ತೈಲ ಬೆಲೆ ಏರಿಕೆಯಾಗದಂತೆ ಕ್ರಮ ವಹಿಸಿ
ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರವಾದಾಗ ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಏರಿಕೆಗೆ ತಡೆ ಹಾಕಲಾಗಿತ್ತು. ಈಗ ಮತದಾನ ಪ್ರಕ್ರಿಯೆಯು ಪೂರ್ಣಗೊಂಡಿದ್ದು, ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯುಬಹುತೇಕ ಖಚಿತ ಎನ್ನಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಆಗಿರುವ ಹೆಚ್ಚಳವನ್ನು ಗಮನಿಸಿದರೆ, ದೇಶಿ ಮಾರುಕಟ್ಟೆಯಲ್ಲಿ ಪೆಟ್ರೋಲ, ಡೀಸೆಲ್ ಬೆಲೆಯು ಹಂತ ಹಂತವಾಗಿ ಲೀಟರಿಗೆ ? ೧೨ರವರೆಗೆ ಹೆಚ್ಚಳ ಆಗಬಹುದು ಎಂದು ಮಾರುಕಟ್ಟೆ ತಜ್ಞರುಅಂದಾಜು ಮಾಡಿzರೆ. ಪೆಟ್ರೋಲ, ಡೀಸೆಲ್ ಬೆಲೆಯಲ್ಲಿ ಆಗುವ ಏರಿಕೆಯು ನಿತ್ಯ ಬಳಸುವ ಎಲ್ಲ ವಸ್ತುಗಳ ಬೆಲೆಯಲ್ಲಿಯೂ ಪ್ರತಿ-ಲನ ಆಗುವುದು ಸಹಜ. ಕೋವಿಡ್‌ನಿಂದ ಚೇತರಿಸಿಕೊಳ್ಳದ ಜನಸಾಮಾನ್ಯರ ಬದುಕಿನ ಮೇಲೆ ಈ ಬೆಲೆ ಏರಿಕೆ ಬರೆ ಎಳೆಯುವುದು ಖಚಿತ.ಇನ್ನೊಂದೆಡೆ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮವಾಗಿ ಸೂರ್ಯಕಾಂತಿ ಅಡುಗೆ ಎಣ್ಣೆ ಬೆಲೆಯು ಗಗನಮುಖಿಯಾಗಿ ನಿಂತಿದೆ.
ಭಾರತ ತನ್ನ ಅಗತ್ಯದ ಸೂರ್ಯಕಾಂತಿ ಎಣ್ಣೆ ಪೈಕಿ ಸರಿಸುಮಾರು ಶೇ.೮೦ರಷ್ಟನ್ನು ಉಕ್ರೇನ್‌ನಿಂದ ಆಮದು ಮಾಡಿಕೊಳ್ಳುತ್ತಿದೆ. ಅಲ್ಲಿ ಯುದ್ಧದ ಪರಿಣಾಮವಾಗಿ ಎಣ್ಣೆ ಗಿರಣಿಗಳು ಕೆಲಸ ಸ್ಥಗಿತ ಮಾಡಿದ್ದು, ಸೂರ್ಯಕಾಂತಿ ಎಣ್ಣೆಯನ್ನು ಹೊತ್ತ ಹಡಗುಗಳು ಅಲ್ಲಿಂದ ಹೊರಡುತ್ತಿಲ್ಲ. ಇದು ಭಾರತದಲ್ಲಿ ಪೂರೈಕೆ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಉಂಟು ಮಾಡಿದೆ. ಲೀಟರ್ ಸೂರ್ಯಕಾಂತಿ ಎಣ್ಣೆಯು ಈಗಾಗಲೇ ? ೪೦ರವರೆಗೆ ಹೆಚ್ಚಳ ಆಗಿದೆ. ಸಗಟು ವ್ಯಾಪಾರಿಗಳು ಅಡುಗೆ ಎಣ್ಣೆಯಂತಹ ಅಗತ್ಯ ವಸ್ತುಗಳನ್ನು ಅಕ್ರಮವಾಗಿ ದಾಸ್ತಾನು ಇರಿಸಿ, ಮಾರುಕಟ್ಟೆಯಲ್ಲಿ ಅವುಗಳ ಕೃತಕ ಅಭಾವ ಸೃಷ್ಟಿಸಿ, ಬೆಲೆಯನ್ನು ಹೆಚ್ಚಿಸುವ ತಂತ್ರದ ಮೊರೆಹೋಗುವ ಸಾಧ್ಯತೆ ಇರುತ್ತದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳುವ ಶಕ್ತಿ ಇರುವುದು ಸರಕಾರಗಳಿಗೆ ಮಾತ್ರ.
ಆ ಕೆಲಸ ಆಳುವವರಿಂದ ಈಗ ಆಗಬೇಕು. ಅಲ್ಲದೆ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಮೇಲಿನ ಎಕ್ಸೈಸ್ ಸುಂಕ ಹಾಗೂ ಮೌಲ್ಯವಽತ ತೆರಿಗೆ ಪ್ರಮಾಣವನ್ನು ತಗ್ಗಿಸಿ ಅವುಗಳ ದೇಶಿ ಮಾರುಕಟ್ಟೆ ಬೆಲೆಯು ವಿಪರೀತದ ಮಟ್ಟ ತಲುಪದಂತೆ ನೋಡಿಕೊಳ್ಳಬೇಕಿದೆ