇದೀಗ ರೂಪಾಂತರಿ ಕರೋನಾದ ಆತಂಕ ಶುರುವಾಗಿದೆ.
ರೂಪಾಂತರಿ ವೈರಸ್‌ನಿಂದ ರಷ್ಯಾ, ಚೀನಾ ಸೇರಿದಂತೆ ಹಲವು ಐರೋಪ್ಯ ರಾಷ್ಟ್ರಗಳಲ್ಲಿ ಭಾರಿ ಆತಂಕವನ್ನು ಸೃಷ್ಟಿಸುತ್ತಿರುವುದರಿಂದ ರಷ್ಯಾ, ಚೀನಾ ಸೇರಿದಂತೆ ಹಲವು ರಾಷ್ಟ್ರಗಳು ಪುನಃ ಲಾಕ್‌ಡೌನ್ ಮೊರೆ ಹೋಗಿವೆ. ಭಾರತದಲ್ಲಿಯೂ ಡೆಲ್ಟಾದ ರೂಪಾಂತರಿ ವೈರಸ್ ಕಾಣಿಸಿಕೊಂಡಿರುವ ಬಗ್ಗೆ ಹಲವು ವರದಿಗಳು ಬರುತ್ತಿರುವು ದರಿಂದ, ಈಗಷ್ಟೇ ಸಹಜ ಸ್ಥಿತಿಗೆ ಬರುತ್ತಿರುವ ಜನಜೀವನ ಮತ್ತೆ ಒಂದು ವರ್ಷದ ಹಿಂದೆ ಹೋಗುವುದೇ ಎನ್ನುವ ಆತಂಕವೂ ಶುರುವಾಗಿದೆ.
ಇನ್ನು ಈಗಾಗಲೇ ಕರ್ನಾಟಕದಲ್ಲಿ 1ನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಿದೆ. ಆದರೆ 18 ವರ್ಷ ಮೇಲ್ಪಟ್ಟ ಮಕ್ಕಳಿಗೆ ಮಾತ್ರ ಲಸಿಕೆ ನೀಡಲಾಗಿದೆ. ಆದ್ದರಿಂದ 18 ವರ್ಷ ಕೆಳಗಿನ ವಿದ್ಯಾರ್ಥಿಗಳಿಗೆ ಈಗಲೂ ಸೋಂಕು ಹಬ್ಬುವ ಆತಂಕಯಿದೆ. ಇನ್ನು ರೂಪಾಂತರಿ ಕರೋನಾ ವೈರಸ್ ಲಸಿಕೆ ಪಡೆದಿದ್ದರೂ ಬರುವ ಸಾಧ್ಯತೆ ಯಿರುವುದರಿಂದ, ಲಸಿಕೆ ಪಡೆದ ಮಾತ್ರ ಕರೋನಾ ವಿರುದ್ಧ ಸಂಪೂರ್ಣ ಗೆದ್ದಂತೆ ಎಂದು ಭಾವಿಸಬೇಕಿಲ್ಲ. ಜೀವನ ಹಾಗೂ ಜೀವದ ನಡುವೆ ಈ ಹೋರಾಟವನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಎಚ್ಚರಿಕೆಯಿಂದ ಇರಬೇಕು.
ಪ್ರತಿಬಾರಿಯೂ ಕರೋನಾ ಸೋಂಕು ಹೆಚ್ಚಾದಾಗ ಲಾಕ್‌ಡೌನ್ ಮಾಡುವ ಎಲ್ಲರನ್ನು ತಿಂಗಳುಗಟ್ಟಲೇ ಮನೆ ಯಲ್ಲಿಯೇ ಇರುವಂತೆ ನಿರ್ಬಂಧ ವಿಧಿಸುವುದಕ್ಕೆ ಸಾಧ್ಯವಿಲ್ಲ. ಜನರು ಸಾಧ್ಯ ವಾದಷ್ಟು ತಮ್ಮಲ್ಲಿಯೇ ಕರೋನಾ ಜಾಗೃತಿ ಮೂಡಿಸಿಕೊಳ್ಳುವ ಅಗತ್ಯವಿದೆ. ಕರೋನಾ ಸೋಂಕು ಕ್ಷೀಣಿಸುತ್ತಿದ್ದಂತೆ, ಮಾಸ್ಕ್ ಮರೆತು, ಸಾಮಾಜಿಕ ಅಂತರವನ್ನು ಮರೆತಿರುವ ಜನರು ಕರೋನಾ ಸಂಪೂರ್ಣವಾಗಿ ನಿರ್ಮೂಲ ನೆಯಾಗಿಲ್ಲ ಎನ್ನುವುದನ್ನು ಮರೆಯಬಾರದು. ಈ ಎಲ್ಲಕ್ಕಿಂತ ಮುಖ್ಯವಾಗಿ, ಸರಕಾರವೇ ಎಲ್ಲವನ್ನು ಮಾಡಬೇಕು ಎನ್ನುವ ಮನಸ್ಥಿತಿಯಿಂದ ಹೊರ ಬಂದು, ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎನ್ನುವುದನ್ನು ಅರಿಯಬೇಕು