ಕೋವಿಡ್ ನಿಯಮ ಉಲ್ಲಂಘನೆ: ರಾಜಕಾರಣಿಗಳಿಗೇಕೆ ವಿನಾಯಿತಿ?
ಸಿಂದಗಿ, ಹಾನಗಲ್ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಅಂತ್ಯ ಬಿದ್ದಿದೆ. ಎಲ್ಲ ಪಕ್ಷಗಳೂ ಗೆಲುವಿಗಾಗಿ ಸಭೆ, ಸಮಾರಂಭ, ಬೃಹತ್ ಸಮಾವೇಶಗಳನ್ನು ಆಯೋಜಿಸಿ ಸಂಭ್ರಮಿಸಿವೆ. ಇಲ್ಲೆಲ್ಲೂ ನಿಯಮ ಪಾಲನೆಯಾಗಿಲ್ಲವೆನ್ನುವುದು ರ‍್ಯಾಲಿಗಳ ಜನ ಜಮಾವಣೆಗೊಂಡ ಫೋಟೊ, ವಿಡಿಯೊಗಳಿಂದಲೇ ಸ್ಪಷ್ಟವಾಗಿದೆ. ನಾಯಕರ ಮಾರ್ಗ ಸೂಚಿ ಉಲ್ಲಂಘನೆ ತಡೆಗೆ ಅಧಿಕಾರಿಗಳೂ ವಿಫಲವಾಗಿದ್ದಾರೆ.
ವಾಸ್ತವವಾಗಿ ನಿಯಮ ಉಲ್ಲಂಘಿಸಿದ ಜನಪ್ರತಿನಿಧಿಗಳ ಮೇಲೆ ವಿಪತ್ತು ನಿರ್ವಹಣಾ ಕಾಯಿದೆ ಮತ್ತು ಸಾಂಕ್ರಾಮಿಕ ರೋಗಗಳ ಕಾಯಿದೆ ಯಡಿಯಲ್ಲಿ ಕ್ರಮ ಜರುಗಿಸ ಬೇಕಿತ್ತು. ಆದರೆ ಕಾನೂನು ಪಾಲಕರು ಯಾರೊಬ್ಬರ ಮೇಲೂ ಒಂದೇ ಒಂದು ಪ್ರಕರಣದಾಖಲಿಸಿಲ್ಲ. ಕರೋನಾ ವೈರಸ್ ಸೋಂಕು ನಮ್ಮ ನಡುವಿನಿಂದ ಮಾಯವೇನೂ ಆಗಿಲ್ಲ. ಆದರೆ ಜನತೆ ಅದಕ್ಕೆ ಒಂದು ರೀತಿ ಯಿಂದ ಒಗ್ಗಿ ಹೋಗಿzರೆ. ಕೋವಿಡ್ ಬಗ್ಗೆ ಮೊದಲಿದ್ದ ಆತಂಕ ಈಗ ಇಲ್ಲ. ಆದರೆ ಮುನ್ನೆಚ್ಚರಿಕೆ ಸದಾ ಬೇಕು ಎಂಬುದನ್ನು ತಜ್ಞರು, ವೈದ್ಯರು ಒತ್ತಿ ಹೇಳುತ್ತಿದ್ದಾರೆ. ಲಸಿಕೆಗಳ ಸಂಶೋಧನೆ ಅಂತಿಮ ಹಂತದಲ್ಲಿ ಇದೆಯಾ ದರೂ, ಅದು ಶ್ರೀಸಾಮಾನ್ಯರನ್ನು ತಲುಪಲು2024ರವರೆಗೂ ಕಾಯಬೇ ಕಾದೀತು ಎಂದು ತಜ್ಞರು ಹೇಳುತ್ತಿದ್ದಾರೆ.
ಹೀಗಾಗಿ ಸುರಕ್ಷತಾ ಕ್ರಮಗ ಳೊಂದಿಗೇ ಜೀವಿಸಬೇಕಾದದ್ದು ಅನಿವಾರ್ಯ. ಇಂಥ ಸನ್ನಿವೇಶದಲ್ಲಿ, ಜನಸಾಮಾನ್ಯರಿಗೆ ಮೇಲ್ಪಂಕ್ತಿ  ಹಾಕಿ ಕೊಡಬೇಕಾದ ಜನಪ್ರತಿನಿಧಿಗಳೇ ಇಂತಹ ವರ್ತನೆ ತೋರಿದರೆ ಹೇಗೆ? ಕಾನೂನು ಮಾಡಿರುವುದು ಎಲ್ಲರಿಗಾಗಿ ಎಂದರೆ, ನಾಯಕರು ಅದನ್ನು ಪಾಲಿಸುವಲ್ಲಿ ಮುಂಚೂಣಿಯಲ್ಲಿರಬೇಕು. ಬಿಬಿಎಂಪಿ ಮಾರ್ಷಲ್‌ಗಳು, ಪೊಲೀಸರು ಹಾದಿಬೀದಿಯಲ್ಲಿ ಮಾ ಧರಿಸದೆ ಹೋಗುವ ಪಾದಚಾರಿಗಳ ಮೇಲೆ ಮುಗಿಬಿದ್ದು ದಂಡ ವಸೂಲು ಮಾಡು ತ್ತಾರೆ. ಆದರೆ, ಸಚಿವರೇ ಮಾ ಇಲ್ಲದೆ ಕಾರ್ಯಕ್ರಮದಲ್ಲಿ ಭಾಗವಹಿಸು ತ್ತಾರೆ, ನಾನು ಹಾಗೆ ಮಾಡಬಾರದೇ ಎಂದು ಸಾಮಾನ್ಯರು ಪ್ರಶ್ನಿಸಿದರೆ ಅದಕ್ಕೆ ಉತ್ತರ ನೀಡುವು ದಾದರೂ ಹೇಗೆ? ಹಾಗೆ ನೋಡಿದರೆ ಜನಸಾಮಾನ್ಯರು, ಕಾರ್ಪೊರೇಟ್ ಸಂಸ್ಥೆಗಳೇ ಇದ್ದುದರಲ್ಲಿ ಪರವಾಗಿಲ್ಲ.
ಸಮಾರಂಭಗಳೆಲ್ಲ ವರ್ಚುವಲ್ ಆಗಿವೆ. ಮಿಟಿಂಗ್ ಗಳು ವೆಬಿನಾರ್‌ಗಳಾಗಿವೆ. ಮನೆ ಕಾರ‍್ಯಕ್ರಮ ಗಳಲ್ಲಿ ನಿಗದಿತ ಸಂಖ್ಯೆಯ ಜನರಪ್ರಮಾಣ ಮೀರುವುದಿಲ್ಲ. ಅಷ್ಟರ ಮಟ್ಟಿಗೆ ನೇರ ಸಂಪರ್ಕವನ್ನು ತಪ್ಪಿಸುವ ಕರ್ತವ್ಯ ಮಾಡುತ್ತಿದ್ದಾರೆ. ಆದರೆ ರಾಜಕೀಯ ನಾಯಕರೇ ಈ ನಿಷ್ಠೆಯನ್ನು ಕೆಡಿಸುವಂತೆ ವರ್ತಿಸಿದರೆ ಎಲ್ಲವೂ ಹದ ತಪ್ಪಿ ಹೋಗುತ್ತವೆ.