ಹೊಸದಾಗಿ ಸಂಕಲ್ಪಗಳಿರಲಿ!
ಹೊಸ ವರ್ಷ ಎಂದೊಡನೆ ಕೆಲ ಬದಲಾವಣೆಗಳನ್ನು ಮಾಡಿಕೊಳ್ಳುವುದು ನಮ್ಮ ಸಹಜ ಮನೋಧರ್ಮ. ಈ ವರ್ಷದಲ್ಲಿ ಹೊಸ ವರ್ಷದಿಂದ ನಾವು ಕೆಲವೊಂದಿಷ್ಟು ಬದಲಾವಣೆಗಳನ್ನು ಮಾಡಿಕೊಳ್ಳಲೇಬೇಕು.
ಈ ನಿಟ್ಟಿನಲ್ಲಿ ಇಂದಿನಿಂದಲೇ ನಮ್ಮೊಳಗೊಂದಿಷ್ಟು ಸಂಕಲ್ಪಗಳನ್ನು ಮಾಡಿಕೊಳ್ಳುವುದು ಒಳ್ಳೆಯದು. ಈಗ ಕರೋನಾ ಕಾಲ, ನಾವು ಕಳೆದ ವರ್ಷವೇ ಕರೋನಾದ ಆರ್ಭಟವನ್ನು ಕಣ್ಣಾರೆ ಕಂಡಿದ್ದೇವೆ. ಅದೆಷ್ಟೋ ನಮ್ಮ ನಡುವೆಯೇ ಇದ್ದ ಜೀವಗಳನ್ನು ಕಳೆದು ಕೊಂಡಿ ದ್ದೇವೆ. ಸಾಕಷ್ಟು ಜನ ಬೆಡ್‌ಗಾಗಿ, ಹಪಹಪಿಸಿದ ಕ್ಷಣಗಳನ್ನು ಆಕ್ಸಿಜನ್ ಕೊರತೆಯಿಂದ ನರಳಾಡಿದವರನ್ನು, ಚಿಕಿತ್ಸೆ ಸಿಗದೆ ಒದ್ದಾಡಿದವರನ್ನು, ಚಿಕಿತ್ಸೆ ಸಿಕ್ಕರೂ ಕರೋನಾ ಕಹಿ ನೆನಪಿನಿಂದ ಹೊರಬರಲಾದರೆ ನರಳಿದ ಜನರನ್ನು ಕಣ್ಣಾರೆ ಕಂಡಿದ್ದೇವೆ.
ಹೀಗಾಗಿ, ಈ ವರ್ಷದ ಮೊದಲನೇ ಆಧ್ಯತೆ ಮೂರನೇ ಅಲೆಗೆ ನಾವು ಆಹ್ವಾನ ನೀಡ ದಂತೆ ಬದುಕುವುದು ಹೇಗೆ ಎಂಬುದನ್ನು ತಿಳಿದು ಕೊಳ್ಳಬೇಕಿದೆ. ಅದಕ್ಕೆ ಅಗತ್ಯವಾಗಿ ಸರಕಾರ ರೂಪಿಸಿರುವ ನಿಯಮ ಪಾಲನೆ ಮಾಡುವುದು, ಆರೋಗ್ಯ ಇಲಾಖೆಯ ಆಧ್ಯತೆಗಳಿಗೆ ಸ್ಪಂದಿಸುವುದು, ಪೊಲೀಸರು ತೆಗೆದುಕೊಳ್ಳುವ ಕ್ರಮಗಳ ಜತೆಗೆ ಕೈಜೋಡಿಸುವುದು ಅಗತ್ಯವಾಗಿ ನಾವೆಲ್ಲರೂ ಮಾಡಬೇಕಿರುವ ಬಹುಮುಖ್ಯ ಕೆಲಸ. ಕರೋನಾದ ನಿಯಮಾವಳಿಗಳ ಪಾಲನೆ ಜನತೆ. ಈ ವರ್ಷದಲ್ಲಿ ಕರೋನಾ ದಿಂದ ಸಂಕಷ್ಟಕ್ಕೀಡಾಗಿ, ಕೆಲಸ ಕಳೆದುಕೊಂಡವರು, ಊಟವಿಲ್ಲದೆ ನರಳು ವರು, ಕರೋನಾದ ಕರಿನೆರಳನ್ನು ಹತ್ತಿರದಿಂದ ಕಂಡವರೆಲ್ಲ ಇದ್ದಾರೆ.
ಅವರಿ ಗೆಲ್ಲ ನಾವು ನಮ್ಮ ಕೈಲಾದ ಸಹಾಯ ಮಾಡುವ ದೃಢ ಸಂಕಲ್ಪ ಮಾಡಬೇಕಿದೆ. ಕರೋನಾ ಸೋಂಕು ತಗಲುತ್ತಿದ್ದಂತೆ ಅನೇಕರು ಮಾನಸಿಕವಾಗಿ ಜರ್ಜರಿತರಾಗುತ್ತಾರೆ. ಅದರ ಪರಿಣಾಮಗಳಿಗೆ ಪರಿತಪಿಸುವ ಸ್ಥಿತಿಯನ್ನು ತಲುಪುತ್ತಾರೆ. ಅಂತಹವರಿಗೆ ನಾವಿದ್ದೇವೆ ಎಂಬ ಧೈರ್ಯದ ಮಾತುಗಳ ಮೂಲಕ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ.
ಖಿನ್ನತೆಗೆ ಒಳಗಾಗಿ ಕೆಟ್ಟ ಯೋಚನೆಗಳನ್ನಿಮಾಡುವ ಅನನುಭವಿಗಳಿಗೆ ಜೀವನ ಪಾಠದ ಬಗ್ಗೆ ಮಾರ್ಗದರ್ಶನ ಮಾಡುವ, ಕರೋನಾ ಫೋಬಿಯಾಗೆ ಒಳಗಾಗುವ ಹಿರಿಯರಿಗೆ ಕರೋನಾದ ಬಗ್ಗೆ ಇರುವ ಮಿಥ್ಯಗಳ ಬಗ್ಗೆ ತಿಳವಳಿಕೆ ನೀಡುವ, ಸೋಂಕಿನ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾವೆಲ್ಲರೂ ಅದೆಷ್ಟು ಸಾಧ್ಯವೋ ಅಷ್ಟು ಜನರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಶ್ರಮಿಸಬಹುದು. ಇದೆಲ್ಲದರ ಜತೆಗೆ, ಕರೋನಾ ಸಂಕಷ್ಟದ ಕಾಲದಲ್ಲಿ ಒಂದಷ್ಟು ಒಳ್ಳೆಯ ಪುಸ್ತಕ ಓದುವ, ಸಂಗೀತ ಕೇಳುವಹವ್ಯಾಸ ಬೆಳೆಸಿಕೊಳ್ಳುವುದು, ಸಕಾರಾತ್ಮಕ ಚಿಂತನೆಗಳ ಮೂಲಕ ಸಮಾಜ ಮುಖಿ ಚಿಂತನೆಗಳಲ್ಲಿ ತೊಡಗಿಸಿಕೊಂಡು ಹೆಜ್ಜೆಗಳನ್ನಿಡು ವುದೇ ೨೦೨೨ ರಲ್ಲಿ ನಾವೆಲ್ಲರೂ ಮಾಡಬೇಕಿರುವ ಪ್ರತಮ ಸಂಕಲ್ಪ.