2ನೇ ಡೋಸ್ ಲಸಿಕೆ ವಿತರಣೆಗೆ ಬೇಕಿದೆ ಇನ್ನಷ್ಟು ವೇಗ
ಕೋವಿಡ್ ಲಸಿಕೆ ವಿತರಣೆಯಲ್ಲಿ ಬೆಂಗಳೂರು ನಗರ ಜಿಲ್ಲೆ ಮುಂಚೂಣಿಯಲ್ಲಿದ್ದು, ಎರಡನೇ ಡೋಸ್ ವಿತರಣೆಯಲ್ಲೂ ಶೇ.100 ರಷ್ಟು ಗುರಿ ಸಾಧಿಸಿರುವುದುಸ್ವಾಗತಾರ್ಹ.
ಆದರೆ ಬೆಂಗಳೂರಿನಲ್ಲಿ ವಲಸೆ ಕಾರ್ಮಿಕರೇ ಅಧಿಕ ಪ್ರಮಾಣದಲ್ಲಿರುವುದರಿಂದ ಅವರಲ್ಲಿ ಅನೇಕರು ಬೆಂಗಳೂರು ವ್ಯಾಪ್ತಿಯಲ್ಲಿ ತಮ್ಮ ಗುರುತಿನ ಚೀಟಿ ಹೊಂದಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಇನ್ನೂ ಲಕ್ಷಾಂತರ ಜನರು ಎರಡನೇ ಡೋಸ್ ಹಾಕಿಸುವುದು ಬಾಕಿ ಇದೆ. ಹೀಗಾಗಿ ಇದು ಶೇ.100 ರಷ್ಟು ಗುರಿ ಸಾಧನೆ ಎಂದು ಮೈಮರೆಯಬೇಕಾಗಿಲ್ಲ. ಆರೋಗ್ಯ ಇಲಾಖೆಯ ಸಿಬ್ಬಂದಿಯು ಬೆಂಗಳೂರಿನಲ್ಲಿರುವ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಜನರನ್ನು ಗುರುತಿಸಿ ಎರಡನೇ ಡೋಸ್ ಕೊಡಿಸುವತ್ತ ಗಮನಹರಿಸಬೇಕಿದೆ.
ರಾಜ್ಯದಲ್ಲಿ 18 ವರ್ಷ ಮೇಲ್ಪಟ್ಟ 4.89 ಕೋಟಿ ಮಂದಿಯ ಪೈಕಿ 3.67 ಕೋಟಿ ಮಂದಿ ಎರಡೂ ಡೋಸ್ ಲಸಿಕೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಅಂದರೆ ಇನ್ನೂ 1.22 ಕೋಟಿ ಜನರು ಎರಡನೇ ಡೋಸ್ ಲಸಿಕೆ ಪಡೆಯು ವುದು ಬಾಕಿ ಇದೆ. ಅಂದರೆ ವ್ಯಾಕ್ಸಿನ್ ಕಂಡುಹಿಡಿದ ನಂತರದ ಕಳೆದ ಒಂದು ವರ್ಷದಲ್ಲಿ ಶೇ.75ರಷ್ಟು ಮಾತ್ರ ಗುರಿ ಸಾಧಿಸಲು ಸಾಧ್ಯವಾಗಿದೆ. ಇನ್ನೂ ಶೇ.25ರಷ್ಟು ಗುರಿ ಸಾಧಿಸಬೇಕಿದೆ ಎಂಬುದು ಗಂಭೀರವಾಗಿ ಪರಿ ಗಣಿಸಬೇಕಾದ ಅಂಶ. ಕೋವಿಡ್ ಮತ್ತು ಒಮೈಕ್ರಾನ್ ಸಾಂಕ್ರಾಮಿಕ ಸೋಂಕು ಆಗಿರುವುದರಿಂದ ಲಸಿಕೆ ಯಿಂದ ಒಬ್ಬರೇ ಉಳಿದರೂ ನಾವು ಅಪಾಯದಲ್ಲಿದೇವೆಯೆಂದೇ ಅರ್ಥ.
ಹೀಗಾಗಿ ಲಸಿಕೆ ವಿತರಣೆಯಲ್ಲಿ ಹಿಂದೆ ಇರುವ ಕಲಬುರಗಿ (ಶೇ.60), ರಾಯಚೂರು (ಶೇ.64) ಸೇರಿದಂತೆ 15 ಜಿಲ್ಲೆಗಳಲ್ಲಿ ಲಸಿಕೆ ವಿತರಣೆಗೆ ವೇಗ ನೀಡಬೇ ಕಿದೆ. ಜತೆಗೆ ಎಲ್ಲರೂ ಲಸಿಕೆ ಪಡೆಯುವುದರ ಜತೆಗೆ ಕರೋನಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಿದೆ. ಕರೋನಾ ವೈರಸ್ ನ ಹೊಸ ರೂಪಾಂತರ ತಳಿ ಒಮೈಕ್ರಾನ್‌ನಿಂದಾಗಿ ದೇಶದಲ್ಲಿ ಕೋವಿಡ್ ಮೂರನೇ ಅಲೆ ಕಾಣಿಸಿಕೊಳ್ಳಲಿದೆ. ಇದು ಫೆಬ್ರುವರಿ ವೇಳೆಗೆ ಉತ್ತಂಗ ಸ್ಥಿತಿ ತಲುಪುವ ಸಾಧ್ಯತೆ ಇದೆ ಎಂದು ಸಂಶೋಧಕರು ಹೇಳಿದ್ದನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕಿದೆ.