ಹೊಸ ವರ್ಷಾಚರಣೆಯಲ್ಲಿ ಮೈಮರೆಯದಿರಿ !
ಹೊಸ ವರ್ಷದ ಆಚರಣೆಯ ಮುಂದೆ ಜನರಿಗೆ ಯಾವುದೂ ಮುಖ್ಯವಲ್ಲ ಎಂಬುದೇನೋ ನಿಜವೆ. ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಜನತೆಮೈಮರೆಯದಂತೆ ಹೊಸ ವರ್ಷದ ಆಚರಣೆ ಮಾಡುವುದು ಕ್ಷೇಮ ಎನಿಸುತ್ತದೆ.
ಕಳೆದ ಎರಡು ವರ್ಷದಿಂದ ಹೊಸ ವರ್ಷದ ಆಚರಣೆ ಕಳೆಗುಂದಿದೆ. ಆದರೆ, ವರ್ಷಾ ಚರಣೆಯ ಸಂಭ್ರಮಕ್ಕಿಂತ ಕೋವಿಡ್‌ನಲ್ಲಿ ಅಸು ನೀಗಿದವರ ಸಂಕಷ್ಟಗಳು ಭಯಾನಕ. ಹೀಗಿರುವಾಗ ನಮಗೆ ಹೊಸವರ್ಷದ ಸಂಭ್ರಮಾಚರಣೆ ಈ ವರ್ಷ ಬೇಡ ಎನಿಸದಿ ರದು. ಸರಕಾರ ಈ ಸಂಭ್ರಮಾಚರಣೆಯಿಂದ ಕೋವಿಡ್ ಸೋಟದ ಸಾಧ್ಯತೆಯಿದೆ ಎಂದು ಕೆಲವೊಂದು ನಿಯಮಗಳನ್ನು ಜಾರಿಗೆ ತಂದಿದೆ. ಸರಕಾರ ಜಾರಿಗೆ ತರುವ ಕೆಲವು ನಿಯಮಗಳು ಎಡವಟ್ಟಿನಿಂದಲೇ ಕೂಡಿರಬಹುದು.
ಆದರೆ, ನಮ್ಮ ಆರೋಗ್ಯದ ಹಿತದೃಷ್ಠಿಯಿಂದ, ಮುಂದಾಗುವ ಅಪಾಯದ ಕಾರಣದಿಂದ ಹೊಸ ವರ್ಷಾಚರಣೆಯಲ್ಲಿ ಮೈಮರೆಯ ದಿರುವುದು ಸೂಕ್ತ ಎನ್ನಬಹುದು. ಈಗಾಗಲೇ, ಒಮೈಕ್ರಾನ್ ರೂಪಾಂತರಿ ವೈರಸ್ ದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ದೇಶದಲ್ಲಿ ೯೬೧ ಒಮೈಕ್ರಾನ್ ಪ್ರಕರಣಗಳು ಕಂಡುಬಂದಿವೆ. ರಾಜ್ಯದಲ್ಲಿ ಈವರೆಗೆ ೪೩ ಪ್ರಕರಣಗಳು ಕಂಡುಬಂದಿದೆ.
ಜತೆಗೆ, ಕಳೆದೆರಡು ದಿನಗಳಲ್ಲಿ ಕರೋನಾ ಪ್ರಕರಣಗಳ ಸಂಖ್ಯೆಯೂ ಹೆಚ್ಚುತ್ತಿದೆ. ಬುಧವಾರ ಬೆಂಗಳೂರಿನಲ್ಲಿಯೇ ೪೦೦ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಮುಂದಿನ ದಿನಗಳಲ್ಲಿ ಸೋಂಕಿನ ಪ್ರಮಾಣ ಹೆಚ್ಚಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಕಾರಣಗಳಿಂದ ಹೊಸ ವರ್ಷದ ಸಂಭ್ರಮ ಇತಿಮಿತಿಯಲ್ಲಿದ್ದರೆ ಒಳ್ಳೆಯದು ಎಂಬುದು ಸರಕಾರದ ನಿರ್ಧಾರ. ಈ ನಡುವೆ ಸಾರ್ವಜನಿಕರು ಸಾರ್ವಜನಿಕ ಸ್ಥಳಗಳಲ್ಲಿ ಗುಂಪುಗುಂಪಾಗಿ ಸೇರಿ ಪಾರ್ಟಿ ಆಯೋಜನೆ ಮಾಡುವುದು, ಮತ್ತಿತರ ಯೋಜನೆಗಳನ್ನು ನಡೆಸದೆ ಸರಕಾರಕ್ಕೆ ಸಹಕಾರ ನೀಡುವ ಮೂಲಕ, ತಮ್ಮ ಇತಿಮಿತಿಯಲ್ಲಿಯೇ ಸಂಭ್ರಮಪಟ್ಟು, ಹೊಸ ವರ್ಷವನ್ನು ಆಚರಿಸಬೇಕಿದೆ. ಇದರಿಂದ ಮುಂದೆ ಆಗಬಹುದಾದ ಕರೋನಾ ಸೋಟವನ್ನು ತಡೆಯುವುದು ಇದರಿಂದ ಸಾಧ್ಯವಾಗಬಹುದು.
ಒಮೈಕ್ರಾನ್ ಅಷ್ಟೊಂದು ಮರಣಾಂತಿಕವಲ್ಲ ಎಂಬ ಮಾತಿದೆಯಾದರೂ, ಅದು ಸಾಭೀತಾಗಿಲ್ಲ. ಈ ಹಿನ್ನೆಲೆಯಲ್ಲಿ ಹೊಸವರ್ಷ ಆಚರಣೆಮಾಡುವಾಗ ಹೊಣೆಗಾರರಾಗಿ ನಡೆದುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರತಿಯೊಬ್ಬ ನಾಗರಿಕರು ಸಾರ್ವಜನಿಕ ಹಿತದೃಷ್ಠಿ ಯಿಂದ ವರ್ಷಾಚರಣೆಯ ಸಂಭ್ರಮ ನಡೆಸಬೇಕೆಂಬುದು ಸೂಕ್ತ.