ಸೋಲು-ಗೆಲುವು ಸಾಧನೆಯ ಮಾನದಂಡವಲ್ಲ
ಉಪಚುನಾವಣೆ ಫಲಿತಾಂಶವನ್ನು ಅನೇಕರು ಅನೇಕ ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ. ಸಿಎಂ ಅಽಕಾರ ವಹಿಸಿಕೊಂಡ ನಂತರ ಮೊದಲ ಉಪಚುನಾವಣೆಎದುರಿಸಿದ ಬೊಮ್ಮಾಯಿ ಅವರಿಗೆ ಇದು ಅಗ್ನಿಪರೀಕ್ಷೆ ಎಂದೇ ಬಹುತೇಕರು ಬಿಂಬಿಸಿದ್ದರು.
ಇದೀಗ ಫಲಿತಾಂಶ ಬಂದೊಡನೆ ಬೊಮ್ಮಾಯಿ ಅವರು ಸಿಂದಗಿಯಲ್ಲಿ ಬಿಜೆಪಿ ಗೆದ್ದು ಬೀಗುವಂತೆ ಮಾಡಿದರೂ, ತಮ್ಮ ತವರು ಜಿಲ್ಲೆಯ ಹಾನಗಲ್ ಕ್ಷೇತ್ರದಲ್ಲಿ ಗೆಲ್ಲುವಲ್ಲಿ ವಿ-ಲವಾಗಿದ್ದಾರೆ. ಹೀಗಾಗಿ, ಇದು ಅವರಿಗೆ ಬಹು ದೊಡ್ಡ ಹಿನ್ನೆಡೆಯಾಗುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವನ್ನು ಹೊರಹಾಕುತ್ತಿದ್ದಾರೆ. ಆದರೆ, ಬೊಮ್ಮಾಯಿ ಅವರು ಚುನಾವಣೆ ಗೆಲ್ಲುವ ಎಲ್ಲ ಕಸರತ್ತುಗಳನ್ನು ನಡೆಸಿದ್ದು, ಅಗತ್ಯವಿರುವ ಹೋರಾಟ ಮಾಡಿದ್ದಾರೆ.
ಸಿಂದಗಿ ಗೆಲುವಿಗೆ ಸಿಎಂ ಬೊಮ್ಮಾಯಿ ಸೇರಿದಂತೆ ಉಳಿದೆಲ್ಲ ಬಿಜೆಪಿ ನಾಯಕರು ಎಷ್ಟು ಕಾರಣವೋ, ಅದೇ ರೀತಿ ಅಲ್ಲಿನ ಅಭ್ಯರ್ಥಿ ಆಯ್ಕೆಯೂ ಕೂಡ ಕಾರಣವಾಗಿದೆ. ಹಾನಗಲ್ ಸೋಲಿಗೆ ಕೂಡ ಅಭ್ಯರ್ಥಿ ಆಯ್ಕೆಯೇ ಕಾರಣ ಎನ್ನಬಹುದು. ಹಾನಗಲ್‌ನ ಶಾಸಕ ಸಿಎಂ ಉದಾಸಿ ಸಾವಿನ ನಂತರ ಅಲ್ಲಿ ಅವರ ಕುಟುಂಬಸ್ಥರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಭಾವನೆ ಎಲ್ಲರಿಗಿತ್ತು. ಆದರೆ, ಕುಟುಂಬ ರಾಜಕಾರಣಕ್ಕೆ ಮಣೆ ಹಾಕುವುದು ಬೇಡ ಎಂಬ ಸಿದ್ಧಾಂತವನ್ನು ಕೆಲವೊಮ್ಮೆ ಪ್ರಯೋಗ ಮಾಡುವ ಬಿಜೆಪಿ ಹೈಕಮಾಂಡ್ ಇದೇ ಕಾರಣಕ್ಕೆ ಸಜ್ಜನ್ನವರ್ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿತ್ತು.
ಸಿಎಂ ಉದಾಸಿ ಕುಟುಂಬದ ಪರವಾಗಿದ್ದ ಮತಗಳು ಸಹಜವಾಗಿಯೇ ಪಕ್ಷದಿಂದ ವಿಮುಖವಾಗಿವೆ ಎಂದು ಹೇಳಲಾಗುತ್ತಿದೆ. ಜತೆಗೆ, ಕಾಂಗ್ರೆಸ್‌ನ ಶ್ರೀನಿವಾಸ್ ಮಾನೆ ಅವರ ವರ್ಚಸ್ಸು, ಕ್ಷೇತ್ರದಲ್ಲಿ ಹೆಚ್ಚಾಗಿತ್ತು. ಇದರ ಜತೆಗೆ, ಬಿಜೆಪಿಯೊಳಗಿನ ಗೊಂದಲ ಸೇರಿ ಕೊಂಡು, ಸೋಲಿಗೆ ಕಾರಣವಾಯಿತು ಎಂಬ ವಿಶ್ಲೇಷಣೆಯೂ ಇದೆ. ಯಡಿಯೂರಪ್ಪ ಅವರು ಕ್ಷೇತ್ರಕ್ಕೆ ತಡವಾಗಿ ಪ್ರಚಾರಕ್ಕೆ ಬಂದ ಕಾರಣದಿಂದ ಮತ್ತಷ್ಟು ಹಿನ್ನೆಡೆಯಾಯಿತು ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲ ಹಿನ್ನೆಲೆಯಲ್ಲಿ ಸಿಎಂ ಹೆಗಲಿಗೆ ಸೋಲು ಗೆಲುವಿನ ಹೊಣೆಯನ್ನು ಕಟ್ಟುವುದು ಥರವಲ್ಲ ಎಂಬುದನ್ನು ಗಮನಿಸಬೇಕಿದೆ. ಸಮಬಲದ ಫಲಿತಾಂಶ ಬಂದರೂ, ಹಿನ್ನೆಡೆ ಎಂಬುದೂ ಸೂಕ್ತವಲ್ಲ.