ಸಾವನ್ನೂ ಸಂಭ್ರಮಿಸುವ ಮನಸ್ಸು ಗಳಿಗೆ 
ಮೂರೂ ಸೇನಾಪಡೆಗಳಿಗೂ ಏಕೈಕ ಮುಖ್ಯಸ್ಥರಾಗಿದ್ದ (ಚೀಫ್ ಆಫ್ ದಿ ಡಿಫೆನ್ಸ್ ಸ್ಟಾಫ್) ಬಿಪಿನ್ ರಾವತ್ ಸೇರಿದಂತೆ ಹದಿಮೂರು ಮಂದಿ ಹೆಲಿಕಾಪ್ಟರ್ದುರಂತದಲ್ಲಿ ಮೃತಪಟ್ಟಿರುವುದು ಇಡೀ ದೇಶಕ್ಕೆ ಅರಗಿಸಿಕೊಳ್ಳಲಾಗದ ಸತ್ಯ. ಈ ದೇಶಕ್ಕೆ ರಾವತ್ ಅವರ ಕೊಡುಗೆ ಅಪಾರವಾಗಿದೆ.
1987ರಲ್ಲಿ ಅರುಣಾಚಲ ಪ್ರದೇಶದ ಸುಮದೊರೋಂಗ್ ಚು ಕಣಿವೆಯಲ್ಲಿ ಚೀನಾ ಮತ್ತು ಭಾರತ ಸೇನೆ ಮುಖಾಮುಖಿಯಾದಾಗ ಬಿಪಿನ್ ರಾವತ್ ನೇತೃತ್ವದ ಬಟಾಲಿಯನ್ ಪ್ರಮುಖ ಪಾತ್ರ ವಹಿಸಿತ್ತು. 2015ರಲ್ಲಿ ಮಯನ್ಮಾರ್ ನಲ್ಲಿ ಭಯೋತ್ಪಾದಕರ ವಿರುದ್ಧ ನಡೆದ ಕ್ಷಿಪ್ರ ಕಾರ್ಯಾಚರಣೆಯಲ್ಲೂ ಬಿಪಿನ್ ರಾವತ್ ಅವರ ಪಾತ್ರ ಪ್ರಮುಖವಾಗಿತ್ತು. ಕಾಂಗೋದಲ್ಲಿ ವಿಶ್ವಸಂಸ್ಥೆಯ ಪರವಾಗಿ ಹೋದ ಭಾರತೀಯ ಸೇನಾ ಪಡೆಯ ನೇತೃತ್ವವನ್ನು ರಾವತ್ ಅವರೇ ವಹಿಸಿದ್ದರು.
ಇಂಥ ಹಲವಾರು ಮಹತ್ತರ ಮೈಲುಗಲ್ಲುಗಳಿಗೆ ರಾವುತ್ ನೇತೃತ್ವ ವಹಿಸಿದ್ದರು. ಅವರ ಸಾವಿಗೆ ಇಡೀ ದೇಶವೇ ಕಂಬನಿ ಮಿಡಿದಿದೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆಸ್ಸಾಂನಲ್ಲಿ ಸೈನಿಕರು ನಾಗರಿಕರ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೂ ಇದಕ್ಕೂ ತಳುಕು ಹಾಕಿ ‘ಮನುಷ್ಯನನ್ನು ಡೀಲ್ ಮಾಡಲು ಕರ್ಮ ತನ್ನದೇ ಆದ ದಾರಿಯನ್ನು ಹೊಂದಿದೆ’ ಎಂದು ನಿವೃತ್ತ ಸೇನಾ ಅಧಿಕಾರಿ ಕರ್ನಲ್ ಬಲ್ಜಿತ್ ಭಕ್ಷಿ ಎಂಬುವವರು ಟ್ವೀಟ್ ಮಾಡಿದ್ದು, ಅನೇಕರನ್ನು ಕೆರಳಿಸಿದೆ.
ಡಾ.ಆಸಿಫ್ ಮಕ್ಬೂಲ್ ಎಂಬುವವರು ’ಕರ್ಮ ಎನ್ನುವುದು ವೇಶ್ಯೆಯ ಹಾಗೆ. ಕೆಮಿಕಲ್ ಆಯುಧದ ಮೂಲಕ ನಮ್ಮ ಹೀರೋಗಳನ್ನು ನೀನು ಹೊಡೆದುರುಳಿಸಿದೆ, ಈಗ ದೇವರು ತನ್ನದೇ ಶೈಲಿಯಲ್ಲಿ ನೀನು ಮಾಡಿದ ಕರ್ಮವನ್ನು ಅನುಭವಿಸುವಂತೆ ಮಾಡಿದ್ದಾನೆ’ ಎಂದು ಟ್ವೀಟ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಡೀ ದೇಶವೇ ರಾವತ್ ಸಾವಿನ ಘಟನೆಯ ಬಗ್ಗೆ ಕಂಬನಿ ಮಿಡಿಯುತ್ತಿದ್ದರೆ ಈ ಇಬ್ಬರು ಮಾತ್ರ ಸಾವಿನಲ್ಲೂ ಖುಷಿ ಪಡುವ ಹೀನ ಮನಸ್ಥಿತಿಯನ್ನು ಪ್ರದರ್ಶಿಸಿ ರುವುದು ನಾಚಿಕೆಗೇಡು.
ಬೇರೊಬ್ಬರಿಗೆ ಕೆಟ್ಟದ್ದನ್ನು ಬಯಸುವ, ದುರಂತದಲ್ಲೂ ಖುಷಿಪಡುವ ಇಂಥ ಮನಸ್ಥಿತಿಗಳೇ ದೇಶಕ್ಕೆ ಮಾರಕ. ದುರ್ಘಟನೆಯನ್ನು ಅಪಹಾಸ್ಯ ಮಾಡುವ ಇಂತಹ ನೀಚ ಮನಸ್ಸುಗಳಿಗೆ ರಿಪ್, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ರಾವತ್‌ಗೆ ಜೈ ಜವಾನ್.