ಮಾದರಿ ಕೃಷಿ ಕಾಯಿದೆ ರೂಪಿಸಿ
ಕೇಂದ್ರ ಸರಕಾರವು ಮೂರು ಕೃಷಿ ಕಾಯಿದೆಗಳನ್ನು ಹಿಂಪಡೆದುಕೊಳ್ಳುವ ನಿರ್ಧಾರ ಪ್ರಕಟಿಸಿರುವುದರಿಂದ ದೇಶದ ಬಹುದೊಡ್ಡ ಜನಸಂಖ್ಯೆಯ ರೈತರಗುಂಪೊಂದು ಹರ್ಷ ವ್ಯಕ್ತಪಡಿಸುತ್ತಿದ್ದರೆ, ಅಷ್ಟೇ ಜನಸಂಖ್ಯೆಯ ಇನ್ನೊಂದು ರೈತರ ಗುಂಪು ಬೇಸರಗೊಂಡಿದೆ.
ಅದಕ್ಕೆ ಕಾರಣ, ಪ್ರಕೃತಿ ವಿಕೋಪದಿಂದ ಪ್ರತಿ ವರ್ಷ ಹಾಳಾಗುತ್ತಿರುವ ಬೆಳೆ, ಭೂಮಿಯಲ್ಲಿ ರೈತರು ಹೂಡಿದ ಬಂಡವಾಳದ ಅರ್ಧದಷ್ಟೂ ವಾಪಸ್ ಆಗದೇ ಇರುವುದು ಸೇರಿದಂತೆ ಅನೇಕ ಸಮಸ್ಯೆಗಳು. ವಾಸ್ತವ್ಯಕ್ಕೆ ಕೃಷಿ ಕಾಯಿದೆಗಳ ವಿರುದ್ಧದ ಹೋರಾಟವು ರಾಜಕೀಯ ರೂಪ ಪಡೆದದ್ದಂತೂ ಸತ್ಯ. ಆ ಮೂರೂ ಕಾಯಿದೆ ಗಳಲ್ಲಿರುವ ಸಂತ್ಯಾಂಶವನ್ನು ಅರಿಯದ ಗುಂಪೊಂದು ಕೇಂದ್ರ ಸರಕಾರದ ಮೇಲೆ ಹಗೆತನ ಸಾಧಿಸುವುದಕ್ಕೆ ಈ ಪ್ರತಿಭಟನೆ ಯನ್ನು ಬಳಸಿಕೊಂಡಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕೇಂದ್ರ ಸರಕಾರ ಇಷ್ಟಕ್ಕೇ ಸುಮ್ಮ ನಾದರೆ ಸರಕಾರದ ಮೇಲೆ ನಿಜವಾದ ರೈತರು ಇಟ್ಟ ನಂಬಿಕೆಗೆ ದ್ರೋಹ ಬಗೆದಂತಾಗುತ್ತದೆ.
ಮುಂಬರುವ ದಿನಗಳಲ್ಲಿ ಈ ಕಾಯಿದೆಯಲ್ಲಿರುವ ಲೋಪದೋಷಗಳನ್ನು ಸರಿಪಡಿಸಿ, ರೈತ ಸಮುದಾಯ ಗಳೊಂದಿಗೆ ಚರ್ಚಿಸಿ, ಪ್ರತಿಪಕ್ಷದವರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ್ತೆ ಮಾದರಿ ಕಾಯಿದೆಗಳ ಜಾರಿಗೆ ಮುಂದಾಗಬೇಕು. ಕನಿಷ್ಠ ಬೆಂಬಲ ಬೆಲೆಯನ್ನುವೈeನಿಕವಾಗಿ ಲೆಕ್ಕಾಚಾರ ಮಾಡಿ ಜಾರಿಗೆ ತರಬೇಕು. ಇಲ್ಲವಾದಲ್ಲಿ ಯಥಾಪ್ರಕಾರ ರೈತ ಸಮುದಾಯದ ಗೋಳು ಮುಂದುವರಿಯುತ್ತದೆ. ದೇಶದ ಶೇಕಡಾ 60ರಷ್ಟು ಭಾಗದ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಕೃಷಿಯನ್ನು ಈವರೆಗಿನ ಎಲ್ಲ ಸರಕಾರಗಳೂ ನಿರ್ಲಕ್ಷಿಸಿ ದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಮಾತ್ರ ರೈತ ಸಮುದಾಯದ ಹಿತ ಬಯಸಿ, ನೂತನ ಕೃಷಿ ಕಾಯಿದೆಗಳ ಜಾರಿಗೆ ಮುಂದಾ ಗಿತ್ತು. ಆದರೆ, ಅವುಗಳನ್ನು ಅರ್ಥ ಮಾಡಿಕೊಳ್ಳಲು ರೈತರ ಒಂದು ವರ್ಗ ಸಂಪೂರ್ಣ ವಿಫಲವಾಯಿತು. ಅದರ ಪರಿಣಾಮ ಇಡೀ ರೈತ ಸಮುದಾಯದ ಮೇಲೆ ಬಿದ್ದಂತಾಗಿದೆ.
ಇದು ಎತ್ತಿಗೆ ಜ್ವರ ಬಂದರೆ, ಎಮ್ಮೆಗೆ ಬರೆ ಹಾಕಿದಂತಾಗಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರವು ಚಿಂತನೆ ನಡೆಸಿ ಮಾದರಿ ಕಾಯಿದೆ ರೂಪಿಸಿ, ಜಾರಿ ಗೊಳಿಸುವ ಮೂಲಕ ರೈತ ಸಮುದಾಯದ ಬೆನ್ನಿಗಿದೆ ಎಂಬುದನ್ನು ಸಾಬೀತುಪಡಿಸಬೇಕು.