ಶ್ರೀಶೈಲ ಘರ್ಷಣೆ: ಕ್ರಮ ವಹಿಸಿ
ಆಂಧ್ರಪ್ರದೇಶದ ಕರ್ನೂಲ್ಜಿಲ್ಲೆಯಪ್ರಸಿದ್ಧ ಯಾತ್ರಾ ಸ್ಥಳ ಶ್ರೀಶೈಲದಲ್ಲಿ ಬುಧವಾರ ತಡರಾತ್ರಿ ವ್ಯಾಪಕ ಹಿಂಸಾಚಾರ ನಡೆದಿದೆ.
ಕರ್ನಾಟಕದಿಂದ ತೆರಳಿದ್ದ ಪಾದಯಾತ್ರಿಗಳು ಹಾಗೂ ಸ್ಥಳೀಯ ವ್ಯಾಪಾರಸ್ಥರ ನಡುವೆ ಘರ್ಷಣೆ ನಡೆದಿದ್ದು, ಈ ವೇಳೆ ಬಾಗಲಕೋಟೆಜಿಲ್ಲೆಬೀಳಗಿ ತಾಲ್ಲೂಕಿನ ಜಾನಮಟ್ಟಿ ನಿವಾಸಿ ಶ್ರೀಶೈಲ ವಾರಿಮಠ ಎಂಬುವವರಿಗೆ ಗಂಭೀರ ಗಾಯವಾಗಿದೆ. ಈ ಘರ್ಷಣೆಯಲ್ಲಿ ಕರ್ನಾಟಕ ದಿಂದ ತೆರಳಿದ್ದ ೨೦೦ಕ್ಕೂ ಹೆಚ್ಚು ವಾಹನಗಳನ್ನು ಧ್ವಂಸ ಮಾಡಲಾಗಿದೆ. ಪೊಲೀಸ್ ಬ್ಯಾರಿಕೇಡ್‌ಗೆ ಬೆಂಕಿ ಹಚ್ಚಲಾಗಿದೆ. ಕರ್ನಾಟಕದ ಧ್ವಜವನ್ನು ಸುಟ್ಟು ಹಾಕಲಾ ಗಿದೆ. ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಬೆಲೆಗೆ ನೀರಿನ ಬಾಟಲಿ ಮಾರಾಟ ಮಾಡುತ್ತಿರುವು ದನ್ನು ಪಾದಯಾತ್ರಿ ಗಳು ಪ್ರಶ್ನಿಸಿರುವುದೇ ಜಗಳಕ್ಕೆ ಕಾರಣ ಎನ್ನಲಾಗಿದೆ.
ನಿಜಕ್ಕೂ ಇದು ಕ್ಷುಲ್ಲಕ ಕಾರಣವೆಂದೆನಿಸಿದರೂ ಆ ಭಾಗದಲ್ಲಿ ಪ್ರತಿ ವರ್ಷ ಇದೊಂದು ಗಂಭೀರ ವಿಷಯವಾಗಿದೆ. ಶ್ರೀಶೈಲಕ್ಕೆ ಹೋಗುವ ಪಾದಯಾತ್ರಿಗಳಿಗೆ ದಾರಿಯುದ್ದಕ್ಕೂ ಭಕ್ತರು ಊಟ, ವಸತಿ ವ್ಯವಸ್ಥೆಯನ್ನು ಧಾರಾಳವಾಗಿ ಮಾಡುತ್ತಾರೆ. ಆದರೆ ಎಲ್ಲೂ ಸಮರ್ಪಕವಾಗಿ ಕುಡಿಯುವ ನೀರಿನ ವ್ಯವಸ್ಥೆ ಇರುವುದಿಲ್ಲ. ವ್ಯವಸ್ಥೆ ಮಾಡಬೆಂಕೆದರೂ ಶಕ್ತರಿಲ್ಲ. ಬಿರು ಬಿಸಿಲಿನಲ್ಲಿ ನೂರಾರು ಕಿ.ಮೀ ನಡೆದ ಪಾದಯಾತ್ರಿ ಗಳಿಗೆ ನೀರಿನ ಅಗತ್ಯ ಎಷ್ಟಿರುತ್ತದೆ ಎಂಬುದು ಅಲ್ಲಿ ನಡೆದವರಿಗೇ ಗೊತ್ತು. ಹೀಗಾಗಿಯೇ ಆಂಧ್ರಪ್ರದೇಶದ ವ್ಯಾಪಾರಿಗಳು ಈ ನೀರಿನಲ್ಲೇ ಲಾಭ ಮಾಡಿಕೊಳ್ಳುವುದಕ್ಕಾಗಿ ಎಂಆರ್‌ಪಿ ದರಕ್ಕಿಂತ ದುಪ್ಪಟ್ಟು, ಮೂರು ಪಟ್ಟು ದರಕ್ಕೆ ಮಾರಾಟ ಮಾಡುತ್ತಾರೆ.
ಇದರ ಮೇಲೆ ಅಲ್ಲಿನ ಅಧಿಕಾರಿಗಳಿಂದ ಯಾವುದೇ ನಿಯಂತ್ರಣ ಇಲ್ಲದಿರುವುದಕ್ಕೇ ಇಂದು ಅಲ್ಲಿ ಈ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ವಾಗಿದೆ. ಆಂಧ್ರ ಸರಕಾರದ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಚಿಂತಿಸಿ, ಸೂಕ್ತ ಕ್ರಮವೊಂದನ್ನು ಕೈಗೊಳ್ಳಬೇಕಿದೆ. ಅಲ್ಲದೆ, ಅಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರ್ನಾಟಕದ ಗಡಿವರೆಗೂ ತಲುಪಿಸುವ ಕೆಲಸವನ್ನು ಮಾಡಬೇಕು. ಗಾಯಾಳುಗಳ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ಮುಂದೆ ಇಂತಹ ಘಟನೆಗಳು ಆಗದಂತೆ ಸೂಕ್ತ ಕ್ರಮ ವಹಿಸಬೇಕು. ಪಾದಯಾತ್ರಿಗಳ ಮೇಲೆ ಮಾರಣಾಂತಿಕ ವಾಗಿ ಹಲ್ಲೆ ಮಾಡಿದ ಪುಂಡರನ್ನು ಕೂಡಲೇ ಬಂಧಿಸಿ, ಸೂಕ್ತ ಶಿಕ್ಷೆ ಕೊಡಬೇಕು.