ಲಾಕಡೌನ್ ಬದಲು ದೀರ್ಘಕಾಲೀನ ಪರಿಣಾಮಕಾರಿ ಶಿಸ್ತು ಇಂದಿನ ಅಗತ್ಯ
ದೇಶದಲ್ಲಿ ಕರೊನಾ ಸಾಂಕ್ರಾಮಿಕ ತಡೆಯುವ ನಿಟ್ಟಿನಲ್ಲಿ ಸಾಕಷ್ಟು ಸರ್ಕಸ್ ಎರಡು ವರ್ಷಗಳಿಂದ ನಡೆಯುತ್ತಲೇ ಇದೆ. ದೇಸಿ ವಿಜ್ಞಾನಿಗಳ ಪರಿಶ್ರಮದಫಲವಾಗಿ ಲಸಿಕೆಗಳೂ ಸಿಕ್ಕು ದೇಶದ ಒಟ್ಟು ಜನಸಂಖ್ಯೆಯ ಶೇ.90ರಷ್ಟು ಅದನ್ನು ನೀಡಿದ್ದೂ ಆಗಿದೆ.
ವಿಶ್ವ ಮಟ್ಟದಲ್ಲಿ ಇದು ಸಾಧನೆ. ಜನರ ಆರೋಗ್ಯ ವೃದ್ಧಿಯೊಂದಿಗೆ, ಜೀವರಕ್ಷಣೆಯ ಇಂಥ ಕ್ರಮಗಳು ಸಾರ್ವಕಾಲಿಕ ಶ್ರೇಷ್ಠ. ಈಗಾಗಲೆ ಬೃಹತ್ ಲಸಿಕಾ ಅಭಿಯಾನವು ಕೊನೆ ಹಂತಕ್ಕೆ ತಲುಪಿದ್ದು, ಸದ್ಯ 15 ರಿಂದ 18ರ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಜನರು ಇನ್ನು ಭಯವಿಲ್ಲ ಎಂದು ನಿಟ್ಟುಸಿರು ಬಿಟ್ಟು ನೆಮ್ಮದಿಯ ಬದುಕು ಕಟ್ಟಿಕೊಳ್ಳುವತ್ತ ಹೊರಟಿದ್ದಾಗಲೇ ಸಾಂಕ್ರಾಮಿಕದ ಮೂರನೇ ಅಲೆಯ ಭೀತಿ ಎಡೆ ಮನೆಮಾಡಿದೆ. ಕೊರೊನಾಕ್ಕಿಂತಲೂ, ಸಂತಸದ ಬದುಕಿಗೆ ಕಂಟಕದ ಮಗ್ಗಲು ಮುಳ್ಳಾಗಿ ಕಾಡುತ್ತಿರುವುದು ಲಾಕಡೌನ್ ಎಂಬ ಗುಮ್ಮ. ಈ ಹಿನ್ನೆಲೆಯಲ್ಲಿ ಜನ ಲಸಿಕೆ ಅಭಿಯಾನದ ಮೇಲೂ ನಂಬಿಕೆ ಕಳೆದುಕೊಳ್ಳುವ ಅಪಾಯಗಳು ಹೆಚ್ಚಿದೆ.
ಹೀಗಾದಲ್ಲಿ ಒಂದಿಡೀ ದೇಶದ ಎರಡು ವರ್ಷಗಳ ಪರಿಶ್ರಮ ನೀರು ಪಾಲಾಗುವ ಅಪಾಯಗಳಿವೆ. ಸಾಂಕ್ರಾಮಿಕ ಕ್ಕಿಂತ ಜೀವನ ನಿರ್ವಹಣೆಗೆ ಎದುರಾಗಿರುವ ಸವಾಲು, ಸಾಮಾನ್ಯ ಬದುಕಿಗೆ ಕಂಟಕವಾಗುತ್ತಿರುವ ನಿರ್ಬಂಧ, ನೈಟ್ ಕರ್ಪ್ಯೂ, ಮಿನಿ ಲಾಕಡೌಡ್, ಲಾಕಡೌನ ಇತ್ಯಾದಿಗಳು ಇಡೀ ವ್ಯವಸ್ಥೆಯನ್ನೇ ಬುಡ ಮೇಲು ಮಾಡು ತ್ತಿದೆ. ಎಲ್ಲೋ ಒಂದು ಕಡೆ ಸರಕಾರ ಸೇರದಿಂತೆ ಎಲ್ಲರೂ ವಿನಾಶಕಾರಿ ವೈರಸ್‌ನ ನಿಯಂತ್ರಣ ಹಾಗೂ ಪರಿಸ್ಥಿತಿ ನಿರ್ವಹಣೆಯಲ್ಲಿ ಎಡವಿದ್ದು ಸ್ಪಷ್ಟ. ಯಾರೊಬ್ಬರಿಗೂ ವೈರಸ್‌ನ ಗುಣ ಸ್ವಭಾವಗಳ ಸ್ಪಷ್ಟತೆ ಇಲ್ಲದ್ದು ಬಹುತೇಕ ಸನ್ನಿವೇಶಕ್ಕೆ ಕಾರಣವಾಗುತ್ತಿದೆ.
ಜನರಂತೆ ಸರಕಾರವೂ ದೀರ್ಘಕಾಲೀನ ಶೀಸ್ತು, ಮಾರ್ಗಸೂಚಿ ಪಾಲನೆಯಲ್ಲಿ ಅಶಿಸ್ತು, ಬೇಜವಾಬ್ದಾರಿ ಮೆರೆಯುತ್ತಿರುವುದನ್ನು ಒಪ್ಪಿಕೊಳ್ಳಲೇಬೇಕು. ಮತ್ತೆಮತ್ತೆ ಸಾಂಕ್ರಮಿಕ ದಿನದಿಂದ ದಿನಕ್ಕೆ ಹೆಚ್ಚಾಗಿ ಸಮುದಾಯಕ್ಕೆ ಹರಡುತ್ತಿರುವುದು ಕಳವಳಕಾರಿ. ಈಗೆಲ್ಲ ಕಠಿಣ ನಿರ್ಬಂಧಗಳ ಮಾತಾಡುವ ಸರಕಾರಸೋಂಕು ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿದ್ದಂತೆ ವರಸೆ ಬದಲಾಯಿಸುವುದು ಏಕೆ? ಈವರೆಗೆ ಯಾವ ಸಾಂಕ್ರಾಮಿಕ ಹರಡುವಿಕೆಯನ್ನೂ ತಡೆದಿಲ್ಲವೇ? ಸಾಮಾಜಿಕ ಜಾಗೃತಿಯ ಬಗ್ಗೆ ಸ್ಪಷ್ಟವಾದ ಚಿಂತನೆ, ಯೋಚನೆ ಇಲ್ಲದಿರುವುದು ವಿಪರ್ಯಾಸವೇ ಸರಿ.
ಮತ್ತೆ ಲಾಕಡೌನ್, ಕರ್ಪ್ಯೂಗಳಂಥ ತಾತ್ಕಾಲಿಕ ಕ್ರಮಗಳ ಬದಲಿಗೆ ಶಾಶ್ವತ, ಪರಿಣಾಮಕಾರಿ ಕ್ರಮಗಳ ಬಗ್ಗೆ ತಜ್ಞರ ಜತೆ ಸಮಾಲೋಚಿಸಲು ಮುಂದಾಗ ಬೇಕಿದೆ. ಕ್ಷಣಕ್ಕೊಂದು, ದಿನಕ್ಕೊಂದು ಮಾರ್ಗಸೂಚಿ, ನೀತಿಗಳ ಬದಲು ದೀರ್ಘಕಾಲೀನ ಶಿಸ್ತು ಮೂಡುವಂತಾಗಬೇಕು