ಏನು ಮಾಡಿದರೆ ಜನಸಂಖ್ಯೆ ನಿಯಂತ್ರಣಕ್ಕೆ ಬಂದೀತು?
‘ರಾಜ್ಯದಲ್ಲಿ ಎರಡು ಮಕ್ಕಳಿದ್ದವರಿಗೆ ಮಾತ್ರ ಸರಕಾರದ ಸೌಲಭ್ಯಗಳನ್ನು ನೀಡುವ ಬಗ್ಗೆ ರಾಜ್ಯ ಸರಕಾರ ಅಗತ್ಯ ನಿಯಮಗಳನ್ನು ರೂಪಿಸಬೇಕು’ ಸೋಮವಾರದ ಕಲಾಪದಲ್ಲಿ ಹೀಗೆ ಹೇಳಿದ್ದು ಶಾಸಕಿ ಭಾರತಿ ಶೆಟ್ಟಿ. ಸದನದಲ್ಲಿ ಈ ವಿಚಾರದ ಬಗ್ಗೆ ಬಹಳ ಹೊತ್ತುಚರ್ಚೆಯಾಗಿಲ್ಲವಾದರೂ ಸಾರ್ವಜನಿಕ ವಲಯದಲ್ಲಿ ಸದ್ದು ಮಾಡುತ್ತಿದೆ.
ಈಗಾಗಲೇ ನಾವು ಕುಟುಂಬ ಕಲ್ಯಾಣ ಯೋಜನೆಯನ್ನು ಜಾರಿಗೆ ತಂದಿದ್ದೇವೆ. ಆ ಪ್ರಕಾರ ಒಂದು ಕುಟುಂಬಕ್ಕೆ ಎರಡಕ್ಕಿಂತ ಹೆಚ್ಚು ಮಕ್ಕಳು ಇರಬಾರದು ಎನ್ನಲಾಗಿದೆ. ಆದರೆ ಇದು ಸಮರ್ಪಕವಾಗಿ ಅನುಷ್ಠಾನವಾಗುತ್ತಿದೆಯಾ? ಖಂಡಿತ ಇಲ್ಲ. ಹಾಗಾದರೆ ಏನು ಮಾಡಿದರೆ ಜನಸಂಖ್ಯೆ ನಿಯಂತ್ರಣವಾಗುತ್ತದೆ? ಎಂಬ ಪ್ರಶ್ನೆಗೆ ತಕ್ಷಣ ಉತ್ತರ ಹುಡುಕುವುದು ಕಷ್ಟ. ಶ್ರೀಮಂತರು, ಉದ್ಯೋಗಿಗಳು ಒಂದೇ ಮಗು ಸಾಕೆಂಬ ತೀರ್ಮಾನ ಮಾಡಿಕೊಳ್ಳುತ್ತಿದ್ದಾರೆ.
ಇನ್ನು ಕೆಲವರು ಉದ್ಯೋಗದಲ್ಲಿರುವ ದಂಪತಿಗಳು ಮಕ್ಕಳನ್ನು ನೋಡಿಕೊಂಡು ಉದ್ಯೋಗ ಮಾಡಲಿಕ್ಕಾಗಲ್ಲ ಎಂಬ ಕಾರಣಕ್ಕೆ ಒಂದೇ ಮಗು ಸಾಕೆಂಬ ತೀರ್ಮಾನಕ್ಕೆ ಬರುತ್ತಾರೆ. ಆದರೆ ತೀರಾ ಬಡತನದಲ್ಲಿರುವ ಮಕ್ಕಳನ್ನು ಸಾಕುವುದೇ ಕಷ್ಟ ಎನ್ನು ವವರೇ ಇವತ್ತು ಮಕ್ಕಳನ್ನು ಹೆಚ್ಚು ಹೆರುತ್ತಿದ್ದಾರೆ. ‘ಮಕ್ಕಳು ದೇವರು ಕೊಟ್ಟಿದ್ದು ಸಾಕಿದರಾಯಿತು’ ಎಂಬ ಅಭಿಪ್ರಾಯ ಹೊಂದಿರುವ ಅವರಿಗೆ ಸಂತಾನದ ನಿಯಂತ್ರ ಣದ ಅರಿವು ಮೂಡಿಸುವ ಕೆಲಸವಾಗಬೇಕಾಗಿದೆ.
ಜನಸಂಖ್ಯೆಯಿಂದ ಉಂಟಾಗುವ ವಿವಿಧ ಸಮಸ್ಯೆಗಳ ಕುರಿತು ಗಮನ ಸೆಳೆಯುವ ಕೆಲಸವೂ ಆಗಬೇಕಿದೆ. ಸಮಾಜದಲ್ಲಿ ಲಿಂಗ ಪತ್ತೆ ಕ್ರಮದಿಂದ, ಹೆಣ್ಣುಮಕ್ಕಳ ಜನನ ನಿಯಂತ್ರಣದಿಂದ ಸಮಾಜದಲ್ಲಿ ಗಂಡು ಹೆಣ್ಣಿನ ಅನು ಪಾತದಲ್ಲಿ ವ್ಯತ್ಯಾಸ ಕಾಣುವಂತಾಗಿದೆ.
ನಮ್ಮಲ್ಲಿ ಇನ್ನೂ ತುಂಬಿ ತುಳುಕುತ್ತಿರುವ ಬಡತನ, ಅಜ್ಞಾನ, ಮೌಢ್ಯಯುತ ಧಾರ್ಮಿಕ ಶ್ರದ್ಧೆ ಸೇರಿದಂತೆ ಹಲವಾರು ಕಾರಣಗಳಿಂದ ಜನಸಂಖ್ಯೆ ನಿರಂತರ ಏರುಮುಖದತ್ತ ಸಾಗುತ್ತಿದೆ. ಇದರಿಂದ ಉದ್ಯೋಗ ಸಮಸ್ಯೆ, ಆಹಾರ ಸಮಸ್ಯೆ, ಮೂಲಭೂತ ಸೌಲಭ್ಯಗಳ ಸಮಸ್ಯೆ ಎದುರಿಸುವಂತಾಗಿದೆ.
ಎಲ್ಲಾ ಒಂದು ಕಡೆಯಿಂದ ನೋಡಿದರೆ ಮಾನವೀಯ ಸಂಬಂಧಗಳು ದೂರವಾಗುತ್ತಿವೆ. ಜಾತಿ ವ್ಯವಸ್ಥೆ, ಲಾಭದ ರಾಜಕೀಯ, ಬಡವಬಲ್ಲಿದನೆಂಬ ಬೇಧ, ಆಸ್ತಿ ಮಾಡುವ ಹಂಬಲ, ಕೂಡಿ ಡುವ ಹುಚ್ಚು, ಹೀಗೆ ಅಗತ್ಯ ಸಂಪನ್ಮೂಲಗಳು ಕೂಡ ಸಮರ್ಪಕ ಬಳಕೆ ಯಾಗದೆಕೊಳೆಯುತ್ತಿದೆ. ಇದಕ್ಕೆಲ್ಲ ಕಾರಣ ಜನಸಂಖ್ಯೆಯೇ ಎಂಬುದನ್ನು ಪ್ರಾಥಮಿಕ ಶಾಲಾ ಹಂತದಲ್ಲೇ ಅರಿವು ಮೂಡಿಸಿದರೆ ಜನಸಂಖ್ಯಾಸೋಟಕ ತಡೆಯಲು ಸಾಧ್ಯವಾಗಬಹುದೇನೋ?