ಎತ್ತ ಸಾಗುತ್ತಿದೆ ಹಿಂದೂ ಮಹಾಸಭಾ?
ದೇಶದಲ್ಲಿ ಎಡೆ ಭಾನುವಾರ ಮಹಾತ್ಮ ಗಾಂಧಿ ಅವರ ಪುಣ್ಯತಿಥಿಯನ್ನು ಆಚರಿಸಿ ಬಾಪುವನ್ನು ಸ್ಮರಿಸಿಕೊಂಡಿದ. ಆದರೆ ಹಿಂದೂ ಮಹಾಸಭಾ ಸಂಘವುಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ‘ಗೋಡ್ಸೆ-ಆಪ್ಟೆ ಸ್ಮೃತಿ ದಿನ’ ಆಚರಿಸುವ ಮೂಲಕ ಮಹಾತ್ಮನ ಹತ್ಯೆಕೋರ ರಾದ ನಾಥೂರಾಮ್ ಗೋಡ್ಸೆ ಮತ್ತು ಸಹ ಆರೋಪಿ ನಾರಾಯಣ ಆಪ್ಟೆಗೆ ಶ್ರದ್ಧಾಂಜಲಿ ಸಲ್ಲಿಸಿದೆ.
1948ರ ಜನವರಿ 30 ರಂದು ಗೋಡ್ಸೆ ಮತ್ತು ಆಪ್ಟೆ ಅವರನ್ನು ಬಂಧಿಸಿದ್ದಕ್ಕಾಗಿ ವಿರೋಧದ ರೂಪದಲ್ಲಿ ಜನವರಿ 30 ಅನ್ನು ‘ಗೋಡ್ಸೆ-ಆಪ್ಟೆ ಸ್ಮೃತಿ ದಿನ’ ಎಂದು ಆಚರಿಸುತ್ತಿದ್ದೇವೆ ಎಂದೂ ಘೋಷಿಸಿದೆ. ಭಾರತದ ಸ್ವಾತಂತ್ರ್ಯಕ್ಕೋಸ್ಕರ ಪ್ರಾಣ ತ್ಯಾಗ ಮಾಡಿದ ಹೋರಾಟಗಾರರ ಸ್ಮರಣೆಗಾಗಿ ದೇಶದಾದ್ಯಂತ ಹುತಾತ್ಮರ ದಿನ ಆಚರಿಸುವ ದಿನವೇ ಇಂತಹ ಆಚರಣೆಯೊಂದು ನಡೆದಿರುವುದು ಭಾವೈಕ್ಯತೆಗೆ ಧಕ್ಕೆ ತರುವಂಥದ್ದು. ಈ ದೇಶಕ್ಕೆ ಸ್ವಾತಂತ್ರ್ಯ ಸುಲಭವಾಗಿ ದೊರಕಿಲ್ಲ. ಆ ಹೋರಾಟದ ಹಾದಿಯಲ್ಲಿ ಪ್ರಾಣ ಕಳೆದುಕೊಂಡವರ ಲೆಕ್ಕವಿಲ್ಲ. ಮಹಾತ್ಮ ಗಾಂಽ ಎಂಬ ಒಬ್ಬ ವ್ಯಕ್ತಿ ಬಂದು ಶಾಂತಿಯ ಮಂತ್ರ ಪಠಿಸದಿದ್ದರೆ ಇನ್ನೂ ಅದೆಷ್ಟು ಪ್ರಾಣಬಲಿಯಾಗುತ್ತಿದ್ದವು ಎಂಬುದು ಉಹೆಗೂ ನಿಲುಕದ್ದು.
ಸತ್ಯ, ಅಹಿಂಸೆ ಮತ್ತು ಶಾಂತಿಯಿಂದಲೇ ದೇಶಕ್ಕೆ ಸ್ವಾತಂತ್ರ್ಯ ಪಡೆಯುವ ತಮ್ಮ ಗುರಿಯನ್ನು ಛಲ ಬಿಡದೇ ಸಾಧಿಸಿದ ಮಹಾತ್ಮ ಗಾಂಧೀಜಿಯವರ ಸಿದ್ಧಾಂತಗಳು ಭಾರತದ ಪ್ರಜಾತಂತ್ರ ವ್ಯವಸ್ಥೆಯ ಆಧಾರಸ್ತಂಭ ವಾಗಿವೆ. ತಮ್ಮ ಹೋರಾಟದ ಹಾದಿಯಲ್ಲಿ ಎಷ್ಟೇ ಸಂಕಷ್ಟಗಳು ಬಂದರೂ ಸತ್ಯ, ಅಹಿಂಸೆ ಮತ್ತು ಶಾಂತಿಯ ಸಿದ್ಧಾಂತವನ್ನು ಅವರು ಎಂದೂ ಬಿಟ್ಟುಕೊಡಲಿಲ್ಲ. ಆದುದರಿಂದಲೇ ಕೇವಲ ಸೈನಿಕರಿಗೆ, ಖಡ್ಗ, ಕತ್ತಿ ಹಿಡಿಯುವವರಿಗೆ ಮಾತ್ರ ಸೀಮಿತವಾಗಿದ್ದ ಹೋರಾಟಗಳಲ್ಲಿ ಜನಸಾಮಾನ್ಯರೂ ಭಾಗವಹಿಸುವಂತಾಯಿತು, ಈ ದೇಶಕ್ಕೆ ಸ್ವಾತಂತ್ಯ್ರವೂ ಲಭಿಸಿತು.
ಆದರೆ ಇಂದು ಗಾಂಽಜೀ ಅವರ ಬಗ್ಗೆ ಸುಳ್ಳುಗಳನ್ನು ಬಿತ್ತುವ ಮೂಲಕ ದ್ವೇಷ ಭಾವನೆ ಬೆಳೆಯುವಂತೆ ಮಾಡುತ್ತಿರುವುದು ಅಕ್ಷ್ಯಮ್ಯ. ರಾಮಕೃಷ್ಣ ಪರಮಹಂಸ, ಈಶ್ವರಚಂದ್ರ ವಿದ್ಯಾಸಾಗರ ಅವರು ಹಿಂದುತ್ವದ ಹೆಸರಿನಲ್ಲಿ ಸಾಕಷ್ಟು ಸಮಾಜ ಸುಧಾರಣೆ ಕೆಲಸಗಳನ್ನು ಮಾಡಿದ್ದಾರೆ. ಅಂತಹವರ ಆದರ್ಶ, ಸಿದ್ಧಾಂತ ಗಳಲ್ಲೇ ಮುನ್ನಡೆಯಬೇಕಾಗಿದ್ದ ಹಿಂದೂ ಮಹಾಸಭಾ ಸಂಘವು ಇಂದು ಎತ್ತ ಸಾಗುತ್ತಿದೆ?