ಡೆಂಘೀ ತಡೆಗೆ ಸ್ವಚ್ಛತೆಯೊಂದೇ ಅಸ್ತ್ರ
ರಾಜ್ಯದಲ್ಲಿ ಈ ವರ್ಷ ಅಕಾಲಿಕ ಮಳೆಯಿಂದಾಗಿ ಡೇಂಘೇ ಪ್ರಕರಣಗಳು ಹೆಚ್ಚುತ್ತಿದ್ದು, ಕಳೆದ ಒಂದೂವರೆ ತಿಂಗಳಲ್ಲಿ ೪೬೧ ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಡೆಂಘೀ ಪ್ರಕರಣಗಳು ಪತ್ತೆಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿಯೇ ೩೦೦ಕ್ಕೂ ಅಧಿಕ ಮಂದಿ ಡೆಂಗಿ ಜ್ವರಕ್ಕೆ ಒಳಗಾಗಿzರೆ. ಡೆಂ ಪ್ರಕರಣಗಳ ಸಂಖ್ಯೆ ಮೂರು ಜಿಲ್ಲೆಗಳಲ್ಲಿ ಮೂರಂಕಿ, ೨೦ ಜಿಗಳಲ್ಲಿ ಎರಡಂಕಿಯಲ್ಲಿದೆ.
ಅದೃಷ್ಟವಶಾತ್ ಈ ವರ್ಷ ಈವರೆಗೂ ಯಾವುದೇ ಮರಣ ಪ್ರಕರಣ ವರದಿಯಾಗಿಲ್ಲ. ಇನ್ನೊಂದೆಡೆ ೨೫ ಜಿಲ್ಲೆಗಳಲ್ಲಿ ಚಿಕೂನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿದ್ದು, ೩೨೦ ಮಂದಿ ಈ ಜ್ವರಕ್ಕೆ ಒಳಗಾಗಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಮನೆಯ ಸುತ್ತಮುತ್ತಲಿನ ಘನತ್ಯಾಜ್ಯ ವಸ್ತುಗಳಲ್ಲಿ ಸಂಗ್ರಹವಾ ಗುವ ನೀರಿನಿಂದ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗಿ, ಆ ಸೊಳ್ಳೆಗಳ ಕಡಿತದಿಂದಲೇ ಡೆಂಘೀ ಮತ್ತು ಚಿಕೂನ್ ಗುನ್ಯಾ ಜ್ವರ ಬರುತ್ತದೆ.
ಮಳೆಗಾಲದ ಈ ದಿನಗಳಲ್ಲಿ ಮನೆಯ ಸುತ್ತಲಿನ ವಾತಾವರಣ ಸ್ವಚ್ಛವಾಗಿಟ್ಟುಕೊಳ್ಳುವ ಮೂಲಕ ಆರೋಗ್ಯದ ಕಾಳಜಿಯನ್ನು ಮಾಡಿಕೊಳ್ಳಬೇಕಿದೆ. ಡೆಂಘೀ ಲಕ್ಷಣಗಳಿದ್ದರೂ ಅನೇಕರು ಆರಂಭದಲ್ಲೇ ನಿರ್ಲಕ್ಷಿಸಿ ಅಪಾಯ ತಂದುಕೊಳ್ಳುತ್ತಾರೆ. ಸೊಳ್ಳೆಗಳು ಕಚ್ಚಿದ ತಕ್ಷಣ ವೈರಸ್ಸುಗಳನ್ನು ದೇಹಕ್ಕೆ ರವಾನಿಸುತ್ತವೆ. ಇದಾದ ಮೂರರಿಂದ ಹದಿನಾಲ್ಕು ದಿನಗಳ ಅವಧಿಯಲ್ಲಿ ತನ್ನ ಹೊಸ ಮನೆಯನ್ನು ವೀಕ್ಷಣೆಗೆ ತೊಡಗಿದಂತೆ ರೋಗಕಾರಕ ವೈರಸ್‌ಗಳು ಕಾಯುತ್ತವೆ. ಇಂತಹ ಸಮಯದಲ್ಲಿ ತನ್ನ ಪ್ರತಿರೂಪ ಸೃಷ್ಟಿಗೆ ಅಗತ್ಯ ವಾತಾವರಣ ಸಿಕ್ಕರಂತೂ ಅವಕ್ಕೆ ಉತ್ಸಾಹ ಜಾಸ್ತಿ.
ದೇಹದೊಳಗೆ ಶೀಘ್ರವಾಗಿ ಆಕ್ರಮಿಸಿ, ರೋಗವನ್ನು ತಡೆಯುವ ಪ್ರತಿರೋಧವನ್ನು ಗೆದ್ದು ತಮ್ಮ ಆಡಳಿತ ಸ್ಥಾಪಿಸಿ ಅಧಿಕಾರಕ್ಕೆ ಬಂದ ಕುರುಹುಗಳು ಎಂಬಂತೆ ಡೆಂಘೀ ಜ್ವರದ ಲಕ್ಷಣಗಳನ್ನು ವ್ಯಕ್ತಗೊಳಿಸುತ್ತವೆ. ದೇಹವು ಸ್ವಚ್ಛವಾಗಿದ್ದರೆ, ರೋಗ ನಿರೋಧವಿದ್ದರೆ, ಅಂತಹ ಸೋಂಕಿತ ಪ್ರದೇಶಕ್ಕೆ ಹೋಗಿ ಬಂದ ಮೇಲೆಕೆಲವು ಎಚ್ಚರಿಕೆಗಳನ್ನು ಕೈಗೊಂಡರೆ ಸೋಂಕು ಹಾಗೆಯೇ ಅಡಗಬಹುದು. ಆದ್ದರಿಂದ ಡೇಂ ತಡೆಗಟ್ಟಲು ಸ್ವಚ್ಛತೆಯೊಂದೇ ಅಸ್ತ್ರ ಎಂಬುದನ್ನು ಅರಿತು ಮಳೆಗಾಲ ಮುಗಿಯುವವರೆಗೂ ಸ್ವಚ್ಛತೆ ನಾವು ಮತ್ತು ನಾವು ವಾಸಿಸುವ ಸುತ್ತಲಿನ ಸ್ಥಳ ಸ್ವಚ್ಛವಾಗಿಟ್ಟುಕೊಳ್ಳಬೇಕಿದೆ.